ಅಥವಾ

ಒಟ್ಟು 51 ಕಡೆಗಳಲ್ಲಿ , 21 ವಚನಕಾರರು , 34 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಲ ಹಲವಾದಡೇನು ? ಉತ್ಪತ್ಯ ಸ್ಥಿತಿ ಲಯ ಒಂದೆ ಭೇದ. ಮಾತಿನ ರಚನೆಯ ಬೇಕಾದಂತೆ ನುಡಿದಡೇನು ? ಬಿಡುಮುಡಿಯಲ್ಲಿ ಎರಡನರಿಯಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಇನ್ನು ಅಖಂಡಮಹಾಜ್ಯೋತಿಪ್ರಣವದ ಜ್ಯೋತಿಸ್ವರೂಪದಲ್ಲಿ ಮಕಾರ ಉತ್ಪತ್ಯ. ಆ ಪ್ರಣವದ ಕುಂಡಲಾಕಾರದಲ್ಲಿ ಅಕಾರ ಉತ್ಪತ್ಯ. ಆ ಪ್ರಣವದ ತಾರಕಾಸ್ವರೂಪದಲ್ಲಿ ಉಕಾರ ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ಚಕ್ರಾತೀತಾಗಮೇ : ಶ್ರೀ ಮಹಾದೇವ ಉವಾಚ- ``ಓಂಕಾರಂ ಜ್ಯೋತಿರೂಪಂ ಚ ಮಕಾರಂ ಚ ಪ್ರಜಾಯತೇ | ಓಂಕಾರಂ ಕುಂಡಲಾಕಾರಂ ಅಕಾರಂ ಚ ಪ್ರಜಾಯತೇ || ಓಂಕಾರಂ ತಾರಕಾರೂಪೇ ಉಕಾರಂ ಚ ಪ್ರಜಾಯತೇ | ಇತ್ಯಕ್ಷರತ್ರಯಂ ದೇವಿ ಸ್ಥಾನಸ್ಥಾನೇಷು ಜಾಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಲಿಂಗವಿದ್ದು ಇದಿರಿಂಗೆ ಕೊಟ್ಟ ಕಾರಣ ಗುರುವಾದ. ಆ ಗುರು ಸನ್ಮತವಾಗಿ ಹರಸ್ವರೂಪವ ಮಾಡಲಾಗಿ ಜಂಗಮವಾದ. ಇಂತೀ ಲಿಂಗ ಬೀಜ ಅಂಕುರಿಸಿ ಎರಡಾಯಿತ್ತು. ತಾ ಕುರಿತು ಮೂರಾಯಿತ್ತು. ಮೂರು ಆರಾದ ಭೇದವ ಉಪಮಿಸಲಿಲ್ಲ. ವಿಶ್ವಮಯನಾಗಿ, ವಿಶ್ವಾಸಕ್ಕೆ ಒಡಲಾಗಿ, ಪ್ರಣವ ಬೀಜವಾಗಿ, ಉತ್ಪತ್ಯ ಲಯಕ್ಕೆ ಕರ್ತರ ಕೊಟ್ಟು, ಮಿಕ್ಕಾದ ತತ್ವಗಳಿಗೆ ಎಲ್ಲರಿಗೆ ಹಂಚಿ ಹಾಯಿಕಿ, ಅವು ಯಂತ್ರವಾಗಿ, ಯಂತ್ರವಾಹಕವಾಗಿ, ಜಲದಿಂದಾದ ಮಲವ ಮತ್ತೆ ಜಲ ತೊಳೆವಂತೆ, ನಿನ್ನ ಲೀಲೆಗೆ ನೀನೆ ಹಂಗಾದೆಯಲ್ಲ. ಅ[ಲ್ಲಿಗೆ] ಮಲವಾಗಿ ಎನ್ನಲ್ಲಿಗೆ ಅಮಲವಾಗಿ, ಪಾಶಬದ್ಧ ವಿರಹಿತನಾದ, ನಿಃಕಳಂಕ ಮಲ್ಲಿಕಾರ್ಜುನ.
--------------
ಮೋಳಿಗೆ ಮಾರಯ್ಯ
ತನು ಮೂರು ಆತ್ಮವಾರು ಜೀವವೆರಡು ಜ್ಞಾನ ಎಂಬತ್ತನಾಲ್ಕು ಲಕ್ಷ ಪರಮನೊಂದೆ ಭೇದ. ಇಂತೀ ತ್ರಿವಿಧ ತನು ವರ್ಣಂಗಳಲ್ಲಿ ವಿಶ್ವಮಯವಾಗಿ ಸರ್ವ ಜೀವಂಗಳೆಲ್ಲವೂ ತಮ್ಮ ನೆಲ ಹೊಲದಲ್ಲಿ ಆಹಾರ ವ್ಯವಹಾರ ವಿಷಯಂಗಳಿಂದ ಉತ್ಪತ್ಯ ಸ್ಥಿತಿ ಲಯಂಗಳಿಂದ ಕಲ್ಪಾಂತರಕ್ಕೊಳಗಾಗಿಪ್ಪುದು ಬ್ರಹ್ಮಾಂಡಪಿಂಡ. ಇಂತಿವ ಕಳೆದುಳಿದು ಜ್ಞಾನಪಿಂಡ ಉದಯವಾದಲ್ಲಿ ಸರ್ವ ಘಟಪಟಾದಿಗಳ ಸೋಂಕು ಸರ್ವ ಚೇತನದ ವರ್ಮ ಸರ್ವ ಜೀವದ ಕ್ಷುದೆ, ಸರ್ವಾಂತ್ಮಂಗಳಲ್ಲಿ ದಯ ಕ್ರೂರಮೃಗ ಅಹಿ ಚೋರ ಹಗೆ ಇಂತಿವು ಮುನಿದಲ್ಲಿ ಸಂತತ ಭೀತಿಯಿಲ್ಲದೆ ಸಂತೈಸಿಕೊಂಡು ಸರ್ವಾತ್ಮಕ್ಕೆ ಸಂತೋಷವ ಮಾಡುವುದೆ ಜ್ಞಾನ ಪಿಂಡೋದಯ. ಶಂಭುವಿನಿಂದಿತ್ತು ಸ್ವಯಂಭುವನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು
--------------
ತುರುಗಾಹಿ ರಾಮಣ್ಣ
-->