ಅಥವಾ

ಒಟ್ಟು 50 ಕಡೆಗಳಲ್ಲಿ , 5 ವಚನಕಾರರು , 32 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯೋನಿಯಲ್ಲಿ ಹುಟ್ಟಿ, ಯೋನಿಯನೆ ಬಯಸಿ, ಯೋನಿಯ ಮುಖಕೆ ಗುರಿಯಾಗಿ ಸತ್ತು ಸತ್ತು ಯೋನಿಯೆಂಬ ಗಾಣದಲ್ಲಿ ಹುಟ್ಟುತ್ತಿಪ್ಪುದು `ಶಿವ' ನಿಮ್ಮ ನೆನವ ಮರೆದ ಕಾರಣ. ಅದು ಎಂತೆಂದರೆ : ಸಾಕ್ಷಿ : ``ಇದಂ ಗರ್ಭಗತಂ ಶ್ರುತ್ವಾ ಯೋನಿಯಂತ್ರಪ್ರಪೀಡನಂ | ಜಾಯತೇ ವಾಯುನಾ ವೇತ್ತಿ ವಿಸ್ಮೃತೇ ವೈಷ್ಣವೇ ಶ್ರುತೇ ||'' ಎಂದುದಾಗಿ, ಸಂಸಾರ ವಿಷಯದ ಸರ್ಪನ ವಿಷ ತಲೆಗೇರಿ ಮುಂದುಗಾಣದೆ ಅರುಹಿರಿಯರೆಲ್ಲ ಭಂಗಬಡುತ್ತಿದ್ದರು- ನಿನ್ನನೆಂತು ಬಲ್ಲರಯ್ಯ ? ಸಂಸಾರವೆಂಬುದ ಮುಂದುಗೊಂಡು ನಿನ್ನ ಮರೆದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮಾನಸ ವಾಚಿಕ ಕಾಯಿಕದಲ್ಲಿ ಆಸೆಯನೆ ಮುಂದುಗೊಳಿಸಿದೆಯಯ್ಯಾ. ಅದು ಎಂತೆಂದರೆ : ಮನಸ್ಸು ನಿಮ್ಮ ನೆನೆಯದೆ ಅನ್ಯಕ್ಕೆ ಹರಿದು ಪರಧನ ಪರಸ್ತ್ರೀಯರಾಸೆಯನೆ ನೆನವುದು. ವಾಚಿಕ ನಿಮ್ಮ ಸ್ತೋತ್ರಿಸದೆ ಒಡಲಾಸೆಯನೆ ನುಡಿವುದು. ಕಾಯಿಕ ನಿಮ್ಮ ಮುಟ್ಟಿ ಪೂಜಿಸದೆ ಅನ್ಯವನಾಸೆಗೈದು ಮುಟ್ಟುತ್ತಿಪ್ಪುದು. ಇಂತೀ ಮಾನಸ ವಾಚಿಕ ಕಾಯಿಕವೆಂಬ ತ್ರಿಕರಣದಲ್ಲಿ ಆಸೆಯನೆ ಮುಂದುಗೊಂಡುಯಿಪ್ಪ ಮಾನವರು ನಿರಾಸಕ್ತನನೆತ್ತ ಬಲ್ಲರಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
-->