ಅಥವಾ

ಒಟ್ಟು 32 ಕಡೆಗಳಲ್ಲಿ , 19 ವಚನಕಾರರು , 32 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಕಾರನಿರಾಕಾರವಿಲ್ಲದಂದು, ಋತುವಡಗಿದ ಲಿಂಗವು, ನೆನವಂ ಬೆರೆಸಲು ಝೇಂಕಾರ ಪುಟ್ಟಿತ್ತು. ಆ ನೆನವೆ ಆತ್ಮನಂ ಬೆರೆಸಲು ಆಕಾಶ ಪುಟ್ಟಿತ್ತು. ಆ ನೆನವೆ ಮನವಂ ಬೆರೆಸಲು ವಾಯು ಪುಟ್ಟಿತ್ತು. ಆ ನೆನವೆ ಬುದ್ಭಿಯಂ ಬೆರೆಸಲು ತೇಜ ಪುಟ್ಟಿತ್ತು. ಆ ನೆನವೆ ಚಿತ್ತವಂ ಬೆರೆಸಲು ಅಪ್ಪು ಪುಟ್ಟಿತ್ತು. ಆ ನೆನವೆ ಪೃಥ್ವಿಯಂ ಬೆರೆಸಲು ಅಹಂಕಾರ ಪುಟ್ಟಿತ್ತು. ಆ ಅಹಂಕಾರವೇ ನಿವೃತ್ತಿ ಎನಿಸಿತ್ತು, ಚಿತ್ತವೆ ಪ್ರತಿಷೆ* ಎನಿಸಿತ್ತು, ಬುದ್ಧಿಯೇ ವಿದ್ಯೆಯೆನಿಸಿತ್ತು, ಮನವೇ ಶಾಂತಿಯೆನಿಸಿತ್ತು, ಆತ್ಮವೇ ಶಾಂತ್ಯತೀತವೆನಿಸಿತ್ತು. ಶಬ್ದದಲ್ಲಿ ಶರಣನಾದ, ಸ್ಪರುಶನದಲ್ಲಿ ಪ್ರಾಣಲಿಂಗಿಯಾದ, ರೂಪಿನಲ್ಲಿ ಪ್ರಸಾದಿಯಾದ, ರಸದಲ್ಲಿ ಮಹೇಶ್ವರನಾದ, ಗಂಧದಲ್ಲಿ ಭಕ್ತನಾದ-ಇದು ಅಂಗಸಂಬಂಧ. ಇನ್ನು ಇದಕ್ಕೆ ಲಿಂಗಸಂಬಂಧವು : ಶ್ರೋತ್ರದಲ್ಲಿ ಪ್ರಸಾದಲಿಂಗ, ತ್ವಕ್ಕಿನಲ್ಲಿ ಜಂಗಲಿಂಗ, ನೇತ್ರದಲ್ಲಿ ಶಿವಲಿಂಗ, ಜಿಹ್ವೆಯಲ್ಲಿ ಗುರುಲಿಂಗ, ಘ್ರಾಣದಲ್ಲಿ ಆಚಾರಲಿಂಗ. ಇಂತಪ್ಪ ಶರಣನು ಅಂಗಲಿಂಗಸಂಬಂಧವನೊಳಕೊಂಡು, ಚಿತ್ತ ಆಶ್ರಯದೊಳು ಕೂಡಿ ನಿಃಪ್ರಿಯವೆನಿಸಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಎಲೆ ದೇವಾ, ಏತಕ್ಕೆ ನುಡಿಯೆ ಎನ್ನೊಳು? ನಿನ್ನಯ ಚಿತ್ತವ ನೀಕರಿಸಿ ನುಡಿವರೆಂದೆ? ನಿನ್ನಯ ನೋವು ಎನ್ನೊಳು ನೀ ಮಾಡುವ ಮಾಟ ಅನೇಕ. ಕುಟಿಲ ಯೋನಿಯ ಸುತ್ತಿ ಮುತ್ತಿದ ಹರಿತದ ಪಾಶದ ಮಲ ನಿನ್ನಲ್ಲಿ ಅನೇಕರ ಕೊಲುವ ಪಾಶ ಕೈಯಲ್ಲಿ, ಭವ ವೇಷ ಅಂಗದಲ್ಲಿ. ಭಕ್ತರ ಕೊಲುವ ದೋಷಕ್ಕೆ ಅಂಜಿದೆಯಾ? ನಿನಗದು ನೀತಿ, ರುದ್ರನ ವೇಷಕ್ಕೆ ಸಹಜ. ಅದ ಬಿಟ್ಟಾಡು, ನೀಕರಿಸು. ಉಮಾಪತಿಯ ವೇಷವ ಬಿಟ್ಟು ಸ್ವಯಂಭುವಾಗು. ಅದ ಬಿಟ್ಟು ಇಚ್ಛೆಯಲ್ಲಿ ನಿಂದು, ನಿರ್ಮಾಯ ಮಲನಾಸ್ತಿಯಾಗಿ, ಮುಕುರ ಪ್ರತಿಬಿಂಬಿಸುವಂತೆ ಎನ್ನಿರವು ನಿನ್ನಲ್ಲಿ ತೋರುತ್ತದೆ. ಅದೇಕೆ? ನಿರ್ಮಾಯನಾದ ಕಾರಣ ನಿನ್ನಿರವು ಎನ್ನಲ್ಲಿ ಕೂರ್ತು, ದರ್ಪಣದ ಆಕಾರ ಬೆಳಗಿನಲ್ಲಿ ತೋರುವ ನಿರಾಕಾರ ಎರಡಕ್ಕೂ ರೂಪು ನಿರೂಪು ಉಭಯ ಬಿನ್ನವಿಲ್ಲದಂತೆ. ಎನ್ನಂಗವಂತಿರಲಿ ಮನವ ಒಡಗೂಡಿಕೊ. ಉರದ ಮಾತಿಂಗೆ ಮಾರನ ಕೊಂದ ಮಲತ್ರಯ ದೂರ, ಅನಾಗತ ಸಂಸಿದ್ಧ ಭೋಗಮಯ ನಯನಚರಣವಿರಾಜಿತ, ಜೀಮೂತ ಮೃತ ದಗ್ಧ ಸರ್ವವ್ಯಾಪಕ ನಾಶನ, ಸರ್ವ ಅಂತರ್ಗತ ವಿಮಲತರಂಗ, ಕರುಣಾಬ್ಧಿ ಪೂರ್ಣಚಂದ್ರ ವಿಲಾಸಿತ, ಒಡಗೂಡಿದ ಭಕ್ತರ ಚಿತ್ತದ ಸಾಕಾರ ಪುಂಜವೆ, ಸರ್ವಾತುರಂಗಳ ವಿರೋಧಿ, ಆಜಾತ, ಶಂಭು ಮಾರೇಶ್ವರಾ.
--------------
ನಗೆಯ ಮಾರಿತಂದೆ
-->