ಅಥವಾ

ಒಟ್ಟು 50 ಕಡೆಗಳಲ್ಲಿ , 16 ವಚನಕಾರರು , 38 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನು ಆ ಆದಿ ಮಕಾರಪ್ರಣವ, ಆದಿ ಅಕಾರಪ್ರಣವ, ಆದಿ ಉಕಾರಪ್ರಣವ-ಈ ಮೂರೂ ಪ್ರಣವಂಗಳು ಬೀಜಸಂಯುಕ್ತವಾಗಿ ಅಖಂಡ ಮಹದೋಂಕಾರವಾಯಿತ್ತು. ಅದೆಂತೆಂದಡೆ : ಆ ಆದಿ ಮಕಾರಪ್ರಣವ, ಆದಿ ಅಕಾರಪ್ರಣವ, ಆದಿ ಉಕಾರಪ್ರಣವ-ಈ ಮೂರೂ ಪ್ರಣವಂಗಳು ಬೀಜಾಕ್ಷರ. ಆದಿ ಮಕಾರವೇ ಆದಿ ಕಲಾಪ್ರಣವ, ಆದಿ ಅಕಾರವೆ ಆದಿ ನಾದಪ್ರಣವ. ಆದಿ ಉಕಾರವೆ ಆದಿ ಬಿಂದುಪ್ರಣವ. ಆದಿ ಮಕಾರಪ್ರಣವವೇ ಸರ್ವಾತ್ಮನು. ಆದಿ ಅಕಾರಪ್ರಣವವೇ ಪರಮಾತ್ಮನು. ಆದಿ ಉಕಾರಪ್ರಣವವೇ ಶಿವಾತ್ಮನು. ಇದಕ್ಕೆ ಮಹಾದೇವ ಉವಾಚ: ``ಅಕಾರಂ ಪರಮಾತ್ಮಾ ಚ ಉಕಾರಃ ಶಿವಾತ್ಮಾ ಭವೇತ್ | ಮಕಾರಂ ಸರ್ವಾತ್ಮಾ ಚ ಇತಿ ಭೇದಂ ವರಾನನೇ ||'' ಇಂತೆಂದುದಾಗಿ, ಆದಿ ಮಕಾರಕ್ಕೆ ಆದಿ ಕಲಾಪ್ರಣವವೆ ಆಧಾರ. ಆದಿ ಅಕಾರಕ್ಕೆ ಆದಿ ನಾದಪ್ರಣವವೆ ಆಧಾರ. ಆದಿ ಉಕಾರಕ್ಕೆ ಆದಿ ಬಿಂದುಪ್ರಣವವೆ ಆಧಾರ. ಆದಿ ಪ್ರಾಣಮಾತ್ರೆಯಪ್ರಣವಕ್ಕೆ ಅಖಂಡ ಜ್ಯೋತಿರ್ಮಯಲಿಂಗವೆ ಆಧಾರ. ಆದಿ ಮ ಎಂದರೆ ಆದಿ ಕಲಾಪ್ರಣವ. ಆದಿ ಅ ಎಂದರೆ ಆದಿ ನಾದಪ್ರಣವ. ಆದಿ ಉ ಎಂಬ ಆದಿ ಬಿಂದುಪ್ರಣವದಲ್ಲಿ ಬಿಂದು ಸಂಯುಕ್ತವಾಗಿ, ಆದಿ `ಮ' ಎಂಬ ಆದಿ ಮ ನ ಸ ರ ಪ್ರಣವದಲ್ಲಿ ಬಂದು ಕೂಡಲು ಮಹದೋಂಕಾರವಾಯಿತ್ತು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮತ್ತೆಯುಮೂಧ್ರ್ವಪಟ್ಟಿಕೆಯೆಂಬ ಕಂಠವೆ ವಿಶುದ್ಧಿಚಕ್ರಮೆನಿಸುಗು- ಮಲ್ಲಿಯ ಷೋಡಶ ಕೋಷ*ಂಗಳೆ ಷೋಡಶ ದಳಂಗಳೆನಿಕ್ಕು. ಮವರಲ್ಲಿ ಅ ಆ ಇ ಈ ಉ ಊ ಋ Iೂ ಒ ಓ ಏ ಐ ಓ ಔ ಅಂ ಅಃ ಎಂಬ ಪದಿನಾರಕ್ಕರಂಗಳ್ನೆಲಸಿರ್ಕುಮೆಂದು ಬೋಧಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಅ ಅಖಂಡಮಹಾಮೂಲಸ್ವಾಮಿಯ ಸ್ಥಲದ ವಚನವೆಂತೆಂದಡೆ : ನಿರಂಜನಾತೀತಪ್ರಣವ, ಅವಾಚ್ಯಪ್ರಣವ, ಕಲಾಪ್ರಣವ, ಅನಾದಿಪ್ರಣವ, ಆದಿಪ್ರಣವ, ಶಿವಶಕ್ತಿಪ್ರಣವ, ಶಿವಶಕ್ತಿರಹಿತವಾಗಿ ಮಹಾಪ್ರಣವ ಮೊದಲಾಗಿ ಅನಂತಕೋಟಿಪ್ರಣವಂಗಳಿಲ್ಲದಂದು, ಚಿತ್ತಾಕಾಶ ಚಿದಾಕಾಶ ಮಹದಾಕಾಶ ಪರಾಕಾಶ ಶಿವಾಕಾಶ ಬಿಂದ್ವಾಕಾಶ ನಾದಾಕಾಶ ಕಲಾಕಾಶ ಪ್ರಣವಾಕಾಶ ಮೊದಲಾಗಿ ಅನಂತಕೋಟಿ ಮಹಾಪ್ರಣವಾಕಾಶ, ಅತಿಮಹಾಪ್ರಣವಾಕಾಶ, ಅತಿಮಹಾತೀತಪ್ರಣವಾಕಾಶಂಗಳಿಲ್ಲದಂದು, ಆದಿ ಅನಾದಿ ಅನಾಗತ ಅನಂತ ಅದ್ಭುತ ತಮಂಧ ತಾರಜ ತಂಡಜ ಭಿನ್ನಜ ಭಿನ್ನಾಯುಕ್ತ ಅವ್ಯಕ್ತ ಅಮದಾಯುಕ್ತ ಮಣಿರಣ ಮಾನ್ಯರಣ ವಿಶ್ವಾರಣ ವಿಶ್ವಾವಸು ಅಲಂಕೃತ ಕೃತಯುಗ ತ್ರೇತಾಯುಗ ಕಲಿಯುಗಂಗಳೆಂಬ ಇಪ್ಪತ್ತೊಂದು ಯುಗ ಮೊದಲಾಗಿ ಅನಂತಕೋಟಿ ಮಹಾಯುಗಂಗಳು, ಅತಿಮಹಾಯುಗಂಗಳು ಅತಿಮಹಾತೀತ ಮಹಾಯುಗಂಗಳಿಲ್ಲದಂದು, ಆದಿಮೂಲ ಅನಾದಿಮೂಲಂಗಳಿಗತ್ತತ್ತವಾದ ಮಹಾಮೂಲಸ್ವಾಮಿಯ ಮೀರಿದ ಅತಿಮಹಾಮೂಲಸ್ವಾಮಿಗತ್ತತ್ತವಾಗಿಹ ಅಖಂಡ ಮಹಾಮೂಲಸ್ವಾಮಿ ಇದ್ದನಯ್ಯ ಇಲ್ಲದಂತೆ ನಮ್ಮ ಅಪ್ರಮಾಣ ಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮತ್ತೆಯುಮೀ ಶಿವಬೀಜಂ ಸ್ಥೂಲ ಸೂಕ್ಷ ್ಮಪರಂಗಳೆಂದು ಮೂದೆರನಾಗಿರ್ಪುದಿದಕ್ಕೆ ವಿವರಂ- ಸ್ಥೂಲಮೆನೆಯಕ್ಕರಂ. ಸೂಕ್ಷ ್ಮಮೆನೆಯಾಯಕ್ಷರದ ದನಿ. ಪರಮೆನೆ ಆಕಾರಾದಿ ಕ್ಷಕಾರಾಂತವಾದೈವತ್ತಕ್ಕರಂಗಳೊಳಗೆ ಪತ್ತು ಪತ್ತುಗಳು ವಿಭಾಗಿಸಿ, ಭೂಮ್ಯಾದಿ ಪಂಚಭೂತಂಗಳೊಡನೆ ಕಲಸುವುದೆಂತೆನೆ ತರದಿಂ ಅ ಆ ಇ ಈ ಉ ಊ ಋ Iೂ ಒ ಓ ಈ ಹತ್ತು ಪೃಥ್ವಿ. ಏ ಐ ಓ ಔ ಅಂ ಅಃ ಕ ಖ ಗ ಘ ಈ ಹತ್ತು ಅಪ್ಪು. ಙ ಚ ಛ ಜ ರುsು ಞ ಟ ಠ ಡ ಢ ಈ ಹತ್ತು ತೇಜಸ್ಸು. ಣ ತ ಥ ದ ಧ ನ ಪ ಫ ಬ ಭ ಈ ಹತ್ತು ವಾಯು. ಮ ಯ ರ ಲ ವ ಶ ಷ ಸ ಹ ಳ ಯೀ ಹತ್ತು ಆಕಾಶಂ. ಇಂತೈವತ್ತಕ್ಕರಂಗಳೈದು ಪೃತ್ವ ್ಯಪ್ತೇಜೋವಾಯ್ವಾಕಾಶಂಗಳಲ್ಲಿ ನ್ಯಸ್ತಂಗಳಾದವಿನ್ನುಳಿದೈದನೆಯ ಭೂತಸಂಜ್ಞಿತದಿಂ ಪಂಚಮವೆನಿಸಿದ ಪರಿಪೂರ್ಣವಾದ ಸಾಂತವೆ ಪರಮಿಂತು ಸ್ಥೂಲ ಸೂಕ್ಷ ್ಮ ಪರ ಸಂಜ್ಞೆಯ ನಿರೂಪಿಸಿದೆಯಯ್ಯಾ, ಪರಮ ಶಿವಲಿಂಗ ಪಾರ್ವತೀ ಸಮುತ್ಸಂಗ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇನ್ನು ಸೃಷ್ಟಿವರ್ಗನಿರೂಪಣಾನಂತರದಲ್ಲಿ ಸಂಹಾರವರ್ಗಮಂ ಪೇಳ್ವೆನೆಂತೆನೆ- ಕ್ಷಕಾರಾದ್ಯಕಾರಾಂತಮಾದಕ್ಷರಮಾಲಿಕೆಯೆ ಸಂಹಾರವರ್ಗಮೆನಿಕುಂ. ಅದರಲ್ಲಿ ಕ್ಷ ಳ ಹ ಸ ಷ ಶ ವ ಲ ರ ಯಂ ಗಳೆಂಬೀ ಪತ್ತೆ ಸಂಹಾರವರ್ಗದಲ್ಲಿ ಮೊದಲವರ್ಗಮಿದು ಪೃಥ್ವಿ. ಮ ಭ ಬ ಫ ಪ ನ ಧ ದ ಥ ತಂಗಳೆಂಬೀ ಪತ್ತೆ ಸಂಹಾರಿವರ್ಗದೊಳೆರಡನೆಯ ವರ್ಗಮಿದಪ್ಪು. ಣ ಢ ಡ ಠ ಟ ಞ ರುsು ಜ ಛ ಚಂಗಳೆಂಬೀ ಪತ್ತೆ ಸಂಹಾರವರ್ಗದಲ್ಲಿ ಮೂರನೆಯ ವರ್ಗಮಿದಗ್ನಿ. ಙ ಘ ಗ ಖ ಕಂಗಳೆಂಬೀವೈದುಂ ಸಂಹಾರವರ್ಗದಲ್ಲಿ ನಾಲ್ಕನೆಯ ವರ್ಗಮಿದು ವಾಯು, ಅಃ ಆಂ ಔ ಓ ಐ ಏ ಒ ಓ Iೂ ಋ ಊ ಉ ಈ ಇ ಆ ಅ ಎಂಬೀ ಪದಿನಾರೆ ಸಂಹಾರವರ್ಗದಲ್ಲಿಯೈದನೆಯ ವರ್ಗಮಿದಾಕಾಶ- ಮಿವೈದು ವರ್ಗಂಗಳನೊಳಕೊಂಡು ಸಂಹಾರವರ್ಗ ಮಿರ್ಪುದಿದಲ್ಲಿಯೆ ಸಮಸ್ತವಾದ ರುದ್ರಮಂತ್ರಗಳನುದ್ಧರಿಪುದಿದೀಗ ಸಂಹಾರವರ್ಗಂ. ಇಂತು ಸ್ಥಿತಿ ಸಂಹಾರ ತಾಮಸವರ್ಗ ವರ್ಗತ್ರಯಂಗಳಂ ನಿರವಿಸಿದೆಯಯ್ಯಾ, ನಿರಾಳ ನಿಶ್ಚಿಂತ ಪರಮ ಶಿವಲಿಂಗೇಶ್ವರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮೇಣಾ ಮಂತ್ರಮೂರ್ತಿಗೆ ನಾದವೆ ಕಿರೀಟಮದೆಂತೆನೆ ಯಾ ಪರಶಿವನ ನಿಷ್ಕಳಶಕ್ತಿಯದೆ ನಾದವದೆಯಾದಿಶಕ್ತಿಯದೆ ಓಂಕಾರವದರುತ್ಪತ್ತಿಯೆಂತೆನೆ ಅಕಾರವೆ ನಾದ ಉಕಾರವೆ ಬಿಂದುವುಭಯಂಗೂಡಿ ಅವು `ಓ ಭವತಿ'ಯೆಂದೊಂದೆಯಾಗಿ ಓ ಎನಿಸಿತ್ತದರಂತೆ ಆ ಓ ಕೂಡಿ ಔಯೆನಿಸಿತ್ತು ಹಾಂಗೆಯೆ ಆ ಇ ಕೂಡಿ ಎ ಎನಿಸಿತ್ತದರಂತೆ ಅ ಏ ಕೂಡಿ ಐ ಏ ಓ ಔ ಯೆಂಬೀ ಚತುರಕ್ಷರಂಗಳ್ರೂಪಾಂತರದಿಂ ಸಂಧ್ಯಕ್ಷರಂಗಳೆನಿಸುಗುಮವರೋಳ್ ಓಕಾರವೆ ಆದಿಶಕ್ತಿಯ ಧ್ವಜಾಕಾರ ರೇಖೆಗಳೆ, ಈ ಮೂಲಪ್ರಸಾದ ಮಂತ್ರಮೂರ್ತಿಯ ಕಿರೀಟವೆಂದು ನಿರವಿಸಿದೆಯಯ್ಯಾ, ಪರಶಿವಲಿಂಗೇಶ್ವರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಅಂದ ಚಂದಕ್ಕೆ ಲಿಂಗವ ಮರೆದು ತಿರುಗುವರು ! ಕಂಡ ಕನಸರಿಯರು ಅ ಮುಂದಣ ಸುದ್ದಿಯ ನುಡಿವರು. ನಿಜವನರಿಯದೆ ಲಿಂಗಸಂಗಿಗಳೆಂದಡೆ ಅಮುಗೇಶ್ವರನ ಶರಣರು ಅತ್ತತ್ತ ಹೋಗೆಂಬರು.
--------------
ಅಮುಗೆ ರಾಯಮ್ಮ
ಇಂತೀ ಮಹಾಲಿಂಗದ ಶಿವಶಕ್ತ್ಯಾತ್ಮಕ ಚಕ್ರನ್ಯಾಸ ನಿರೂಪಣಾನಂತರದಲ್ಲಿ, ಮೂರ್ತಮಂತ್ರಮಂ ಪೇಳ್ವೆನೆಂತೆನೆ- ನಾದ ಸಂಜ್ಞಿತವಾದ ಹಕಾರಮನಾಜ್ಯಪ್ರಧಾರಿಕೆ ಮೇಲಣ ಪಂತಿಯ ಮೇಲೆ ಚತುಷ್ಕೋಷ* ಮಧ್ಯದಲ್ಲಿ ನ್ಯಾಸಂಗೆಯ್ವುದು. ಬಿಂದು ಸಂಜ್ಞಿತವಾದೋಕಾರಮನಾದ್ಯಪ್ರದಾರಿಕೆಯಲ್ಲಿರಿಸೂದು. ಮಕಾರಮಂ ಊಧ್ರ್ವಪಟ್ಟಿಕಾದಿಯಾಗಿ ಊಧ್ರ್ವಕಂಜಪರ್ಯಂತದಲ್ಲಿ ಮಡಗುವುದು. ವೃತ್ತದಲ್ಲಿ ಉಕಾರಮನಿರಿಸೂದು. ಅಕಾರಮನಧಃಕಂಜಾಧಃ ಪಟ್ಟಿಕೆಗಳಲ್ಲಿಡುವುದಿಂತು ಹ ಒ ಮ ಉ ಅ ಎಂಬೀ ಸೂಕ್ಷ ್ಮ ಪಂಚಾಕ್ಷರ ನ್ಯಾಸಮಂ ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಗುದದಲ್ಲಿ ಆಧಾರಚಕ್ರ, ಪೃಥ್ವಿಯೆಂಬ ಮಹಾಭೂತ, ಚತುಃಷ್ಕೋಣ, ಚೌದಳಪದ್ಮ, ಅಲ್ಲಿಯ ಅಕ್ಷರ ವಶಷಸವೆಂಬ ನಾಲ್ಕು ಅಕ್ಷರ, ಅದರ ವರ್ಣ[ಪೀತ], ಅದಕ್ಕೆ ಅಧಿದೇವತೆ[ಬ್ರಹ್ಮ], ಭಕ್ತ ಮುಖ, ಕ್ರಿಯಾಶಕ್ತಿ, ಆಚಾರಲಿಂಗ, ನಕಾರ ಸ್ವಾಯತ. ಲಿಂಗಸ್ಥಾನದಲ್ಲಿ ಸ್ವಾಧಿಷಾ*ನಚಕ್ರ, ಅಪ್ಪುವೆಂಬ ಮಹಾಭೂತ, ಧನುರ್ಗತಿ, ಷಡುದಳಪದ್ಮ, ಅಲ್ಲಿಯ ಅಕ್ಷರವಾರು ಬ ಭ ಮ ಯ ರ ಲ ; ಅದರ ವರ್ಣ [ಶ್ವೇತ], ಅಧಿದೇವತೆ [ವಿಷ್ಣು], ಮಹೇಶ ಮುಖ, ಜ್ಞಾನಶಕ್ತಿ, ಗುರುಲಿಂಗ, ಅಲ್ಲಿ ಮಕಾರ ಸ್ವಾಯತ. ನಾಭಿಸ್ಥಾನದಲ್ಲಿ ಮಣಿಪೂರಕಚಕ್ರ, ತೇಜವೆಂಬ ಮಹಾಭೂತ, ತ್ರಿಕೋಣ, ದಶದಳಪದ್ಮ, ಅಲ್ಲಿಯ ಅಕ್ಷರ ಹತ್ತು ; ಡಢಣ ತಥದಧನ ಪಫ, ಅದಕ್ಕೆ [ಹರಿತ]ವರ್ಣ, ಅಧಿದೇವತೆ [ರುದ್ರ], ಪ್ರಸಾದಿ ಮುಖ, ಇಚ್ಚಾಶಕ್ತಿ , ಶಿವಲಿಂಗ, ಶಿಕಾರ ಸ್ವಾಯತ. ಹೃದಯಸ್ಥಾನದಲ್ಲಿ ಅನಾಹತಚಕ್ರ, ವಾಯುವೆಂಬ ಮಹಾಭೂತ, ಷಟ್ಕೋಣ, ದ್ವಿದಶದಳಪದ್ಮ, ಅಲ್ಲಿಯ ಅಕ್ಷರ ಹನ್ನೆರಡು : ಕ ಖ ಗ ಘ ಙ ಚ ಛ ಜ ಝ ಞ ಟ ಠ ಅದರ ವರ್ಣ [ಮಾಂಜಿಷ್ಟ], ಅದಕ್ಕೆ ಅಧಿದೇವತೆ [ಈಶ್ವರ], ಪ್ರಾಣಲಿಂಗಿ ಮುಖ, Wಆದಿಘೆಶಕ್ತಿ, ಜಂಗಮಲಿಂಗ, ಅಲ್ಲಿ ವಕಾರ ಸ್ವಾಯತ. ಕಂಠಸ್ಥಾನದಲ್ಲಿ ವಿಶುದ್ಧಿಚಕ್ರ, ಆಕಾಶವೆಂಬ ಮಹಾಭೂತ, ವರ್ತುಳಾಕಾರ, ಷೋಡಷದಳಪದ್ಮ, ಅಲ್ಲಿಯ ಅಕ್ಷರ ಹದಿನಾರು :ಅ ಆ ಇ ಈ ಉ ಊ ಋ Iೂ ಲೃ ಲೃೂ ಏ ಐ ಓ ಔ ಅಂ ಅಃ, ಅದಕ್ಕೆ ವರ್ಣ [ಕಪೋತ], ಅಧಿದೇವತೆ ಸದಾಶಿವನು, ಶರಣ ಮುಖ, [ಪರಾ]ಶಕ್ತಿ , [ಪ್ರಸಾದಲಿಂಗ, ಯಕಾರ ಸ್ವಾಯತ. ಭ್ರೂಮಧ್ಯದಲ್ಲಿ ಆಜ್ಞಾಚಕ್ರ, ಮನವೆಂಬ ಮಹಾಭೂತ, ದ್ವಿದಳಪದ್ಮ,] ಅಲ್ಲಿಯ ಅಕ್ಷರವೆರಡು :ಹ ಷ ವೆಂಬ [ಅಕ್ಷರ], ಮಾಣಿಕ್ಯ ವರ್ಣ, [ಅದಕ್ಕೆ ಅಧಿದೇವತೆ ಮಹೇಶ್ವರ], ಐಕ್ಯ ಮುಖ, ಕ್ರಿಯಾಶಕ್ತಿ, ಮಹಾಲಿಂಗ, ಓಂಕಾರ ಸ್ವಾಯತ. ಇಂತೀ ಷಡುಚಕ್ರದ, ಷಡುಸ್ಥಳದ, ಷಡುಲಿಂಗದ, ಷಡುಶಕ್ತಿಯರಿಗೆ ಷಡಕ್ಷರವೆ ಪ್ರಾಣವಾಗಿ ವಿರಾಜಿಸುತ್ತಿದ್ದಿತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಇಂತು ಪಂಚಪ್ರಣವ ನಿರೂಪಣಾನಂತರದಲ್ಲಿ ಬ್ರಹ್ಮಭೇದವಿಧಿಯಂ ಪೇಳ್ವೆನೆಂತೆನೆ- ಬ್ರಹ್ಮವೆಂದೊಡೆ ದೊಡ್ಡಿತ್ತಹತನದಿಂದೆಯುಂ ಪೂರ್ಣವಹಣದಿಂದೆಯುಂ `ಸರ್ವಂ ಖಲ್ವಿದಂ ಬ್ರಹ್ಮ'ವೆಂಬ ವಚನಾರ್ಥ ಸಾರ್ಥಕವಾಗಿಯಾ ಆದ್ವಿತೀಯ ಶಿವತತ್ವ ಬ್ರಹ್ಮವೆ ಪಂಚಪ್ರಕಾರವಾದವಾ ಪಂಚಬ್ರಹ್ಮವೊಂದೊಂದೈದೈದಾಗುತ್ತಿರ್ಪತ್ತೈದಾದುದೆಂತೆನೆ ಮೂರ್ತಿಬ್ರಹ್ಮ, ತತ್ವಬ್ರಹ್ಮ, ಭೂತಬ್ರಹ್ಮ ಪಿಂಡಬ್ರಹ್ಮ, ಕಲಾಬ್ರಹ್ಮಗಳೆಂಬೀವೈದುಂ ಪಂಚಬ್ರಹ್ಮಂಗಳಿವಕ್ಕೆ ವಿವರವೆಂತೆನೆ ಅಕಾರೋಕಾರಮಕಾರಾಧಿದೇವತೆಗಳಾದ ಸೃಷ್ಟಿಸ್ಥಿತ್ಯಂತ್ಯಕಾರಿಗಳಾದ ಬ್ರಹ್ಮ ವಿಷ್ಣು ರುದ್ರರುಂ ಸಾಕಲ್ಯಾದಿ ಪಂಚಪ್ರಣವಾಂಗರೂಪ ಸಮಸ್ತಾಕ್ಷರಂಗಳು- ಮಿವೆಲ್ಲವಾದ ಬ್ರಹ್ಮ ಸಂಜ್ಞಿತವಾದ ಹಕಾರಾಂತಸ್ಥವಾದುದರಿಂದೀ ಸರ್ವವುಂ ಮೂರ್ತಿಬ್ರಹ್ಮವೆನಿಕುಂ. ಮತ್ತವಿೂ ತ್ರಿವರ್ಣಸಂಭೂತವಾದ ಸಮಸ್ತ ವರ್ಣತತ್ವಂಗಳ್ಗೆಯು ಶಿವತತ್ವವೆ ಪ್ರಭುವಾದುದರಿಂ ಶಿವಬೀಜ ಸಂಜ್ಞಿತವಾದ ಹ ಎಂಬ ಶುದ್ಧ ಪ್ರಸಾದಾಧ್ಯಾತ್ಮಪ್ರಸಾದಾಂತವಾದ ಪಂಚಪ್ರಸಾದಮಂತ್ರವೆ ತತ್ವಬ್ರಹ್ಮವೆನಿಕುಂ. ಬಳಿಕ್ಕಂ ಮಾಂಸ ಸಂಜ್ಞಿತವಾದ ಲಕಾರವೆ ಪೃಥ್ವೀಭೂತ ಬೀಜಂ. ಮೇದಸ್ಸಂಜ್ಞಿತವಾದ ವಕಾರವೆ ಜಲಭೂತ ಬೀಜಂ. ಷಷ* ್ಯ ಸಂಜ್ಞಿತವಾದ ರಕಾರವೆ ತೇಜೋಭೂತ ಬೀಜಂ. ಸಪ್ತಮಸಂಜ್ಞಿತವಾದ ಹಕಾರವೆ ಆಕಾಶಭೂತ ಬೀಜವೀ ಪ್ರಕಾರದಿಂ ಪಂಚಭೂತಾತ್ಮಕವಾದುದೆ ಭೂತಬ್ರಹ್ಮವೆನಿಕುಂ. ಮರಲ್ದುಂ, ಪ್ರಕೃತಿಸಂಜ್ಞಿತವಾದ ಅ ಇ ಉ ಋ ಒ ಎ ಒಯೆಂಬೀ ಪ್ರಕೃತಿಗಳಲ್ಲಿ ಋ ಒ ದ್ವಯಂಮಂ ಬಿಟ್ಟುಳಿದ ಅ ಇ ಉ ಎ ಒ ಯೆಂಬೀಯೈದಕ್ಕರಮಂ ಪಂಚಸಂಜ್ಞಿತವಾದ ಹಕಾರದೊಡನೆ ಕೂಡೆ, ಬಿಂದುನಾದ ಸೌಂಜ್ಞಿತವಾದ ಸೊನ್ನೆಯೊಳ್ಬೆಸೆ, ಹ್ರಂ ಹ್ರೀಂ ಹ್ರುಂ ಹ್ರೇಂ ಹ್ರೌಂ ಎಂಬೀ ಬ್ರಹ್ಮಬೀಜಂಗಳೈದಂ ಪೇಳ್ದು, ಮತ್ತವಿೂ ಬೀಜಗಳೊಳ್ವಾಚಕವಾದ ಪಂಚಬ್ರಹ್ಮಂಗಳಂ ಪೇಳ್ವೆನೆಂತೆನೆ- ಸದ್ಯೋಜಾತ ವಾಮದೇವಾಘೋರ ತತ್ಪುರುಷೇಶಾನಂಗಳೆಂಬಿವೆ ಪಂಚಬ್ರಹ್ಮಂಗಳಿವಕ್ಕೆ ಪ್ರಣವವಾದಿಯಾಗಿ ನಮಃ ಪದಂ ಕಡೆಯಾಗಿ ಚತುಥ್ರ್ಯಂತಮಂ ಪ್ರಯೋಗಿಸೆ ಆ ಪಂಚಬ್ರಹ್ಮ ಮಂತ್ರೋದ್ಧರಣೆಯಾದುದೆಂತನೆ- ಓಂ ಹ್ರಂ ಸದ್ಯೋಜಾತಾಯ ನಮಃ ಓಂ ಹ್ರೀಂ ವಾಮದೇವಾಯ ನಮಃ ಓಂ ಹ್ರುಂ ಅಘೋರಾಯ ನಮಃ ಓಂ ಹ್ರೇಂ ತತ್ಪುರುಷಾಯ ನಮಃ ಓಂ ಹ್ರೌಂ ಈಶಾನಾಯ ನಮಃ ಎಂದು ಶಿವಬೀಜದೋಳ್ವೀವ ಪ್ರಕೃತಿ ಪಂಚಾಕ್ಷರಂಗಳಂ ಕೂಡಿಸಿ ಸಬಿಂದುವಾಗುಚ್ಚರಿಸೆ, ಪಂಚಬ್ರಹ್ಮವೆನಿಸಿದ ಕರ್ಮಸಾದಾಖ್ಯ ಸ್ವರೂಪಮೆ ಪಿಂಡಬ್ರಹ್ಮವೆನಿಕುಂ. ಮತ್ತಂ, ಪಿಂಡಬ್ರಹ್ಮವೆಂಬ ಪಂಚಬ್ರಹ್ಮ ನಿರೂಪಣಾನಂತರದಲ್ಲಿಯಾ ಪಂಚಬ್ರಹ್ಮಮಂತ್ರಕ್ಕೆ ಮೂವತ್ತೆಂಟು ಕಳೆಗಳುಂಟದೆಂತೆನೆ- ಈಶಾನ ತತ್ಪುರುಷಾಘೋರ ವಾಮದೇವ ಸದ್ಯೋಜಾತಂಗಳಿವಕ್ಕೆ ವಿವರಂ ಈಶಾನಕ್ಕೆದು ಕಲೆ. ತತ್ಪುರುಷಕ್ಕೆ ನಾಲ್ಕು ಕಲೆ. ಅಘೋರಕ್ಕೆಂಟು ಕಲೆ. ವಾಮದೇವಕ್ಕೆ ಪದಿರ್ಮೂಕಲೆ. ಸದ್ಯೋಜಾತಕ್ಕೆಂಟು ಕಲೆ. ಅಂತು, ಮೂವತ್ತೆಂಟು ಕಲೆ. ಇವಕ್ಕೆ ವಿವರಂ, ಮೊದಲೀಶಾನಕ್ಕೆ- `ಈಶಾನಸ್ಸರ್ವ ವಿದ್ಯಾನಾಂ' ಇದು ಮೊದಲ ಕಲೆ. `ಈಶಾನಾಸ್ಸರ್ವ ಭೂತಾನಾಂ' ಇದೆರಡನೆಯ ಕಲೆ. `ಬ್ರಹ್ಮಣಾಧಿಪತಿ ಬ್ರಹ್ಮಣಾಧಿಪತಿ ಬ್ರಹ್ಮ' ಇದು ಮೂರನೆಯ ಕಲೆ. `ಶಿವೋಮೇಸ್ತು' ಇದು ನಾಲ್ಕನೆಯ ಕಲೆ. `ಸದಾ ಶಿವೋಂ' ಇದು ಐದನೆಯ ಕಲೆ. ತತ್ಪುರುಷಕ್ಕೆ- `ತತ್ಪುರುಷಾಯ ವಿದ್ಮಹೆ' ಇದು ಮೊದಲ ಕಲೆ. `ಮಹಾದೇವಾಯ ಧೀಮಹಿತನ್ನೋ' ಇದೆರಡನೆಯ ಕಲೆ. `ರುದ್ರಃ' ಇದು ಮೂರನೆಯ ಕಲೆ. `ಪ್ರಚೋದಯಾತ್' ಇದು ನಾಲ್ಕನೆಯ ಕಲೆ. ಅಘೋರಕ್ಕೆ `ಅಘೋರೇಭ್ಯಃ' ಇದು ಮೊದಲ ಕಲೆ. `ಘೋರೇಭ್ಯಃ' ಇದು ಎರಡನೆಯ ಕಲೆ. `ಘೋರಘೋರ' ಇದು ಮೂರನೆಯ ಕಲೆ. `ತರೇಭ್ಯ' ಇದು ನಾಲ್ಕನೆಯ ಕಲೆ. `ಸರ್ವತಃ' ಇದೈದನೆಯ ಕಲೆ. `ಸರ್ವ' ಇದಾರನೆಯ ಕಲೆ. `ಸರ್ವೇಭ್ಯೇ ನಮಸ್ತೇಸ್ತು' ಇದೇಳನೆಯ ಕಲೆ. `ರುದ್ರ ರೂಪೇಭ್ಯಃ' ಇದೆಂಟನೆಯ ಕಲೆ. ವಾಮದೇವಕ್ಕೆ- `ವಾಮದೇವಾಯ' ಇದು ಮೊದಲ ಕಲೆ. `ಜೇಷಾ*ಯ' ಇದೆರಡನೆಯ ಕಲೆ. `ರುದ್ರಾಯ ನಮಃ' ಇದು ಮೂರನೆಯ ಕಲೆ. `ಕಲಾಯ' ಇದು ನಾಲ್ಕನೆಯ ಕಲೆ. `ಕಲಾ' ಇದೈದನೆಯ ಕಲೆ. `ವಿಕರಣಾಯ ನಮಃ' ಇದಾರನೆಯ ಕಲೆ. `ಬಲಂ' ಇದೇಳನೆಯ ಕಲೆ. `ವಿಕರಣಾಯ' ಇದೆಂಟನೆಯ ಕಲೆ. `ಬಲಂ' ಇದೊಂಬತ್ತನೆಯ ಕಲೆ. `ಪ್ರಮಥನಾಥಾಯ' ಇದು ಪತ್ತನೆಯ ಕಲೆ. `ಸರ್ವಭೂತ ದಮನಾಯ ನಮಃ' ಇದು ಪನ್ನೊಂದನೆಯ ಕಲೆ `ಮನ' ಇದು ಪನ್ನೆರಡನೆಯ ಕಲೆ. `ಉನ್ಮನಾಯ' ಇದು ಪದಿಮೂರನೆಯ ಕಲೆ. ಸದ್ಯೋಜಾತಕ್ಕೆ- `ಸದ್ಯೋಜಾತಂ ಪ್ರಪದ್ಯಾಮಿ' ಇದು ಮೊದಲ ಕಲೆ. `ಸದ್ಯೋಜಾತಾಯವೈ ನಮಃ' ಇದೆರಡನೆಯ ಕಲೆ. `ಭವೆ' ಇದು ಮೂರನೆಯ ಕಲೆ. `ಭವೇ' ಇದು ನಾಲ್ಕನೆಯ ಕಲೆ. `ನಾತಿಭವೆ' ಇದೈದನೆಯ ಕಲೆ. `ಭವಸ್ವ ಮಾಂ' ಇದಾರನೆಯ ಕಲೆ. `ಭವ' ಇದೇಳನೆಯ ಕಲೆ. `ಉದ್ಭವ' ಇದೆಂಟನೆಯ ಕಲೆ. ಇದು ಕಲಾಬ್ರಹ್ಮವಿಂತು ಮೂರ್ತಿಬ್ರಹ್ಮ ತತ್ವಬ್ರಹ್ಮ ಭೂತಬ್ರಹ್ಮ ಪಿಂಡಬ್ರಹ್ಮ ಕಲಾಬ್ರಹ್ಮಗಳೆಂಬ ಪಂಚಬ್ರಹ್ಮಗಳಂ ನಿರವಿಸಿದೆಯಯ್ಯಾ, ಪರಮ ಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಕಂಗಳ ಕಾಮವ ಜರಿದವರ ಕಂಡಡೆ ಎನ್ನ ಲಿಂಗಯ್ಯಾ ಬನ್ನಿ ಬನ್ನಿ ಎಂಬರಯ್ಯಾ ! ರುದ್ರಲೋಕದ ರುದ್ರಗಣಂಗಳೆಲ್ಲರು ಬನ್ನಿ ಬನ್ನಿ ಎಂಬರಯ್ಯಾ ! ಸರ್ವಲೋಕದ ಶ್ರೇಷ್ಠಜನಂಗಳು ಸಾಷ್ಟಾಂಗವ ಎರಗುವರಯ್ಯಾ ! ಬಸವಾದಿ ಪ್ರಮ ಥಗಣಂಗಳು ಕಂಡು ಬಳಲಿದಿರಿ ಬಾರಯ್ಯಾ ಎಂದು ಅಡಿಗೆರಗುವರಯ್ಯಾ ! ಅಮುಗೇಶ್ವರಲಿಂಗವನರಿದ ಶರಣರು ಅಡಿಗೆರಗುವರಯ್ಯಾ.
--------------
ಅಮುಗೆ ರಾಯಮ್ಮ
ಅನಿಲ ಬಂದೆನ್ನ ಮಗಳ ಹೊರೆಯಲಿದ್ದು ಒಯ್ದನವ್ವಾ; ಅ ಅ ಅ ಅ ಅ ಅವ್ವಾ; ಮಾಯಾವಾದಳೆನ್ನಲ್ಲಿ. ಎನ್ನ ಮಗಳನೊಯ್ದು ಎಲ್ಲಿ ಮಾಯಮಾಡಿದಳೆಂದರಿಯೆ. ಎನ್ನ ಮಗಳನೊಯ್ದು ತನ್ನ ಮಾಯದೊಳಗೆ ಅಡಗಿಸಿದ ಕಪಿಲಸಿದ್ಧಮಲ್ಲಿನಾಥಯ್ಯನ.
--------------
ಸಿದ್ಧರಾಮೇಶ್ವರ
ಗುದಸ್ಥಾನದಲ್ಲಿ ಆಧಾರಚಕ್ರ, ಪೃಥ್ವಿಯೆಂಬ ಮಹಾಭೂತ, ಚತುಃಕೋಣೆ ಚೌದಳ ಪದ್ಮ, ಅಲ್ಲಿ ಇಹ ಅಕ್ಷರ ನಾಲ್ಕು_ವ, ಶ, ಷ, ಸ, ಅದರ ವರ್ಣ ಸುವರ್ಣ, ಅದಕ್ಕೆ ಅಧಿದೇವತೆ ದಾಕ್ಷಾಯಣಿ. ಲಿಂಗಸ್ಥಾನದಲ್ಲಿ ಸ್ವಾಧಿಷಾ*ನಚಕ್ರ, ಅಪ್ಪುವೆಂಬ ಮಹಾಭೂತ, ಧನುರ್ಗತಿ, ಷಡುದಳ ಪದ್ಮ, ಅಲ್ಲಿ ಇಹ ಅಕ್ಷರವಾರು_ಬ, ಭ, ಮ, ಯ, ರ, ಲ, ಅದರ ವರ್ಣ ಪಚ್ಚೆಯ ವರ್ಣ, ಅದಕ್ಕೆ ಅಧಿದೇವತೆ ಬಹ್ಮನು. ನಾಭಿಸ್ಥಾನದಲ್ಲಿ ಮಣಿಪೂರಕವೆಂಬಚಕ್ರ, ತೇಜವೆಂಬ ಮಹಾಭೂತ, ತ್ರಿಕೋಣೆ, ದಶದಳ ಪದ್ಮ ಅಲ್ಲಿ ಇಹ ಅಕ್ಷರ ಹತ್ತು_ ಡ, ಢ, ಣ, ತ, ಥ, ದ, ಧ, ನ, ಪ, ಫ, ಅದರ ವರ್ಣ ಕೃಷ್ಣವರ್ಣ, ಅದಕ್ಕೆ ಅಧಿದೇವತೆ ವಿಷ್ಣು. ಹೃದಯಸ್ಥಾನದಲ್ಲಿ ಅನಾಹತಚಕ್ರ, ವಾಯುವೆಂಬ ಮಹಾಭೂತ, ಷಟ್ಕೋಣೆ, ದ್ವಾದಶಗಳ ಪದ್ಮ ಅಲ್ಲಿ ಇಹ ಅಕ್ಷರ ಹನ್ನೆರಡು_ ಕ, ಖ, ಗ, ಘ, ಙ, ಚ, ಛ, ಜ, ಝ, ಞ, ಟ,Àಠ, ಅದರ ವರ್ಣ ಕುಂಕುಮವರ್ಣ, ಅದಕ್ಕೆ ಅಧಿದೇವತೆ ಮಹೇಶ್ವರನು. ಕÀಂಠಸ್ಥಾನದಲ್ಲಿ ವಿಶುದ್ಧಿಚಕ್ರ, ಆಕಾಶವೆಂಬ ಮಹಾಭೂತ, ವರ್ತುಲಾಕಾರ, ಷೋಡಶದಳ ಪದ್ಮ ಅಲ್ಲಿ ಇಹ ಅಕ್ಷರ ಹದಿನಾರು_ ಅ, ಆ, ಇ, ಈ, ಉ, ಊ, ಋ, Iೂ, , , ಏ, ಐ, ಓ, ಔ, ಅಂ, ಅಃ, ಅದರ ವರ್ಣ ಶ್ವೇತವರ್ಣ, ಅದಕ್ಕೆ ಅಧಿದೇವತೆ ಸದಾಶಿವನು. ಭ್ರೂಮಧ್ಯಸ್ಥಾನದಲ್ಲಿ ಆಜ್ಞಾಚಕ್ರ, ಮನವೆಂಬ ಮಹಾಭೂತ, ತಮಂಧಾಕಾರ, ದ್ವಿದಳಪದ್ಮ ಅಲ್ಲಿ ಇಹ ಅಕ್ಷರವೆರಡು_ ಹಂ, ಕ್ಷಂ, ಅದರ ವರ್ಣ ಮಾಣಿಕ್ಯವರ್ಣ, ಅದಕ್ಕೆ ಅಧಿದೇವತೆ ಶ್ರೀಗುರು. ಉನ್ಮನೀಜ್ಯೋತಿ ಬ್ರಹ್ಮರಂಧ್ರದ ಮೇಲೆ. ಸಹಸ್ರದಳ ಪದ್ಮ, ಅಲ್ಲಿ ಅಮೃತವಿಹುದು ಅಲ್ಲಿ `ಓಂ' ಕಾರಸ್ವರೂಪವಾಗಿ ಗುಹೇಶ್ವರಲಿಂಗವು ಸದಾಸನ್ನಹಿತನು.
--------------
ಅಲ್ಲಮಪ್ರಭುದೇವರು
ಕಪ್ಪಿನ ಬಣ್ಣದಾಕೆ ಇಪ್ಪಿರವನರಿಯರು, ಅಬೆಯ ಕೈಯೊಳಗಾದರು, ಕೋಟಿ ಹರಿವಿರಂಚಾದಿಗಳು. ಗುರುವಾಜ್ಞೆಯಿಂದ ಅ ಯ್ಯನಪ್ಪ ಅಕ್ಷರದ್ವಯವನರಿದಡೆ ಆಬೆಯ ಕೈಗೆ ತಾವು ಹೊರಗಪ್ಪರು ಕಪಿಲಸಿದ್ಧಮಲ್ಲಿಕಾರ್ಜುನನ ಕಾಬರು.
--------------
ಸಿದ್ಧರಾಮೇಶ್ವರ
ದೇವತಾನ್ಯಾಸಾನಂತರದಲ್ಲಿ ಮಂತ್ರನ್ಯಾಸಮಂ ಪೇಳ್ವೆನೆಂತೆನೆ- ಈ ಚಕ್ರದ ಕರ್ನಿಕಾವೃತ್ತದ ಚೌದಳದ ನಡುವೆ ಶಿವಬೀಜವಾದ ಹಂಕಾರವನಂಕಿಪುದು. ಮೂಡಣೆಸಳಲ್ಲಿ ಬಿಂದು ಸಂಜ್ಞಿತವಾದ ಸಕಾರವಂ ಲಿಖಿಪುದ. ದಾತ್ಮಬೀಜವಾದಕಾರಮಂ ತೆಂಕಣೆಸಳಲ್ಲಿ ಬರೆವುದು. ಪಡುವಣೆಸಳಲ್ಲಿ ಸೂಕ್ಷ ್ಮನಾದವೆನಿಸಿದೈಕಾರವನುದ್ಧರಿಪುದು. ಬಡಗಣೆಸಳಲ್ಲಿ ವಿದ್ಯಾಬೀಜವಾದ ಕ್ಷಕಾರವನಿರಿಸುವದಿಂತು ಕರ್ನಿಕಾಪೂರ್ವದಕ್ಷಿಣಪಶ್ಚಿಮೋತ್ತರಂಗಳೆಂಬಿವೈದರಲ್ಲಿ ಹ ಸ ಅ ಐ ಕ್ಷ ಎಂಬೈದಕ್ಕರಂಗಳಂ ಭಾವಿಪುದೆಂದೆಯಯ್ಯಾ, ಪರಮಗುರು ಪರಮ ಶಿವಲಿಂಗೇಶ್ವರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇನ್ನಷ್ಟು ... -->