ಅಥವಾ

ಒಟ್ಟು 18 ಕಡೆಗಳಲ್ಲಿ , 1 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಅಂಗದಲ್ಲಿ ಅಗಮ್ಯವಾಗಿ ಬಂದಬಳಿಕ, ನಿನ್ನ ನೆನೆವವನಲ್ಲ ನಾನು. ಎನ್ನ ಮನದಲ್ಲಿ ಮನೋಮೂರ್ತಿಯಾಗಿಪ್ಪೆಯಾಗಿ ಮನದಲ್ಲಿ ನೆನೆವವನಲ್ಲವಯ್ಯಾ ನಿನ್ನ. ನೀನೆ ಪತಿಯಾಗಿ ನಾನೆ ಸತಿಯಾದ ಕಾರಣ ನಿನ್ನ ನೆನೆವವನಲ್ಲ ನಾನು ; ನಿನ್ನ ಪೂಜಿಸುವವನಲ್ಲ ನಾನು ; ನಿನ್ನ ರಚಿಸುವವನಲ್ಲ. ಎನಗೆ ನಿನಗೆ ಸಂದಿಲ್ಲದೆ ಸಮರಸವಯ್ಯಾ. ಎನ್ನ ಅರ್ಚನೆ ಪೂಜನೆ ನಷ್ಟವಾಯಿತ್ತು; ಎನ್ನ ಕ್ರೀ ನಿಃಕ್ರೀಯ ಕೂಡಿತ್ತು. ಸಂದಿಲ್ಲದ ಸಮರಸವಾಗಿ, ನಿಮ್ಮ ಸಂದೇಹವಿಲ್ಲದೆ ಕಂಡೆನು. ಮಹಾಲಿಂಗ ಅಮುಗೇಶ್ವರಲಿಂಗವೆ, ನಿಮ್ಮ ಶರಣ ಪ್ರಭುದೇವರ ಘನವ ನಾನೇನೆಂದುಪಮಿಸುವೆನಯ್ಯಾ.
--------------
ಅಮುಗೆ ರಾಯಮ್ಮ
ಇಮ್ಮೈಯ ಸಿರಿವಂತರ ಕಂಡಡೆ ಎನ್ನಯ್ಯಾ, ಇತ್ತ ಬನ್ನಿ ಎಂಬರಯ್ಯಾ ; ಕರ್ಮಿಗಳ ಕಂಡಡೆ ಕತ್ತಹಿಡಿದು ನೂಕೆಂಬರಯ್ಯಾ, ಲಿಂಗವನಪ್ಪಿದ ನಿಜಶರಣರು ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ಬೆಟ್ಟದ ನೆಲ್ಲಿಯಕಾಯ ಪಟ್ಟಣಕ್ಕೆ ಹೊತ್ತುಕೊಂಡು ಹೋಗಿ ಹೊಟ್ಟೆಯ ಹೊರೆವವನಂತೆ, ಉತ್ತಮ ತೇಜಿಯ ಹೆಸರ ಕೇಳಿ ಕಡಲೆಯ ತಿಂಬ ಗಾವಲಿಗನಂತೆ, ಅತ್ತೆಯ ಹೆಸರ ಹೇಳಿ ಹೊಟ್ಟೆಯ ಹೊರೆವ ತೊತ್ತಿನಂತೆ, ಆದ್ಯರ ವಚನಂಗಳ ಅಲ್ಲಿಗಲ್ಲಿಗೆ ಉಸುರಿ ಅನ್ನ ಕೂಳಿಂಗೆ ಹರಿದಾಡುವ ಅಜ್ಞಾನಿಗಳ ಅನುಭಾವಿಗಳೆಂಬೆನೆ ? ಅಯ್ಯಾ, ವಿರಕ್ತರೆಂಬೆನೆ ? ವೇಷವ ಹೊತ್ತು ತಿರುಗುವ ಡೊಂಬನಂತೆ ಬಲ್ಲೆ ಬಲ್ಲೆನೆಂಬ ಅಹಂಕಾರವ ನುಡಿವ ಭವಿಗಳ ಅನುಭಾವಿಗಳೆಂಬೆನಲ್ಲದೆ ವಿರಕ್ತರೆಂಬೆನೆ ? ವಿಷಯವ ಮುಂದುಗೊಂಡು ತಿರುಗುವ ಅನುಭಾವಿಗಳನೆಂತು ವಿರಕ್ತರೆಂಬೆನಯ್ಯಾ ಅಮುಗೇಶ್ವರಲಿಂಗವೆ ?
--------------
ಅಮುಗೆ ರಾಯಮ್ಮ
-->