ಅಥವಾ

ಒಟ್ಟು 30 ಕಡೆಗಳಲ್ಲಿ , 6 ವಚನಕಾರರು , 24 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರೂಹಿಲ್ಲದ ನೆಲದಲ್ಲಿ ಸಸಿಯನೇಂ ಬೆಳೆವುದಯ್ಯಾ? ಭಯವಿಲ್ಲದವನಲ್ಲಿ ಭಕ್ತಿಯನೇಂ ಬೆಳೆವುದಯ್ಯಾ? ಭಯ ಕೆಟ್ಟಡೆ ಭಕ್ತಿ ಬಿಡುವುದು, ಮಹದೇವನೊಲ್ಲ ಕಪಿಲಸಿದ್ಧಮಲ್ಲಿನಾಥನಾ ಹೋ! ಅಯ್ಯಾ!
--------------
ಸಿದ್ಧರಾಮೇಶ್ವರ
ಯುಗ ಜುಗ ಮಡಿವಂದು ಧಗಿಲು ಭುಗಿಲೆಂದು ಮುಸುಕಿದ ಮಹಾಜ್ವಾಲೆ ಇದೇನೊ! ಇಂದೆನ್ನ ಕಣ್ಗೆ ಗೋಚರವಾಯಿತ್ತೆಲೆ ಅಯ್ಯಾ! ನೀವೆಂದರಿಯೆನಯ್ಯಾ. ನಾನೆನ್ನ ಕಾಯದ ಕಳವಳದಲ್ಲಿದ್ದೆನಲ್ಲದೆ ನೀವೆಂಬ ಬಗೆದೋರದೆ ಕೆಟ್ಟೆನೆಲೆ ಅಯ್ಯಾ. ಆಳ್ದನೊಡನೆ ಆಳು ಮುನಿದಡೆ, ಆರು ಕೆಡುವರು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಅವರವರ ನುಡಿದ ನುಡಿಯ ಅವರವರಿಗೆ ಹಾಸುವೆನಯ್ಯಾ, ನೋಡಾ! ಅಯ್ಯಾ! ಮತ್ತೆ ಮಾರುಗೊಂಡಡೆ ಮಾರಾಟಕ್ಕೆ ಸಂತೆಂಬೆ ನೋಡಯ್ಯಾ. ಮತ್ತೆ ಮಾರುಗೊಳ್ಳದಿರ್ದಡೆ ಮಾರಾಟಕ್ಕೆ ಸಲ್ಲದೆಂಬೆ ನೋಡಯ್ಯಾ. ನೋಡಯ್ಯಾ, ಈ ಹುಟ್ಟು ಸೈರಣೆ ಸಮತೆಯುಳ್ಳಡೆ ತನ್ನನೆ ಕೂಡಿಕೊಂಬನೈ ಎನ್ನ ಕಪಿಲಸಿದ್ಧಮಲ್ಲೇಶ್ವರದೇವ, ಹಾ! ಅಯ್ಯಾ!
--------------
ಸಿದ್ಧರಾಮೇಶ್ವರ
ದೇವನೊಂದೆರಡು ಬದಿಗಳ ಮಾಡಿಟ್ಟನು ಆ! ಹೋ! ವಾ! ಹಾ! ಅಯ್ಯಾ! ಮೆಚ್ಚು ನಿಮ್ಮದೆನುತ್ತಿರಲು ಮತ್ತೆ ವಿಚಾರಿಸುತ್ತಿಹುದು ನಿಮ್ಮದೆ ಮರುಳುತನವಯ್ಯಾ, ಹೋ! ವಾ! ಅಯ್ಯಾ! ಪರಿಣಾಮವುಳ್ಳಡೆ ಹಿಡುವುದು ಅಲ್ಲದಿದ್ದರೆ ಬಿಟ್ಟು ಹೋಹುದು, ಕಪಿಲಸಿದ್ಧಮಲ್ಲಿನಾಥನ.
--------------
ಸಿದ್ಧರಾಮೇಶ್ವರ
ಎನ್ನ ನೀ ಒಲಿವೆ, ಒಲ್ಲೆ ಎಂಬುದನು ಅರಿಯಲು ಬಾರದು ಹಾ! ಹಾ! ಅಯ್ಯಾ! ನೀನೊಲಿವಂತೆ ಗೆಯ್ವೆ ನಾನು. ಒಲ್ಲದಂತೆ ಇರುವೆ ನೀನಯ್ಯಾ. ಎನ್ನ ನೀ ಕರ[ಕರೆ] ಕಾಡದಿರಯ್ಯಾ, ಎನ್ನ ಕಪಿಲಸಿದ್ಧ ಮಲ್ಲೇಶ್ವರ ದೇವರ ದೇವಯ್ಯಾ.
--------------
ಸಿದ್ಧರಾಮೇಶ್ವರ
ಹರನೆಂಬ ನಲ್ಲನಾಗದನ್ನಕ್ಕ ಆರಿಗಾದಡೂ ಪ್ರಿಯವಲ್ಲ. ಹರನೆಂಬ ನಲ್ಲನಾದ ಬಳಿಕ ಆರಿಗಾದಡೂ ಪ್ರಿಯವಯ್ಯ. ಹರ ನಿರಾಮಯ ಕಪಿಲಸಿದ್ಧಮಲ್ಲಿನಾಥ! ಹಾ! ಅಯ್ಯಾ!
--------------
ಸಿದ್ಧರಾಮೇಶ್ವರ
ಜೇಡಂಗೆ ಬೇಡಂಗೆ ಡೋಹಾರಂಗೆ ಹೊಲೆಯಂಗೆ ರೂಢಿಗೀಶ್ವರನೊಲಿದ ಪರಿಯ ನೋಡಾ ಅಯ್ಯಾ! ಲೋಕದ ಮನುಜರು ಮಾಡುವ ಸಮಯಂಗಳ ಮಾಡಲೇಕೆ? ಅವರು ಸ್ವತಂತ್ರರು, ಇವರು ಹೋದಠಾವಿನಲ್ಲಿ ಕಲ್ಲು ಮುಳ್ಳು ಮೂಡವು. ಇವರ ಕೂಡ ಕೂರದಾತನಂಬಿಗ Zõ್ಞಡಯ್ಯ.
--------------
ಅಂಬಿಗರ ಚೌಡಯ್ಯ
ಇವನ ಪರಿಯ ಗಂಡುಗೂಸು ಪೃಥುವಿಯ ಮೆಲ್ಲವಯ್ಯಾ, ಅವ್ವಾ, ಗಂಡುಮಕ್ಕಳು ಗಂಡುಬೇಟಗೊಂಬರು. ಹೆಮ್ಮಕ್ಕಳು ಹೆಂಬೇಟಗೊಂಬರು. ಇವಗೆ ಕೂರದವರಾರು? ಹೇಳಾ! ಅವ್ವಾ! ಅಯ್ಯಾ! ಜಗದ ಗಂಡರ ಹೆಂಡಿರು ಇವನ ಮೇಲೆ ಮೂಗೂರಿಕೊಂಡಿಪ್ಪರು, ಕಪಿಲಸಿದ್ಧಮಲ್ಲಿನಾಥಯ್ಯನವ್ವಾ
--------------
ಸಿದ್ಧರಾಮೇಶ್ವರ
ಈ ರಿತುಕಾಲ ಹುಟ್ಟಿ ಮುಟ್ಟಿ ಕೆಡುವಡೆ ಒಳಗಡೆ ಬೆಳೆಯಲೇಕಯ್ಯಾ! ಹೋ! ವಾ! ಹೋ! ಅಯ್ಯಾ! ನೀ ಮುಟ್ಟಿ ಕೆಡುವಡೆ ಒಳಗೆ ಬೆಳೆಯಲೇಕಯ್ಯಾ. ಈ ಬಟ್ಟೆ ಹುಸಿಬಟ್ಟೆ. ಕಪಿಲಸಿದ್ಧಮ್ಲನಾಥಯ್ಯನ ಅಂಜದೆ ನೆನೆಯಿರೊ, ನೆನೆಯಿರೊ! ಹೋ! ವಾ! ಹೋ! ಅಯ್ಯಾ!
--------------
ಸಿದ್ಧರಾಮೇಶ್ವರ
-->