ಅಥವಾ

ಒಟ್ಟು 18 ಕಡೆಗಳಲ್ಲಿ , 3 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲರ ಎಲ್ಲ್ಲಂ[ತಲ್ಲ್ವ] ನಿನ್ನ ಪರಿ ಹೊಸತು. ಆಬೆ ಅನಾಹತ ಅಪರಸ್ಥಾನಕ್ಕೆ ಬಂದಡೆ ನೀನು ಪೂರ್ವಸ್ಥಾನಕ್ಕೆ ಬಪ್ಪಿ, ಆಬೆ ಪೂರ್ವಸ್ಥಾನಕ್ಕೆ ಬಂದಡೆ ನೀನು ದಕ್ಷಿಣಸ್ಥಾನಕ್ಕೆ ಬಪ್ಪಿ, ಆಬೆ ದಕ್ಷಿಣಸ್ಥಾನಕ್ಕೆ ಬಂದಡೆ ನೀನು ಪಂಚಮಸ್ಥಾನಕ್ಕೆ ಬಪ್ಪಿ, ಆಬೆ ಅನಾಹತ ಅಪರಸ್ಥಾನವನೆಯ್ದಲಾರದೆ ಇದ್ದಡೆ ಕೋಹಂ ನಿಚ್ಚಣಿಗೆಯನಿಕ್ಕಿಟ್ಟು, ಸಂಗಮಸ್ಥಾನಕ್ಕೆ ಸಂಯೋಗ ಪ್ರಾಪ್ತಿಯಂ ಮಾಡಿಸಿದೆ. ನಿನ್ನ ಸಂಯೋಗದ ಸುಖದಿಂದ ಸಂಪನ್ನೆಯಾಗಿ ಇಹಪರವೆಂಬುದನು ಏಕವ ಮಾಡಿದಳು. ಅವ್ವೆಯ ಕರುಣದಿಂದ ಎನಗೆ ಅರಿದಪ್ಪ ಆಧಿಕ್ಯವಿಲ್ಲ ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಗುರುವಿನ ಕರುಣದಿಂದ ಸದ್ಭಕ್ತಿಯನರಿದು ಸಕಲಯೋಗಕ್ಕೆ ಮೂಲನಾದೆನು.
--------------
ಸಿದ್ಧರಾಮೇಶ್ವರ
-->