ಅಥವಾ

ಒಟ್ಟು 21 ಕಡೆಗಳಲ್ಲಿ , 13 ವಚನಕಾರರು , 19 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಂಗಿಯ ಗಂಡನೆನ್ನನೆರೆದು ಪರಿಮಳವ ಪೂಸಿ ಪರಿಪರಿಯ ರುಚಿಗಾಣಿಸಿದನು. ಚಲುವಿಕೆಯ ತೋರಿ ತರ್ಕೈಸಿ ಮಾತನಾಡದೆ ನಿನ್ನ ಗಂಡಂಗೆ ಶರಗ ಹಾಸುವಳೆಂದು ಗುರುನಿರಂಜನ ಚನ್ನಬಸವಲಿಂಗವೆನ್ನೊಳಗಾದ ಕಾಣಮ್ಮ.
--------------
ದೇಶಿಕೇಂದ್ರ ಸಂಗನಬಸವಯ್ಯ
ಎಲ್ಲರ ಗಂಡಂದಿರು ಪರದಳವಿಭಾಡರು; ಎನ್ನ ಗಂಡ ಮನದಳವಿಭಾಡ. ಎಲ್ಲರ ಗಂಡಂದಿರು ಗಜವೇಂಟೆಕಾರರು; ಎನ್ನ ಗಂಡ ಮನವೇಂಟೆಕಾರ. ಎಲ್ಲರ ಗಂಡಂದಿರು ತಂದಿಕ್ಕಿಸಿಕೊಂಬರು; ಎನ್ನ ಗಂಡ ತಾರದೆ ಇಕ್ಕಿಸಿಕೊಂಬ. ಎಲ್ಲರ ಗಂಡಂದಿರಿಗೆ ಮೂರು, ಎನ್ನ ಗಂಡಂಗೆ ಅದೊಂದೆ; ಅದೊಂದೂ ಸಂದೇಹ, ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.
--------------
ಕದಿರರೆಮ್ಮವ್ವೆ
ಬ್ರಹ್ಮಾಂಡಮಂಡಲದಲ್ಲಿ ಒಬ್ಬ ನಾರಿ ಹುಟ್ಟಿದಳು. ಅವಳಿಗೆ ಐವರು ಗಂಡಂದಿರು, ಮೂವರು ಮಿಂಡಂದಿರು. ಗಂಡಂಗೆ ಕಾಲ ಕೊಟ್ಟು, ಮಿಂಡಂಗೆ ಮಂಡೆಯ ಕೊಟ್ಟು, ಗಂಡಮಿಂಡರ ಒಡಗೂಡಿಕೊಂಡಿಪ್ಪ ನಾರಿಯ ಅಂಗೈಯಲ್ಲಿ ಒಂದು ನಾರಿವಾಳದ ಸಸಿ ಹುಟ್ಚಿತ್ತು. ಅದು ಕಂಗಳ ನೀರ ಕುಡಿದು, ಅಂಗದ ಮರೆಯ ನೆಳಲಲ್ಲಿ ಬಲಿದು, ಸಸಿ ಮರನಾಯಿತ್ತು. ಮರ ಮಹದೊಡಗೂಡಿ ತೆಂಗಿನಕಾಯಿ ಆಕಾಶದಲ್ಲಿ ನಿಂದಿತ್ತು. ಮಟ್ಟೆಯನೊಡೆದು ಕಾಯ ನಿಶ್ಚಯದಲ್ಲಿ ನೋಡಲಾಗಿ, ಕಾಯಿಗೆ ಕಣ್ಣಿಲ್ಲ , ಅಲಿಕಿದಡೆ ಜಲವಿಲ್ಲ. ಅಂಗ ಭಿನ್ನವ ಮಾಡಿ ನೋಡಲಾಗಿ, ಕಾಯ ಕರ್ರಗಾಗಿತ್ತು , ನೀರು ಬೆಳ್ಳಗಾಯಿತ್ತು , ಒಡೆದಾತನ ಬಾಯಿ ಬೆತ್ತಲೆಯಾಯಿತ್ತು. ಬ್ರಹ್ಮಾಂಡಮಂಡಲದ ಶಕ್ತಿ ಗಂಡನ ಕೊಂಡು, ಮಿಂಡನ ವಂಚಿಸಿ, ಬಂಧುಗಳ ಹಿಂಗಿ, ತನ್ನ ಹಿಂಡನೊಡಗೂಡಿದಳು. ಇಂತಿವರೆಲ್ಲರ ಬಲ್ಲತನ ಅವಳಲ್ಲಿಯೇ ಹೋಯಿತ್ತು. ಶಕ್ತಿ ಉಮಾಪತಿ, ನಿಶ್ಶಕ್ತಿ ಪರಮಜ್ಞಾನ. ಕಾಯ ಭ್ರಮೆ, ಜೀವ ಬಯಲು, ಅರಿವು ರೂಪು, ಬಂಕೇಶ್ವರಲಿಂಗವನರಿದನೆಂಬುದು ಗರ್ವಮಾಯೆ.
--------------
ಸುಂಕದ ಬಂಕಣ್ಣ
ಕಿಚ್ಚಿಗೆ ಮೈಹುಗುಳು ಹುಟ್ಟಿತ್ತು, ಉದಕಕ್ಕೆ ಚಳಿಯಾಗಿ ಸ್ಫಟಿಕ ಗಿರಿಯಲ್ಲಿ ಹಣ್ಣು ಹುಟ್ಟಿತ್ತು ! ಅಟ್ಟಿತ್ತೊಂದು ತಲೆ ಹೋ ! ಹಣ್ಣನದ (ನೆಯ್ದೆ ?) ನುಂಗಿತ್ತು ರೆ ! ಹೆಂಡತಿಯಿಲ್ಲದ ಗಂಡಂಗೆ ಅರುಮಾನಿಸ ಮಕ್ಕಳು. ಅಖಂಡಿತ ಗುಹೇಶ್ವರಾ ಹಾ ನಿರಾಳರೆ.
--------------
ಅಲ್ಲಮಪ್ರಭುದೇವರು
-->