ಅಥವಾ

ಒಟ್ಟು 20 ಕಡೆಗಳಲ್ಲಿ , 12 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀಲಕಂಧರನೆಂಬಾತ ಬಾಲತ್ವದಲ್ಲಿ ಭಾಮಿನಿಯ ಒಡಗೂಡಿ ಸಂದು ಸವೆದು, ಇದು ಕ್ರೀ ಇದು ನಿಃಕ್ರೀ, ಇದು ಶುದ್ಧ ಇದು ಸಿದ್ಧ ಇದು ಪ್ರಸಿದ್ಧ, ಇದು ಭಾವ ಇದು ನಿರ್ಭಾವವೆಂದು ಅರುಪುವಾಗ ಪಿಂಡಾಂಡಂಗಳಿಲ್ಲ; ಅಷ್ಟಮೂರ್ತಿ ಕೂಡಿದ ರುದ್ರನಿಲ್ಲ. ಆನಂದವೆ ಒಡಲಾಗಿಪ್ಪ ಮಹಾತ್ಮನ ನಿಜವ ಕಂಡಾತ ಬಸವಣ್ಣ. ಆ ಬಸವಣ್ಣನೆನಗರುಪಿದ ಗುಣದಿಂದ ಶುದ್ಧನಾದೆನು. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಬಸವಣ್ಣನೆನ್ನ ಪರಮಾರಾಧ್ಯರು.
--------------
ಸಿದ್ಧರಾಮೇಶ್ವರ
ಪೃಥ್ವಿಯ ಗುಣ ಸೋಂಕಿದಲ್ಲಿ ಅದಾವ ಭೇದದಿಂದ ಅರ್ಪಿತ ? ಅಪ್ಪುವಿನ ಗುಣ ಆವರ್ಚಿಸಿದಲ್ಲಿ ಅದಾವ ಭೇದದಿಂದ ಅರ್ಪಿತ ? ತೇಜದ ಗುಣದಿಂದ ಪ್ರಕಾಶ ಅದಾವ ಭೇದದಿಂದ ಅರ್ಪಿತ ? ವಾಯುವಿನ ಸುಗುಣ ದುರ್ಗುಣದ ಸುಳುಹಿನ ಸಂಚಾರದ ಭೇದ ಅದಾವ ನಿಶ್ಚಯದಿಂದ ಅರ್ಪಿತ ? ಆಕಾಶದ ಗಮ್ಯದ ಒಳಗಾದ ಸರ್ವನಾದಮಯ-ಪರಿಪೂರ್ಣತ್ವ ತೆರಹಿಲ್ಲದ ತನ್ಮಯ ಅದಾವ ಲಿಂಗಕ್ಕರ್ಪಿತ ? ಇಂತೀ ಪಂಚೀರಕರಣಂಗಳಲ್ಲಿ ಭೇದಕ್ರಮದಿಂದ ಅರ್ಪಿಸಬೇಕು. ಸದ್ಯೋಜಾತಲಿಂಗದ ಅರ್ಪಿತದ ಮುಖವನರಿತು ಕೊಡಬೇಕು
--------------
ಅವಸರದ ರೇಕಣ್ಣ
ಗುರುಸ್ವರೂಪನಾಗಿ ಬಂದು ಬ್ರಹ್ಮನ ಉತ್ಪತ್ಯವ ಕೆಡಿಸಿ ಮಾಂಸಪಿಂಡವ ಕಳೆದು ಮಂತ್ರಪಿಂಡದಿಂದ ಪ್ರತಿಷೆ*ಯ ಮಾಡಿ ನಾನಾ ಕ್ರೀ ವರ್ತನಕ್ಕೆ ಹೊಲಬನಿಟ್ಟುಕೊಟ್ಟು ನಿನ್ನ ಕರಕಮಲದಲ್ಲಿ ಜ್ಯೋತಿರ್ಮಯವಪ್ಪ ನಿನ್ನ ನಿಜಾತ್ಮದರಿವ ಆ ಕುರುಹಿನಲ್ಲಿ ಬೈಚಿಟ್ಟು ನಿಜಲಿಂಗವ ಮಾಡಿ ಎನ್ನ ಕೈಯಲ್ಲಿ ಕೊಟ್ಟೆ. ಆ ಲಿಂಗಸ್ವರೂಪು ನೀನಾಗಿ ಬಂದು ಹೃತ್ಕಮಲದಲ್ಲಿ ನಿಂದು ಕರಣ ನಾಲ್ಕು ಮದವೆಂಟು ಇಂದ್ರಿಯವೈದು ವಿಷಯವಾರು ಇಂತಿವರೊಳಗಾದ ಸರ್ವೇಂದ್ರಿಯವ ಕೆಡಿಸಿ ತ್ರಿಗುಣಾತ್ಮಕದ ತ್ರಿಶಕ್ತಿ ಭೇದವ ತ್ರಿಮಲದ ಘೋಷವ ಕೆಡಿಸಿ ನಿಶ್ಚಯಪದದಿಂದ ಹೃತ್ಕಮಲವಾಸಿಯಾದೆ; ಆ ಗುಣದಿಂದ ನಾ ಸಾಫಲ್ಯನಾದೆ. ಜಂಗಮಮೂರ್ತಿಯಾಗಿ ಬಂದು ಎನಗೆ ದೀಕ್ಷಾಗುರು ಶಿಕ್ಷಾಗುರು ಮೋಕ್ಷಾಗುರುವಾಗಿ ಶುದ್ಧ ಸಿದ್ಧ ಪ್ರಸಿದ್ಧಮಂ ತೋರಿ ಎನ್ನ ಭವಛೇದನಮಂ ಮಾಡಿದೆ. ಇಂತೀ ತ್ರಿವಿಧಮೂರ್ತಿ ಭಕ್ತಿ ವಿಷಯದಿಂದ ಬಸವಣ್ಣ ಚನ್ನಬಸವಣ್ಣಗೋಸ್ಕರವಾಗಿ ಕ್ರಿಯಾಸಂಬಂಧಿಯಾದೆ. ಶಂಭುವಿನಿಂದಿತ್ತ ಸ್ವಯಂಭುವಿನಿಂದಿತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
-->