ಅಥವಾ

ಒಟ್ಟು 24 ಕಡೆಗಳಲ್ಲಿ , 9 ವಚನಕಾರರು , 24 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಜದ ಪ್ರಭೆ ನಿತ್ಯಪ್ರಕಾಶ ತೋರುತ್ತದ್ಞೆ ಎನಗಯ್ಯಾ. ಮ್ರ್ಕೂಯಾಗಿದೆ ಎನ್ನ ಕಣ್ಣ ಮುಂದೆ ಅಯ್ಯಾ. ಇದರ ಪ್ರಭೆಯ ಕಂಡು ಬೆರಗಾದೆನಯ್ಯಾ, ಕಪಿಲಸಿದ್ಧಮ್ಲನಾಥಯ್ಯಾ, ಕರುಣಿಸಯ್ಯಾ, ನಿಮ್ಮ ಧರ್ಮ.
--------------
ಸಿದ್ಧರಾಮೇಶ್ವರ
ಮರದೆಲೆಯ ತಂದು, ಕುರುಹಿಡಬಾರದ ಪರಮ ಅರುಹ ಪೂಜಿಸಿದ ಮರುಳರ ನೋಡಿ ಬೆರಗಾದೆನಯ್ಯಾ. ಕುರುಹ ಪೂಜೆ ಅರುಹು ಆದಾಗಲೆ ಮರಹಿನ ಕೇಡು. ಮರವೆಯ ಮುಂದಿಟ್ಟಡೆ ಸಿರಿಗರ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಲೌಕಿಕದ ಮಧ್ಯದಲ್ಲಿ ಬಾಗಿಣವನಿಕ್ಕಿದ ಸ್ತ್ರೀಯರ ಪುರುಷರು ಮೃತವಾದಡೆ ಮರಳಿ ಬಾಗಿಣವನಿಕ್ಕಿ ವಿವಾಹವ ಮಾಡುವರು. ವಿವಾಹವಾದ ಸ್ತ್ರೀಯರ ಪುರುಷರು ಮೃತವಾದಡೆ ಮರಳಿ ಹಳದಿಯ ಪೂಸಿ ವಿವಾಹವ ಮಾಡುವರೆ ? ಮಾಡಲಾಗದು. ಅದರೊಳಗೊಬ್ಬ ಪತಿವ್ರತಾಸ್ತ್ರೀಯಳು ಎನ್ನ ಪ್ರಾಣವಲ್ಲಭನು ಮೃತವಾದನೆಂದು ಆ ಪುರುಷಂಗೆ ತನ್ನ ಪ್ರಾಣತ್ಯಾಗ ಮಾಡುವಳು. ಒಬ್ಬರು ಮಂಡಿಬೋಳಾಗಿ ಮೈ ಬತ್ತಲೆಯಿರ್ಪರು. ಒಬ್ಬರು ಮರಳಿ ಒಬ್ಬ ಪುರುಷನ ಕೈ ಹಿಡಿದು ಪೋಗುವದ ಕಂಡು ಬೆರಗಾದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಾಲಿಲ್ಲದ ನಡೆ, ಒಡಲಿಲ್ಲದ ರೂಪು, ಕಂಗಳಿಲ್ಲದ ನೋಟ, ಮನವಿಲ್ಲದ ಬೇಟ; ಭಾವವಿಲ್ಲದ ತೃಪ್ತಿ , ಜೀವವಿಲ್ಲದ ಶರಣನ ಸುಳುಹ ಕಂಡು ಬೆರಗಾದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕೊಡುವಾತ ಶಿವ, ಕೊಂಬಾತ ಶಿವ, ಹುಟ್ಟಿಸುವಾತ ಶಿವ, ಕೊಲ್ಲುವಾತ ಶಿವನೆಂಬ ದೃಷ್ಟವನರಿಯದೆ, ನಡುಮನೆಯಲೊಂದು ದೇವರ ಜಗುಲಿಯನಿಕ್ಕಿ ಅದರ ಮೇಲೆ ಹಲವು ಕಲ್ಲು ಕಂಚು ಬೆಳ್ಳಿ ತಾಮ್ರದ ಪಾತ್ರೆಯನಿಟ್ಟು ಪೂಜೆ ಮಾಡಿ, ತಲೆ, ಹೊಟ್ಟೆ, ಕಣ್ಣುಬೇನೆ ಹಲವು ವ್ಯಾಧಿ ದಿನ ತಮ್ಮ ಕಾಡುವಾಗ ನಮ್ಮನೆದೇವರೊಡ್ಡಿದ ಕಂಟಕವೆಂದು ಬೇಡಿಕೊಂಡು ಹರಕೆಯ ಮಾಡಿ, ತನ್ನ ಸವಿಸುಖವ ಕೊಂಡು ಪರಿಣಾಮಿಸಿ, ವಿಧಿ ವಿಘ್ನ ಹೋದ ಮೇಲೆ ಪರದೇವರು ಕಾಯಿತೆಂದು ನುಡಿವವರ ಲೋಕದ ಗಾದೆಯ ಕಂಡು ನಾ ಬೆರಗಾದೆನೆಂದರೆ : ಹುಟ್ಟಿಸಿದ ಶಿವ ಪರಮಾತ್ಮ ಭಕ್ಷಿಸಿಕೊಂಡೊಯ್ಯುವಾಗ ಕಟ್ಟೆಯ ಮೇಲಣ ಕಲ್ಲು ಕಾಯುವುದೆ ? ಕಾಯದಯ್ಯ. ಮತ್ತೆ ಹೇಳುವೆ ಕೇಳಿರಣ್ಣಾ : ಸಿರಿ ತೊಲಗಿ ದರಿದ್ರ ಎಡೆಗೊಂಡು, ಮನೆಯೊಳಿಹ ಚಿನ್ನ ಬೆಳ್ಳಿ ತಾಮ್ರ ಕಂಚಿನ ಪ್ರತಿಮೆಯನೆಲ್ಲ ಒತ್ತೆಯ ಹಾಕಿ, ಹಣವ ತಂದು, ಉದರವ ಹೊರೆವಗೆ ಎತ್ತ ಹೋದನಯ್ಯಾ ಅವರ ಮನೆಯೊಳಿಹ ಮಿಥ್ಯದೈವ ? ಅಕ್ಕಸಾಲೆಯ ಮನೆಯ ಕುಪ್ಟುಟೆಯಲುರಿವುತಿಹ ಅಗ್ನಿದೇವತೆಗೆ ಗುರಿಯಾಗಿ ಹೋದವಯ್ಯಾ. ಸರ್ವದೇವಪಿತ ಶಂಭು[ವೆಂಬು]ದನರಿಯದೆ ಶಿವನಿಂದ ಹುಟ್ಟಿ, ಶಿವನಿಂದ ಬೆಳೆದು, ಶಿವದೈವವ ಮರೆದು, ಅನ್ಯದೈವವ ಹೊಗಳುವ ಕುನ್ನಿಮಾನವರ ಕಂಡು ನಾ ಬೆರಗಾದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಟ್ಟಂಬಾರಣ್ಯದೊಳಗೊಂದು ಕಟ್ಟಲಿಲ್ಲದ ದೇಗುಲವುಳಿದಿಪ್ಪುದು ನೋಡಿರಯ್ಯಾ ! ಆ ದೇಗುಲದೊಳಗೊಂದು ಸರ್ವಜೀವನೆಂಬ ರತ್ನ ಬಿದ್ದಿಪ್ಪುದು ನೋಡಿರಯ್ಯಾ ! ಆ ರತ್ನ ಮೂರುಲೋಕಕ್ಕೆ ಮೈದೋರದಿಪ್ಪುದು ನೋಡಿರಯ್ಯಾ ! ನೆಟ್ಟಕಲ್ಲಿನೊಳಗೊಬ್ಬ ಹುಟ್ಟುಗುರುಡನುದ್ಭವಿಸಿ ಬಂದು, ಆ ಸರ್ವಜೀವನೆಂಬ ರತ್ನವ ಮುಟ್ಟಿ ನೋಡಿದರೆ, ಆ ಹುಟ್ಟಗುರುಡ ತಾನೆ ರತ್ನವಾದ ಆದ ಕಂಡು ನಾ ಬೆರಗಾದೆನಯ್ಯಾ, ಜಂಗಮಲಿಂಗಪ್ರಭುವೆ.
--------------
ಜಂಗಮಲಿಂಗ ಪ್ರಭುವೆ
ಅಂತರಂಗದಲ್ಲಿ ಅರುಹಿನ ಶುದ್ಧಿಯನರಿಯದೆ, ಬಹಿರಂಗದಲ್ಲಿ ಕಂಥೆ ಕರ್ಪರ ದಂಡ ಕಮಂಡಲು ಭಸ್ಮದಗುಂಡಿಗೆ ಎಂಬ ಪಂಚಮುದ್ರೆಗಳ ಧರಿಸಿ, ಧರೆಯ ಮಂಡಲದೊಳಗೆ ಚರಿಸುವ ಅಣ್ಣಗಳ ಕಂಡು ಬೆರಗಾದೆನಯ್ಯಾ. ಅದೇನು ಕಾರಣವೆಂದೊಡೆ : ಪುರಜನರ ಮೆಚ್ಚಿಸುವೆನೆಂದು ಜಾತಿಕಾರನು ಓತು ವೇಷವ ಧರಿಸಿ ಒಡಲ ಹೊರೆವಂತೆ, ಕೊಡುಕೊಂಬುವ ಭಕ್ತನ ಮೆಚ್ಚಿಸುವೆನೆಂದು ಮೃಡನ ವೇಷವ ಧರಿಸಿ, ಒಡಲ ಕಕ್ಕುಲತೆಗೆ ತಿರುಗುವ ಕಡುಪಾತಕ ಜಡಜೀವಿಗಳ ಮುಖವ ನೋಡಲಾಗದಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ದಾಯ ಬಣ್ಣ ಲೀಯವಾಗಿ ಮೇಲೆ ಮುಗ್ಧೆಯ ಕೂಟ. ಆರೂಢದಾಧಿಕ್ಯ ಸ್ಥಾನ ಆರಾರಲ್ಲಿ ಅನುಮಾನಿಸದೆ ಮೀರಿ ಮೂವತ್ತಾರ ಕಳೆದು ತೋರಿದ ಸಂಯೋಗಕ್ಕಾನು ಬೆರಗಾದೆನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಶ್ರೀ ವಿಭೂತಿಯಿಲ್ಲದವನ ಹಣೆಯ ಸುಡುಯೆಂದಿತ್ತು ಪೌರಾಣ. ಶಿವಾಲಯವಿಲ್ಲದ ಗ್ರಾಮವ ಸುಡುಯೆಂದಿತ್ತು ಪೌರಾಣ. ಶಿವಾರ್ಚನೆಯಿಲ್ಲದವನ ಜನ್ಮವ ಸುಡುಯೆಂದಿತ್ತು ಪೌರಾಣ. ಶ್ರೀ ಶಿವಸ್ತುತಿಯಿಲ್ಲದವನ ಆಗಮವ ಸುಡುಯೆಂದಿತ್ತು ಪೌರಾಣ. ಅದು ಎಂತೆಂದರೆ : ಸಾಕ್ಷಿ :``ಧಿಗ್ ಭಸ್ಮರಹಿತಂ ಭಾಳಂ ಧಿಗ್ ಗ್ರಾಮಮಶಿವಾಲಯಂ | ಧಿಗ್ ಗನೀಶ್ರಾಶ್ರಿತಂ ಜನ್ಮ ಧಿಗ್‍ವಿದ್ಯಾಮಶಿವಾಶ್ರಯಾಂ ||'' ಎಂದುದಾಗಿ, ಎಲ್ಲಿ ಲಿಂಗಾರ್ಚನೆಯಿಲ್ಲ, ಎಲ್ಲಿ ತ್ರಿಪುಂಡ್ರವಿಲ್ಲ, ಎಲ್ಲಿ ರುದ್ರಜಪವಿಲ್ಲ ಅವನ ಮನೆ ಹೊಲೆಮಾದಿಗನ ಮನೆಯ ಸರಿಯೆಂದಿತ್ತು ಪೌರಾಣ. ಅದು ಎಂತೆಂದರೆ : ಸಾಕ್ಷಿ :``ಯತ್ರ ಲಿಂಗಾರ್ಚನಂ ನಾಸ್ತಿ | ನಾಸ್ತಿ ಯತ್ರ ತ್ರಿಪುಂಡ್ರಕಂ | ಯತ್ರ ರುದ್ರ ಜಪಂ ನಾಸ್ತಿ | ತತ್‍ಚಾಂಡಾಲ ಗುರೋರ್ಗೃಹಂ ||'' ಹೀಗೆಂಬುದನರಿಯದೆ ವಾಗದ್ವೈತದಿಂದ ಶ್ರೀವಿಭೂತಿಯ ಪೂಸದೆ, ಶ್ರೀರುದ್ರಾಕ್ಷಿಯ ಧರಿಸದೆ, ಶಿವಲಿಂಗದ ಪೂಜೆಯನನುದಿನ ಮಾಡದೆ, ಶಿವನಿರೂಪದಿಂದಲಾವರಣವನರಿಯದೆ, ಶಿವನ ಸಾಧಿಸೇನೆಂಬ ಅಜ್ಞಾನಿಗಳ ಕಂಡು ನಾ ಬೆರಗಾದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
-->