ಅಥವಾ

ಒಟ್ಟು 54 ಕಡೆಗಳಲ್ಲಿ , 24 ವಚನಕಾರರು , 48 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮ ಲಿಂಗಾಂಗಿಯ ಇರವು ಎಂತಿಪ್ಪುದಯ್ಯಾ ಎಂದರೆ ವಾಕ್ಕು ಮೂಲ ಮಂತ್ರದಲ್ಲಿ ಜೋಕೆಗುಂದದೆ ಪಾಣಿ ಶಿವಲಿಂಗಪೂಜೆಗೆ ಮಾಣದೆ ಮನಸಂದು ಪಾದವೇಕಾಂತವಾಸಕ್ಕೆ ಹರುಷದಿಂದ ಪದವಿಟ್ಟು ಗುಹ್ಯ ಬ್ರಹ್ಮಚಾರಿಯಾಗಿ ಆನಂದಮಂ ಅಳಿದು ಪಾಯುವಿನ ಗುಣ ಅದಕ್ಕದು ಸಹಜವೆಂದು ನೆಲೆಮಾಡಿ ಕರ್ಮೇಂದ್ರಿಯಂಗಳ ಕಾಲ ಮುರಿದು ಶಬ್ದ ಮೊದಲು ಗಂಧ ಕಡೆಯಾದ ನಾಲ್ಕೊಂದು ವಿಷಯಂಗಳು ತನುಮನವ ಸೋಂಕುವುದಕ್ಕೆ ಮುನ್ನವೇ ಲಿಂಗಾರ್ಪಣವ ಮಾಡಿ ಆ ವಿಷಯಂಗಳಿಗೊಳಗಾಗದೆ ಆತ್ಮತ್ರಯಂಗಳ ತಾಳ ಕೊಯ್ದು ಪಂಚಬ್ರಹ್ಮಂಗಳಂ ಪಂಚೇಂದ್ರಿಯಂಗಳಲ್ಲಿ ಪ್ರತಿಷೆ* ಮಾಡಿ ಕಾಮುಕತನವ ಕಡೆಗೊತ್ತಿ ಜ್ಞಾನೇಂದ್ರಿಯಂಗಳ ನೆನಹ ಕೆಡಿಸಿ ಪ್ರಾಣ ಮೊದಲಾದ ಮೂರೆರಡು ವಾಯುಗಳ ಜರಿದು ಸೆರೆವಿಡಿದು ಮೊದಲಾ ವಾಯುವಿನ ವಶಮಾಡಿ ಪಂಚವಾಯುವಿನ ಸಂಚಮಂ ಕೆಡಿಸಿ ಅಂತಃಕರಣಗಳೆಂಬ ಮಾನಸಗಳ್ಳರ ಕಳೆದು ದ್ವಾದಶಪತ್ರದ ಹೊಂದಾವರೆಯ ಲಿಂಗಕ್ಕೆ ನಿರಂಜನ ಪೂಜೆಯಂ ಮಾಡುವ ಪೂಜಾರಿಗಳಂ ಮಾಡಿ ಕರಣಂಗಳಂ ಗೆಲಿದು ಅಂತಃಕರಣಂಗಳ ಚಿಂತೆಗೊಳಗುವii್ಞಡಿ ಆತ್ಮಜ್ಞಾನಮಂ ಅಡಗಿಸಿ ಭೋಗಮಂ ನೀಗಿ ಪಂಚಭೂತಂಗಳೆಂಬ ಭೂಪರಿಗೆ ಪರಿಚಾರಕರಾದ ಇಪ್ಪತ್ತೆ ೈದುಜೀವರಿಗೆ ನಿರುದ್ಯೋಗಮಂ ಮಾಡಿ ಫಲಪದಂಗಳನೊದೆದು ನಿರ್ವಯಲಕೂಟಕ್ಕೆ ಮನವಿಟ್ಟು ಇಷ್ಟಲಿಂಗಮಂ ಕರದಲ್ಲಿ ಪಿಡಿದು ಪೂಜೆಯಂ ಮಾಡಿ ಆ ಲಿಂಗಮಂ ಅನಿಮಿಷ ದೃಷ್ಟಿಯಿಂದ ನೋಡುವುದೀಗ ಲಿಂಗದ ನೋಟ. ಅದು ರತ್ನಾಕರ ಜಂಬೂದ್ವೀಪದ ಸುನಾದ ಬ್ರಹ್ಮದ ಕೂಟ. ಹೀಂಗಲ್ಲದೆ ಪಂಚಭೂತಂಗಳ ಕುಟಿಲವ್ಯಾಪಾರಂಗಳೆಂಬ ಬಲೆಗೆ ತಾನು ಸಿಲ್ಕಿ ಭಕ್ತಿ ಜ್ಞಾನ ವೈರಾಗ್ಯಮಂ ಸುಟ್ಟುರುಹಿ ಉಪಾಧಿಕೆಯಲ್ಲಿ ಒಡವೆರದು ಹೊಟ್ಟೆಯ ಕಿಚ್ಚಿಗೆ ಇಷ್ಟಲಿಂಗಮಂ ಕರದಲ್ಲಿ ಪಿಡಿದು ಪೂಜೆಯಂ ಮಾಡಿ ಇದಿರ ಮೆಚ್ಚಿಸುವೆನೆಂದು ಆ ಲಿಂಗವ ನೋಡುವ ನೋಟವೆಂತಿಪ್ಪುದೆಂದೊಡೆ ಹೊತ್ತು ಹೋಗದ ಕೋಡಗ ತಿರುಗಾಟಕ್ಕೆ ಬಂದು ಮಾಣಿಕ್ಯಮಂ ಕಂಡು ಆ ಮಾಣಿಕ್ಯವ ಕರದಲ್ಲಿ ಪಿಡಿದು ಮೂಸಿ ನೆಕ್ಕಿ ನೋಡಿ ಹಲ್ಲುಗಿರಿದು ನೋಡಿ ನೋಡಿ ಕಾಲಮಂ ಕಳೆದ ತೆರನಂತಾಯಿತಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಕಟ್ಟಿಗೆಯ ಹೊರೆಯ ಹೊತ್ತು ಬಟ್ಟೆಯಲ್ಲಿ ಬಳಲಿ ಬರುವ ಮನುಜನಂ ಕಟ್ಟದಿರಿನಲ್ಲಿ ಕಂಡು, ಆ ಹೊರೆಗೆ ತಲೆಗೊಟ್ಟವರಿಗೆ ಪುಣ್ಯವುಂಟು. ಇದ್ದ...ಭಕ್ತ ವಿರಕ್ತರಿಗೆ ಮುಟ್ಟಾಳಾಗಿ, ಅವರ ಅನುವರಿತು ತಾ ನಡೆಯಬೇಕು. ನಡೆಯದಿರ್ದಡೆ ಹೋಗಲಿ ಅರ...... ಯಿಷ್ಟ ಇಲ್ಲದೆ, ಇದ ತನ್ನ ಕಟ್ಟುಮಾಡಿಕೊಳ್ಳ ಹೇಳಿದವರಾರೋ ಎಂದು, ತನ್ನ ನಷ್ಟಕ್ಕೆ ತಾನೇ ಎಯ್ದಿದ್ದಾನೆಂ[ಬ]ವಿಶ್ವಾಸಹೀನನ ಕೊರಳಲ್ಲಿ ಶಿವಲಿಂಗವು ಕಟ್ಟಿರ್ದಡೇನಯ್ಯಾರಿ ಪಡುವಲದ ಕಾಯಿಗೆ ಕ[ಲ್ಲ] ಕಟ್ಟಿ ಇಳಿಯ ಬಿಟ್ಟಂತೆ. ಮೈತುಂಬ ವಿಭೂತಿಯನಿಟ್ಟುಕೊಂಡಿರ್ದಡೇನಯ್ಯಾ ? ಕೊಟ್ಟಿಗೆಯ ಮೇಗಣ ಕಗ್ಗುಂಬಳ ಕಾಯಂತೆ...ವೇನಯ್ಯಾ? ಹುತ್ತದೊಳಗಣ ನಿಧಾನದಂತೆ. ಈ ಕೆಟ್ಟತನವುಳ್ಳ ಭಂಡರ ಕಂಡು ಹೊಟ್ಟೆಯ ಹೊಯ್ದುಕೊಂಡು ನಗುತಿರ್ದ ಅಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಬೆಟ್ಟದ ನೆಲ್ಲಿಯಕಾಯ ಪಟ್ಟಣಕ್ಕೆ ಹೊತ್ತುಕೊಂಡು ಹೋಗಿ ಹೊಟ್ಟೆಯ ಹೊರೆವವನಂತೆ, ಉತ್ತಮ ತೇಜಿಯ ಹೆಸರ ಕೇಳಿ ಕಡಲೆಯ ತಿಂಬ ಗಾವಲಿಗನಂತೆ, ಅತ್ತೆಯ ಹೆಸರ ಹೇಳಿ ಹೊಟ್ಟೆಯ ಹೊರೆವ ತೊತ್ತಿನಂತೆ, ಆದ್ಯರ ವಚನಂಗಳ ಅಲ್ಲಿಗಲ್ಲಿಗೆ ಉಸುರಿ ಅನ್ನ ಕೂಳಿಂಗೆ ಹರಿದಾಡುವ ಅಜ್ಞಾನಿಗಳ ಅನುಭಾವಿಗಳೆಂಬೆನೆ ? ಅಯ್ಯಾ, ವಿರಕ್ತರೆಂಬೆನೆ ? ವೇಷವ ಹೊತ್ತು ತಿರುಗುವ ಡೊಂಬನಂತೆ ಬಲ್ಲೆ ಬಲ್ಲೆನೆಂಬ ಅಹಂಕಾರವ ನುಡಿವ ಭವಿಗಳ ಅನುಭಾವಿಗಳೆಂಬೆನಲ್ಲದೆ ವಿರಕ್ತರೆಂಬೆನೆ ? ವಿಷಯವ ಮುಂದುಗೊಂಡು ತಿರುಗುವ ಅನುಭಾವಿಗಳನೆಂತು ವಿರಕ್ತರೆಂಬೆನಯ್ಯಾ ಅಮುಗೇಶ್ವರಲಿಂಗವೆ ?
--------------
ಅಮುಗೆ ರಾಯಮ್ಮ
-->