ಅಥವಾ

ಒಟ್ಟು 19 ಕಡೆಗಳಲ್ಲಿ , 1 ವಚನಕಾರರು , 19 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆನಹಿಗೆಬಾರದ ವಸ್ತುವ ನೆನವಪರಿ ಇನ್ನೆಂತೋ ! ಭಾವಕ್ಕೆಬಾರದ ವಸ್ತುವ ಭಾವಿಸುವಪರಿ ಇನ್ನೆಂತೋ ! ನೆನೆಯದೆ ಭಾವಿಸದೆ ಎನ್ನೊಳಗೆ ಬಯಲುರೂಪವಾಗಿ ತೋರಿದನು ನೋಡಾ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ಆತನ ದಿವ್ಯರೂಪು ನೋಡಿ ಎನ್ನ ಕಂಗಳು ದಣಿಯವು. ಆತನ ಲಲ್ಲೆವಾತ ಕೇಳಿ ಎನ್ನ ಕಿವಿಗಳು ದಣಿಯವು. ಆತನ ಜಿಹ್ವೆಯ ಚುಂಬಿಸಿ ಎನ್ನ ಬಾಯಿ ದಣಿಯದು. ಆತನ ಸರ್ವಾಂಗವನಪ್ಪಿ ಎನ್ನ ತನು ದಣಿಯದು. ಆ ಅಖಂಡೇಶ್ವರ ಕೂಡಿ ಒಳಪೊಕ್ಕು ಪರಿಣಾಮ ಸೂರೆಗೊಂಡು ಎನ್ನ ಮನ ದಣಿಯದು ನೋಡಿರವ್ವಾ.
--------------
ಷಣ್ಮುಖಸ್ವಾಮಿ
ಗುರುಪ್ರಸಾದಿಯಾದಡೆ ಬಡತನ ಎಡರು ಕಂಟಕಂಗಳು ಬಂದು ತಾಗಿದಲ್ಲಿ ಧೈರ್ಯಗುಂದದಿರಬೇಕು. ಲಿಂಗಪ್ರಸಾದಿಯಾದಡೆ ಉಪಾದ್ಥಿಯಿಂದ ಪರರಿಗೆ ಬಾಯ್ದೆರೆಯದಿರಬೇಕು. ಜಂಗಮಪ್ರಸಾದಿಯಾದಡೆ ಅಂಗಕ್ಕೆ ವ್ಯಾದ್ಥಿ ಸಂಘಟಿಸಿದಲ್ಲಿ ನಾರು ಬೇರು ವೈದ್ಯವ ಕೊಳ್ಳದಿರಬೇಕು. ಇಂತೀ ಪ್ರಸಾದದ ಘನವನರಿಯದ ಸಂತೆಯ ಸೂಳೆಯ ಮಕ್ಕಳಿಗೆ ಎಂತು ಮೆಚ್ಚುವನಯ್ಯ ನಮ್ಮ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ಸಿರಿ ಬಂದೊದಗಿತ್ತೆಂದು ಹಿರಿದಾಗಿ ಹಿಗ್ಗಬೇಡ. ಸಿರಿಯೆಂಬುದು ಕನಸಿನಪರಿಯಂತೆ ಕಂಡೆಯಾ ಎಲೆ ಮರಳು ಮಾನವಾ. ಇದನರಿತು ನಂಬಿ ಶ್ರೀ ಮಹಾದೇವನ ಪೂಜಿಸಿದರೆ ಸ್ಥಿರವಾದ ಪದವನೀವ ನಮ್ಮ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ತನುವ ಗುರುವಿಂಗೆ ಕೊಟ್ಟು ಗುರುಭಕ್ತನಾಗಬೇಕು. ಮನವ ಲಿಂಗಕ್ಕೆ ಕೊಟ್ಟು ಲಿಂಗಭಕ್ತನಾಗಬೇಕು. ಧನವ ಜಂಗಮಕ್ಕೆ ಕೊಟ್ಟು ಜಂಗಮಭಕ್ತನಾಗಬೇಕು. ಇಂತೀ ತ್ರಿವಿಧಭಕ್ತಿಯ ವರ್ಮವನರಿಯದವರ ಮೆಚ್ಚ ನಮ್ಮ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ವಿರಕ್ತಂಗೆ ಕಾಮಕ್ರೋಧಂಗಳುಂಟೆ ? ವಿರಕ್ತಂಗೆ ಲೋಭಮೋಹಂಗಳುಂಟೆ ? ವಿರಕ್ತಂಗೆ ಮದಮತ್ಸರಂಗಳುಂಟೆ ? ವಿರಕ್ತಂಗೆ ಆಶಾರೋಷಂಗಳುಂಟೆ ? ವಿರಕ್ತಂಗೆ ಕ್ಲೇಶತಾಮಸಂಗಳುಂಟೆ ? ವಿರಕ್ತಂಗೆ ದೇಹಪ್ರಾಣಾಬ್ಥಿಮಾನಂಗಳುಂಟೆ ? ವಿರಕ್ತಂಗೆ ಇಹಪರದ ತೊಡಕುಂಟೆ ? ವಿರಕ್ತಂಗೆ ನಾನು ನನ್ನದೆಂಬ ಪಕ್ಷಪಾತವುಂಟೆ ? ಇಂತೀ ಭೇದವನರಿಯದ ವಿರಕ್ತಂಗೆ ಎಂತು ಮಚ್ಚುವನಯ್ಯಾ ನಮ್ಮ ಅಖಂಡೇಶ್ವರ ?
--------------
ಷಣ್ಮುಖಸ್ವಾಮಿ
ನುಡಿಯಲ್ಲಿ ಕರ್ಕಶವಿಲ್ಲದೆ ನಡೆಯಲ್ಲಿ ಬೀಸರವಾಗದೆ, ಹಿಡಿದ ಭಕ್ತಿಯ ಕಡೆತನಕ ಬಿಡದೆ, ಬಡತನ ಎಡರು ಕಂಟಕ ಬಂದಲ್ಲಿ ಚಿಂತೆಯಿಂದ ಕಾಂತಿಗುಂದದೆ ಅಡಿಗಡಿಗೆ ಶಿವನೆಂಬ ನುಡಿಯ ಮರೆಯದೆ ಇರ್ಪ ಸದ್ಭಕ್ತಂಗೆ ಬೇಡಿದ ಪದವ ಕೊಡುವ ನಮ್ಮ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ಸತ್ಯಾಸತ್ಯವೆಂದು ವಿವರಿಸಿ ತಿಳಿದು ಅಸತ್ಯವ ಕಳೆದು ಸತ್ಯವ ಸಾಧಿಸಬಲ್ಲಡೆ ಘನಲಿಂಗದೇವರೆಂಬೆನು. ನಿತ್ಯಾನಿತ್ಯವೆಂದು ವಿವರಿಸಿ ತಿಳಿದು ಅನಿತ್ಯವ ಕಳೆದು ನಿತ್ಯವ ಹಿಡಿಯಬಲ್ಲಡೆ ಘನಲಿಂಗದೇವರೆಂಬೆನು. ಪುಣ್ಯಪಾಪವೆಂದು ವಿವರಿಸಿ ತಿಳಿದು ಪಾಪವ ಕಳೆದು ಪುಣ್ಯವ ಗ್ರಹಿಸಬಲ್ಲಡೆ ಘನಲಿಂಗದೇವರೆಂಬೆನು. ಧರ್ಮಕರ್ಮವೆಂದು ವಿವರಿಸಿ ತಿಳಿದು ಕರ್ಮವ ಕಳೆದು ಧರ್ಮವ ಬಿಡದಿರಬಲ್ಲಡೆ ಘನಲಿಂಗದೇವರೆಂಬೆನು. ಆಚಾರ ಅನಾಚಾರವೆಂದು ವಿವರಿಸಿ ತಿಳಿದು ಅನಾಚಾರವ ಕಳೆದು ಆಚಾರಸಂಪನ್ನನಾಗಬಲ್ಲಡೆ ಘನಲಿಂಗದೇವರೆಂಬೆನು. ಇಂತೀ ಉಭಯದ ನ್ಯಾಯವನರಿಯದೆ ಸಟೆಯನೆ ದಿಟವ ಮಾಡಿ ದಿಟವನೆ ಸಟೆಯಮಾಡಿ ಘಟವ ಹೊರೆವ ಕುಟಿಲ ಕುಹಕರ ತುಟಿಯತನಕ ಮೂಗಕೊಯ್ದು ಕಟವಾಯ ಸೀಳಿ ಕನ್ನಡಿಯ ತೋರಿ ಕಷ್ಟಜನ್ಮದಲ್ಲಿ ಹುಟ್ಟಿಸದೆ ಬಿಡುವನೆ ನಮ್ಮ ಅಖಂಡೇಶ್ವರ ?
--------------
ಷಣ್ಮುಖಸ್ವಾಮಿ
ಮಹೇಂದ್ರಜಾಲದಂತೆ ಕಣ್ಣಮುಂದೆ ಒಡ್ಡಿದ ಹುಸಿಯ ಸಂಸಾರದಲ್ಲಿಯೇ ಎಡ್ಡಾಗಬೇಡಿರೋ ಎಲೆ ಎಡ್ಡ ಪ್ರಾಣಿಗಳಿರಾ! ಅಡ್ಡದಾಸೆಗೆ ದುಡ್ಡಿನ ಲಾಭವ ಕಳೆವರೇ ? ಗುರುಲಿಂಗಜಂಗಮದ ಸೇವೆಯ ತೊರೆದು ಸಂಸಾರದಲ್ಲಿ ಬೆರೆದರೆ ಮುಂದೆ ನರಕದಲ್ಲಿಕ್ಕುವ ನಮ್ಮ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ಸುರಚಾಪದಂತೆ ತೋರಿ ಅಡಗುವ ತನುವ ನೆಚ್ಚಬೇಡರೋ ! ಸಚ್ಚಿದಾನಂದ ಗುರುಲಿಂಗಜಂಗಮದ ಪೂಜೆಯ ನಿಚ್ಚ ನಿಚ್ಚ ಮಾಡಿದರೆ ಮಚ್ಚಿ ಮಹಾಪದವಿಯನೀವ ನಮ್ಮ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ಶರಣಸ್ಥಲದ ಕುರುಹಿನ ಮಾರ್ಗವನರಿಯದೆ, ನಾನು ಶರಣ ತಾನು ಶರಣನೆಂದು ನುಡಿವ ಕರ್ಮಜೀವಿಗಳ ಮುಖವ ನೋಡಲಾಗದು. ಅದೇನು ಕಾರಣವೆಂದೊಡೆ : ತಾವು ಶರಣರಾದಡೆ ತಮ್ಮ ಚಿತ್ತಿನ ಕೊನೆಯಲ್ಲಿ ಮುಸುಕಿದ ಕತ್ತಲೆಯ ಕಳೆಯಬೇಕು. ತಾವು ಶರಣರಾದಡೆ ತಮ್ಮ ಆತ್ಮನ ಸುತ್ತಿದ ಅಷ್ಟಮದಂಗಳ ಕತ್ತರಿಗಡಿಯಬೇಕು. ತಾವು ಶರಣರಾದಡೆ ತಮ್ಮ ಲಿಂಗದಲ್ಲಿ ಅತ್ತಿತ್ತ ಹರಿದಾಡುವ ಮನವ ನಿಕ್ಷೇಪವ ಮಾಡಬೇಕು. ತಾವು ಶರಣರಾದಡೆ ನಿತ್ಯಾನಿತ್ಯವನರಿದು ತತ್ತಾ ್ವತತ್ತ್ವಂಗಳ ವ್ಯಕ್ತೀಕರಿಸಿ ಮಹಾಜ್ಞಾನದ ಮೊತ್ತದಲ್ಲಿ ಸುಳಿಯಬೇಕು. ಇಂತೀ ಭೇದವನರಿಯದೆ ತುತ್ತು ಸವಿಯೆಂದುಂಡು ಮರ್ತ್ಯದ ವಿಷಯಪ್ರಪಂಚಿನ ಸುಖದಲ್ಲಿ ವ್ಯವಹರಿಸಿ, ಅಜ್ಞಾನದ ಕತ್ತಲೆಯಲ್ಲಿ ಸೆರೆಯ ಸಿಕ್ಕಿ ಮುಂದುಗಾಣದೆ ಮುಕ್ತಿಯ ಹೊಲಬುದಪ್ಪಿ ಹೋಗುವ ವ್ಯರ್ಥಪ್ರಾಣಿಗಳ ಕಂಡು ನಗುತಿರ್ದನು ನೋಡಾ ನಮ್ಮ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ಅಷ್ಟಮೂರ್ತಿಗಳು ದೇವರೆಂಬ ಭ್ರಷ್ಟಭವಿಗಳ ಮಾತ ಕೇಳಲಾಗದು. ಅದೇನು ಕಾರಣವೆಂದೊಡೆ : ಪೃಥ್ವಿದೇವರಾದಡೆ, ಅಪ್ಪುವಿನ ಪ್ರಳಯದಲ್ಲಿ ಕರಗುವುದೆ ? ಅಪ್ಪು ದೇವರಾದಡೆ, ಅಗ್ನಿಯ ಪ್ರಳಯದಲ್ಲಿ ಅರತು ಹೋಗುವುದೆ ? ಅಗ್ನಿ ದೇವರಾದಡೆ, ವಾಯುವಿನ ಪ್ರಳಯದಲ್ಲಿ ಆರಿ ಹೋಗುವುದೆ ? ವಾಯು ದೇವರಾದಡೆ, ಆಕಾಶದ ಪ್ರಳಯದಲ್ಲಿ ಲಯವಪ್ಪುದೆ ? ಆಕಾಶ ದೇವರಾದಡೆ ಆತ್ಮನಲ್ಲಿ ಅಡಗಿಹೋಗುವುದೆ ? ಆತ್ಮದೇವರಾದಡೆ, ದ್ವಂದ್ವಕರ್ಮಂಗಳನುಂಡು ಜನನಮರಣಂಗಳಲ್ಲಿ ಬಂಧನವಡೆವನೆ ? ಚಂದ್ರಸೂರ್ಯರು ದೇವರಾದಡೆ ಭವಬಂಧನದಲ್ಲಿ ಸಿಲ್ಕಿ ತೊಳಲಿ ಬಳಲುವರೆ ? ಇದು ಕಾರಣ ಇಂತೀ ಅಷ್ಟತನುಗಳು ಎಂತು ದೇವರೆಂಬೆನು ? ದೇವರದೇವ ಮಹಾದೇವ ಮಹಾಮಹಿಮ ಎನ್ನೊಡೆಯ ಅಖಂಡೇಶ್ವರ ಒಬ್ಬನೆ ದೇವನಲ್ಲದೆ ಉಳಿದವರೆಲ್ಲ ಹುಸಿ ಹುಸಿ ಎಂಬೆನು ನೋಡಾ !
--------------
ಷಣ್ಮುಖಸ್ವಾಮಿ
ಶರಣಭರಿತ ಶಿವನು ಶಿವಭರಿತ ಶರಣನೆಂಬುದು ನಿಜವಲ್ಲದೆ, ಜಗಭರಿತ ಶಿವನು ಶಿವಭರಿತ ಜಗವೆಂಬುದು ಹುಸಿ ನೋಡಾ ! ಅದೇನು ಕಾರಣವೆಂದೊಡೆ : ಜಗಕ್ಕೆ ಪ್ರಳಯ ಮಹಾಪ್ರಳಯಂಗಳುಂಟು. ಇದು ಕಾರಣ, ಪ್ರಳಯಾತೀತ ಶರಣಸನ್ನಿಹಿತ ನಮ್ಮ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ಮನೆಗೆ ಬಂದ ಜಂಗಮವ ಕಂಡು ಮನದಲ್ಲಿ ಉದಾಸೀನವ ತಾಳಿ ಮೋರೆಯನಡ್ಡನಿಕ್ಕಿದರೆ ಜಾರಿಹೋಯಿತ್ತು ನೋಡಾ ಹಿಂದೆ ಮಾಡಿದ ಭಕ್ತಿ. ಪಙÂ್ತಯಲ್ಲಿ ಕುಳಿತ ಜಂಗಮಕ್ಕೆ ಒಂದ ನೀಡಿ ತಾನೊಂದನುಂಡರೆ ಹುಳುಗೊಂಡದಲ್ಲಿಕ್ಕುವ ನೋಡಾ ನಮ್ಮ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ಇದಿರಿನಲ್ಲಿ ಜಂಗಮವು ಬರುವುದು ಕಂಡು ಸದರನಿಳಿದು ನಡೆದು ಹೋಗಿ, ಚರಣಕ್ಕೆರಗುವುದೆ ಉತ್ತಮಭಕ್ತಿ ಎನಿಸಿತ್ತು. ಇದ್ದ ಸ್ಥಾನದಲ್ಲಿಯೇ ಎದ್ದು ನಿಲ್ಲುವುದೆ ಮಧ್ಯಮಭಕ್ತಿ ಎನಿಸಿತ್ತು. ಕುಳಿತಲ್ಲಿಯೇ ಕರಮುಗಿಯುವುದೆ ಕನಿಷ*ಭಕ್ತಿಯೆನಿಸಿತ್ತು. ಈ ಮೂರುತೆರದ ಭಕ್ತಿಯಿಲ್ಲದೆ ಗರ್ವದಿಂದ ಬೆರತುಕೊಂಡು ಕುಳಿತರೆ ಮುಂದೆ ಹಿರಿಯ ಶೂಲದ ಮೇಲೆ ಕುಳ್ಳಿರಿಸುವನು ನೋಡಾ ನಮ್ಮ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->