ಅಥವಾ

ಒಟ್ಟು 18 ಕಡೆಗಳಲ್ಲಿ , 1 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಾಂತ್ಯತೀತೋತ್ತರಕಲೆ, ಶಾಂತ್ಯತೀತಕಲೆಗಳಿಲ್ಲದಂದು, ಶಾಂತಿಕಲೆ ವಿದ್ಯಾಕಲೆಗಳಿಲ್ಲದಂದು, ಪ್ರತಿಷ್ಠೆಕಲೆ ನಿವೃತ್ತಿಕಲೆಗಳಿಲ್ಲದಂದು, ಮಹಾಸಾದಾಖ್ಯ ಶಿವಸಾದಾಖ್ಯವಿಲ್ಲದಂದು, ಅಮೂರ್ತಿಸಾದಾಖ್ಯ ಮೂರ್ತಿಸಾದಾಖ್ಯವಿಲ್ಲದಂದು, ಕರ್ತೃಸಾದಾಖ್ಯ ಕರ್ಮಸಾದಾಖ್ಯವಿಲ್ಲದಂದು, ಅವಾಚ್ಯಪ್ರಣವವಾಗಿದ್ದನಯ್ಯ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆದಿಮೂಲ ಅನಾದಿಮೂಲವಿಲ್ಲದಂದು, ಅಜಾಂಡ ಬ್ರಹ್ಮಾಂಡವಿಲ್ಲದಂದು, ವೇದಾಂತ ಸಿದ್ಧಾಂತವಿಲ್ಲದಂದು, ವ್ಯೋಮ ವ್ಯೋಮಾಕಾಶವಿಲ್ಲದಂದು, ಜೀವಹಂಸ ಪರಮಹಂಸರಿಲ್ಲದಂದು, ಅಜಪೆ ಗಾಯತ್ರಿ ಇಲ್ಲದಂದು, ಅನಂತಕೋಟಿ ವೇದಾಗಮ ಶಾಸ್ತ್ರಪುರಾಣಂಗಳಿಲ್ಲದಂದು, ಭಾವ ನಿರ್ಭಾವವಿಲ್ಲದಂದು, ಶೂನ್ಯ ನಿಶ್ಶೂನ್ಯವಿಲ್ಲದಂದು, ಅವಾಚ್ಯಪ್ರಣವವಾಗಿದ್ದನಯ್ಯಾ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಿರ್ಮಲಜಾಗ್ರ ನಿರ್ಮಲಸ್ವಪ್ನವಿಲ್ಲದಂದು, ನಿರ್ಮಲಸುಷುಪ್ತಿ ನಿರ್ಮಲತೂರ್ಯವಿಲ್ಲದಂದು, ನಿರ್ಮಲವ್ಯೋಮ ನಿರ್ಮಲವ್ಯೋಮಾತೀತವಿಲ್ಲದಂದು ನಿರಂಜನಪ್ರಣವವಾಗಿದ್ದನಯ್ಯ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಏನೂ ಏನೂ ಎನಲಿಲ್ಲದ ಅನಾದಿ ಅಕಾರ, ಅನಾದಿ ಉಕಾರ, ಅನಾದಿ ಮಕಾರವೆಂಬ ಪ್ರಣವತ್ರಯಂಗಳ ನೆನಹು ಮಾತ್ರದಲ್ಲಿಯೇ ಆದಿ ಪ್ರಣವ ಉತ್ಪತ್ಯವಾಯಿತು. ಆ ಆದಿ ಪ್ರಣವಸ್ಥಲದ ವಚನವದೆಂತೆಂದಡೆ : ಆಧಾರಚಕ್ರ ಸ್ವಾದ್ಥಿಷ್ಠಾನಚಕ್ರ ಉತ್ಪತ್ಯವಾಗದ ಮುನ್ನ , ಮಣಿಪೂರಕಚಕ್ರ ಅನಾಹತಚಕ್ರ ಉತ್ಪತ್ಯವಾಗದ ಮುನ್ನ , ವಿಶುದ್ಧಿಚಕ್ರ ಆಜ್ಞಾಚಕ್ರ ಉತ್ಪತ್ಯವಾಗದ ಮುನ್ನ , ಬ್ರಹ್ಮಚಕ್ರ ಶಿಖಾಚಕ್ರ ಉತ್ಪತ್ಯವಾಗದ ಮುನ್ನ , ಪಶ್ಚಿಮಚಕ್ರ ಅಣುಚಕ್ರ ಉತ್ಪತ್ಯವಾಗದ ಮುನ್ನವೆ ಓಂಕಾರವೆಂಬ ಆದಿಪ್ರಣವವಾಗಿದ್ದನು ನೋಡಾ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆದಿ ಅಕಾರದಲ್ಲಿ ತಾರಕಸ್ವರೂಪ ದಂಡಕಸ್ವರೂಪ ಉತ್ಪತ್ಯವಾಗದ ಮುನ್ನ ಮುನ್ನ, ಆದಿ ಉಕಾರದಲ್ಲಿ ಕುಂಡಲಾಕಾರ ಅರ್ಧಚಂದ್ರಕಸ್ವರೂಪ ಉತ್ಪತ್ಯವಾಗದ ಮುನ್ನ ಮುನ್ನ, ಆದಿ ಮಕಾರದಲ್ಲಿ ದರ್ಪಣಾಕಾರ ಜ್ಯೋತಿಸ್ವರೂಪ ಉತ್ಪತ್ಯವಾಗದ ಮುನ್ನ ಮುನ್ನ, ಆದಿ ಅಕಾರ ಉಕಾರ ಮಕಾರ-ಈ ಮೂರು ಏಕವಾಗಿ ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವ ಉತ್ಪತ್ಯವಾಗದ ಮುನ್ನ ಮುನ್ನವೆ ಓಂಕಾರವೆಂಬ ಅನಾದಿಪ್ರಣವವಾಗಿದ್ದನು ನೋಡಾ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರಿಲ್ಲದಂದು, ಸರಸ್ವತಿ ಮಹಾಲಕ್ಷ್ಮಿ ಗಿರಿಜೆ ಉಮಾಶಕ್ತಿ ಮನೋನ್ಮನಿಶಕ್ತಿ ಮೊದಲಾದ ಮಹಾಶಕ್ತಿಗಳಿಲ್ಲದಂದು, ಸಚರಾಚರಂಗಳೆಲ್ಲ ರಚನೆಗೆ ಬಾರದಂದು, ಅವಾಚ್ಯಪ್ರಣವವಾಗಿದ್ದನು ನೋಡಾ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಿರಾಳಜಾಗ್ರ ನಿರಾಳಸ್ವಪ್ನವಿಲ್ಲದತ್ತತ್ತ , ನಿರಾಳಸುಷುಪ್ತಿ ನಿರಾಳತೂರ್ಯವಿಲ್ಲದತ್ತತ್ತ , ನಿರಾಳವ್ಯೋಮ ನಿರಾಳವ್ಯೋಮಾತೀತವಿಲ್ಲದತ್ತತ್ತ , ನಿರಂಜನಪ್ರಣವವಾಗಿದ್ದನಯ್ಯ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸಪ್ತಕೋಟಿ ಮಹಾಮಂತ್ರ ವಿಶಾಲವಾಗದಂದು, ತೊಂಬತ್ತುನಾಲ್ಕು ಪದ ವಿಶಾಲವಾಗದಂದು, ವರ್ಣ ಐವತ್ತೆರಡು ವಿಶಾಲವಾಗದಂದು, ಇನ್ನೂರಾ ಇಪ್ಪತ್ತುನಾಲ್ಕು ಭುವನ ವಿಶಾಲವಾಗದಂದು, ತೊಂಬತ್ತಾರುತತ್ವ ವಿಶಾಲವಾಗದಂದು, ಅರುವತ್ತುನಾಲ್ಕು ಕಲೆಜ್ಞಾನ ವಿಶಾಲವಾಗದಂದು, ಓಂಕಾರವೆಂಬ ಅನಾದಿಪ್ರಣವವಾಗಿದ್ದನು ನೋಡಾ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಜ್ಞಾನಜಾಗ್ರ ಜ್ಞಾನಸ್ವಪ್ನವಿಲ್ಲದ ಮುನ್ನ, ಜ್ಞಾನಸುಷುಪ್ತಿ ಜ್ಞಾನತೂರ್ಯವಿಲ್ಲದ ಮುನ್ನ, ಜ್ಞಾನವ್ಯೋಮ ಜ್ಞಾನವ್ಯೋಮಾತೀತವಿಲ್ಲದ ಮುನ್ನ, ನಿರಂಜನಪ್ರಣವವಾಗಿದ್ದನಯ್ಯ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅವಾಚ್ಯತತ್ತ್ವ ತಲೆದೋರದಂದು, ಕಲಾ ತತ್ತ್ವ ತಲೆದೋರದಂದು, ಅನಾದಿತತ್ತ್ವ ತಲೆದೋರದಂದು, ಆದಿತತ್ತ್ವ ತಲೆದೋರದಂದು, ಚಿನ್ನಾದ, ಚಿದ್ಬಿಂದು, ಚಿತ್ಕಳೆ ತಲೆದೋರದಂದು, ನಾದ ಸುನಾದ ತಲೆದೋರದಂದು, ಮಹಾನಾದ ಗುಹ್ಯನಾದ ತಲೆದೋರದಂದು, ಇವೇನು ಏನೂ ಎನಲಿಲ್ಲದಂದು, ನಿರಂಜನಾತೀತನಾಗಿದ್ದನಯ್ಯ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಶಿವತತ್ವವಿಲ್ಲದಂದು, ಸದಾಶಿವತತ್ವವಿಲ್ಲದಂದು, ಮಹೇಶ್ವರತತ್ವವಿಲ್ಲದಂದು, ಕೇವಲತತ್ವವಿಲ್ಲದಂದು, ಸಕಲತತ್ವವಿಲ್ಲದಂದು, ಶುದ್ಧತತ್ವವಿಲ್ಲದಂದು, ಈ ತತ್ವಂಗಳೇನು ಏನೂ ಎನಲಿಲ್ಲದಂದು ನಿರಂಜನಪ್ರಣವವಾಗಿದ್ದನಯ್ಯ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪರಾಪರವಿಲ್ಲದಂದು ಆ ಪರಾಪರಕ್ಕಪರವಾಗಿಹ ಪರಬ್ರಹ್ಮವಿಲ್ಲದಂದು, ಪರಶಿವವಿಲ್ಲದಂದು, ಶೂನ್ಯ ನಿಃಶೂನ್ಯ ಮಹಾಶೂನ್ಯ ಅತಿಮಹಾಶೂನ್ಯ ಎಂಬ ಮಹಾಘನವಸ್ತುವಿಲ್ಲದಂದು, ಊಧ್ರ್ವಶೂನ್ಯ, ಅಧಃಶೂನ್ಯ, ಮಧ್ಯಶೂನ್ಯವಾಗಿಹ ನಿರಾಮಯಬ್ರಹ್ಮವಿಲ್ಲದಂದು, ಶಂಕರ ಶಶಿಧರ ಗಂಗಾಧರ ಗೌರೀಶ ವೃಷಭವಾಹನರಿಲ್ಲದಂದು, ಉಮಾಪತಿಯಿಲ್ಲದಂದು, ಸುರಾಳ-ನಿರಾಳ, ಹಮ್ಮು-ಬಿಮ್ಮು ಮದಹಂಕಾರವಿಲ್ಲದಂದು, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರಿಲ್ಲದಂದು, ಪೃಥ್ವಿ ಅಪ್ಪು ತೇಜ ವಾಯು ಆಕಾಶವಿಲ್ಲದಂದು, ಚಂದ್ರಸೂರ್ಯಾತ್ಮರಿಲ್ಲದಂದು, ಇವೇನೂ ಎನಲಿಲ್ಲದಂದು, ನಿರಂಜನಾತೀತನಾಗಿರ್ದನಯ್ಯ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆದಿ ರುದ್ರ ಆದಿ ಈಶ್ವರ ಆದಿ ಸದಾಶಿವರಿಲ್ಲದ ಮುನ್ನ ಮುನ್ನ, ಆದಿ ಅಕಾರ ಆದಿ ಉಕಾರ ಆದಿ ಮಕಾರಕ್ಕೆ ಆದಿ ನಾದ ಆದಿ ಬಿಂದು ಆದಿ ಕಲೆಗಳು ಆಧಾರವಾಗದ ಮುನ್ನ ಮುನ್ನ, ಆ ಆದಿ ನಾದ-ಬಿಂದು-ಕಲೆಗಳಿಗೆ ಆ ಆದಿ ಪ್ರಕೃತಿಗಳಾಧಾರವಾಗದ ಮುನ್ನ ಮುನ್ನ, ಆ ಆದಿ ಪ್ರಾಣಕ್ಕೆ ಲಿಂಗಾಧಾರವಾಗದ ಮುನ್ನ ಮುನ್ನವೆ ಓಂಕಾರವೆಂಬ ಅನಾದಿಪ್ರಣವವಾಗಿದ್ದನು ನೋಡಾ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಿರಂಜನಪ್ರಣವ ಅವಾಚ್ಯಪ್ರಣವ ಉತ್ಪತ್ಯವಾಗದತ್ತತ್ತ , ಕಲಾಪ್ರಣವ ಅನಾದಿಪ್ರಣವ ಉತ್ಪತ್ಯವಾಗದತ್ತತ್ತ , ಅಕಾರ ಉಕಾರ ಮಕಾರವೆಂಬ ಬೀಜ ಉತ್ಪತ್ಯವಾಗದತ್ತತ್ತ , ನಾದ ಬಿಂದು ಕಳೆ ಉತ್ಪತ್ಯವಾಗದತ್ತತ್ತ , ಪ್ರಕೃತಿ ಪ್ರಾಣ ಓಂಕಾರ ಉತ್ಪತ್ಯವಾಗದತ್ತತ್ತ , ಲೋಕಾದಿಲೋಕಂಗಳೇನೂ ಉತ್ಪತ್ಯವಾಗದತ್ತತ್ತ , ನಿರಂಜನಪ್ರಣವಾತೀತನಾಗಿದ್ದನಯ್ಯ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸಕಲತತ್ವವಿಲ್ಲದಂದು, ನಿಷ್ಕಲತತ್ವವಿಲ್ಲದಂದು, ಸಕಲನಿಷ್ಕಲತತ್ವವಿಲ್ಲದಂದು, ಪರಶಿವತತ್ವವಿಲ್ಲದಂದು, ನಿರಂಜನತತ್ವವಿಲ್ಲದಂದು, ಈ ತತ್ವಗಳೇನೂ ಎನಲಿಲ್ಲದಂದು, ನಿರಂಜನಾತೀತನಾಗಿದ್ದನಯ್ಯ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನಷ್ಟು ... -->