ಅಥವಾ

ಒಟ್ಟು 17 ಕಡೆಗಳಲ್ಲಿ , 1 ವಚನಕಾರರು , 17 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಹ್ಯದಲ್ಲಿ ಶ್ರದ್ಧೆಭಾವ, ಭಾವದಲ್ಲಿ ಬಳಕೆ ನಾಸ್ತಿಯಾಗಿ, ಅಮಳಕಫಲ ಕರದಲ್ಲಿದ್ದಂತೆ ಕಲೆದೋರದಿರು, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಮತ್ಸ್ಯ ಹೊಳೆಯ ನುಂಗಿ, ಮೊಸಳೆ ಮಡುವ ನುಂಗುವಾಗ ಅಡಗಿರ್ದು ನೋಡಿ ಕಂಡೆ. ಕೊಡಗೂಸು ಅಡಗುವ ಠಾವ, ಒಡಗೂಡಿದಲ್ಲದೆ ಕಾಣಬಾರದು, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ರಣದಲ್ಲಿ ಧನು ಮುರಿದ ಮತ್ತೆ, ಸರವೇನ ಮಾಡುವುದು ? ಅಂಗ ಲಿಂಗವ ಮರೆದಲ್ಲಿ, ಅರಿವುದಕ್ಕೆ ಆಶ್ರಯ ಇನ್ನಾವುದು ಹೇಳಿರಣ್ಣಾ ? ಅರಿವಿಂಗೆ ಕುರುಹು, ಅರಿವು ಕುರುಹಿನಲ್ಲಿ ನಿಂದು, ಕಾಷ್ಠದಿಂದೊದಗಿದ ಅಗ್ನಿ ಕಾಷ್ಠವ ಸುಟ್ಟು, ತನಗಾಶ್ರಯವಿಲ್ಲದಂತಾಯಿತ್ತು. ಹಾಗಾಗಬೇಕು, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಅಂಗೈಯದು ಹೆಂಗಳಾಗಿ, ನೋಡುವ ಕಂಗಳು ಪುರುಷನಾಗಿ ಉಭಯವನರಿವುದು, ಪ್ರಜಾಪತಿಯಾಗಿ. ಚಿದ್ಘನಶಕ್ತಿ ಯೋನಿಯಲ್ಲಿ ಕೂಡಿ, ಬಿಂದು ವಿಸರ್ಜನವಾಯಿತ್ತು. ಅದು ಲೀಯವಾಗಲ್ಪಟ್ಟುದು ಲಿಂಗವಾಯಿತ್ತು. ಅದು ಅಂಗೈಯಲ್ಲಿ ಅರಿಕೆ, ಕಂಗಳಿಂಗೆ ಕುರುಹು. ಮಂಗಳಮಯ ಅರ್ಕೇಶ್ವರಲಿಂಗವನರಿವುದಕ್ಕೆ ಇಷ್ಟದ ಗೊತ್ತೆ ? ಅರ್ಕೇಶ್ವರಲಿಂಗವು ತಾನು ತಾನೆ.
--------------
ಮಧುವಯ್ಯ
ಕುದುರೆಯ ನರಿ ಕೊಂದು, ನರಿಯ ಇರುಹೆ ತಿಂದು, ಆ ಇರುಹೆ ತನ್ನ ತಾ ಸತ್ತಿತ್ತು, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಮನ ಮಹದಲ್ಲಿ ನಿಂದು, ತನುವಿನ ವಿಕಾರವ ಬಿಟ್ಟ ಮತ್ತೆ ಭವ ಬಂಧದವರ ಒಲವರವೇಕೆ ? ಅದು ಸಲೆ ನೆಲೆಯಲ್ಲ, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಆಕಾಶದ ಮಧ್ಯದಲ್ಲಿ ಒಂದು ಭೇಕ ನುಡಿಯುತ್ತದೆ. ಅದು ಅನೇಕ ಗೀತ ವಾದ್ಯ ನೃತ್ಯಂಗಳಿಂ[ದಾಡುತ್ತಿದ್ದಿತ್ತು]. ಎನ್ನಾಟವ ನೋಡುವರಿಲ್ಲಾಯೆಂದು ನೇತಿಗಳೆಯಿತ್ತು ತನ್ನಂಗವ. ಅದು ನಿರ್ಜಾತನ ಒಲುಮೆ. ಅರ್ಕೇಶ್ವರಲಿಂಗವನರಿವುದಕ್ಕೆ ತೆರಪಾಗಿರಣ್ಣಾ.
--------------
ಮಧುವಯ್ಯ
ಘಟದ ಮರೆಯಲ್ಲಿ ಅಸುವಿಪ್ಪಂತೆ, ಫಲದ ಮರೆಯಲ್ಲಿ ರಸವಿಪ್ಪಂತೆ, ಶಿಲೆಯ ಮರೆಯಲ್ಲಿ ಕಾಲ ಲಯನ ಲೀಲೆ ತೋರುತ್ತದೆ. ಲೀಲೆ ನಿರ್ವಯಲಾಗಿ, ಆ ಬಯಲ ಬಂಧನವನರಿ, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಜಾತಿ ಜಾತಿಯ ಕೊಂದು, ನಿಹಿತ ಅನಿಹಿತವ ಕೆಡಿಸಿ, ಜಾತ ಅಜಾತನ ಕಂಡು ನಿಹಿತವಾಗಿರಿ, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಆಕಾಶದ ಮಳೆಯನರಿತು, ಭೂಮಿಯ ಬೆಳೆಯನರಿತು, ಹುಟ್ಟುವ ಬೀಜವನರಿತು, ದೃಷ್ಟವ ಕಂಡು ಹೊತ್ತಾಡಿ, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಆತ್ಮ ಶಯನನಾಗಿದ್ದಲ್ಲಿ ತನುವಿನ ಸಂಚಾರವ ಮರೆದು, ಸ್ವಪ್ನಾವಸ್ಥೆಯಲ್ಲಿ ಜಾಗ್ರದಿರವನರಿವಂತೆ, ಸ್ವಪ್ನದ ಭೇದವ ಸುಷುಪ್ತಿಯರಿದು ವಿಶ್ರಮಿಸುವಂತೆ, ಕಾಯದ ಇಷ್ಟದ ಭೇದವನರಿ. ಅರ್ಕೇಶ್ವರಲಿಂಗವನರಿವುದಕ್ಕೆ ಉಳುಮೆಯ ಗೊತ್ತು.
--------------
ಮಧುವಯ್ಯ
ಕ್ರಿಯಾಭಾವದಲ್ಲಿ ನಿಂದು ಮಾಡುವನ ಅರ್ಚನೆ ಕಾರ್ಪಾಸದಂತಿರಬೇಕು. ಕಲ್ಪದ್ರುಮದ ಬಿತ್ತಿನ ಸಿಪ್ಪೆಯಂತಿರಬೇಕು. ವರುಣಕಿರಣದ ಸಂಚಾರ ಸಂಚರಿಸುವಂತಿರಬೇಕು. ಇದು ಕ್ರೀಶುದ್ಧತೆ, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಪೂಜೆ ಪುಣ್ಯದ ಮಾಟ, ಭವದ ಕೂಟ, ಅರಿವು ಸಂದೇಹ. ಅರಿಯದೆ ಮರೆಯದೆ ಕರಿಗೊಂಡಿರು, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಮಾಡುವ ಸತ್ಕ್ರೀಮಾರ್ಗ, ಇದಿರಿಗಲ್ಲದೆ ಲಿಂಗವ ಮುಟ್ಟಲರಿಯವು. ಸರ್ಪ ಹೆಡೆಯಲ್ಲಿ ಹೊಯಿದಡೆ ವಿಷ ಹತ್ತಬಲ್ಲುದೆ, ದಷ್ಟವಾಗಿಯಲ್ಲದೆ ? ಮನ ಭಾವ ಕ್ರೀ ತ್ರಿಕರಣ ಶುದ್ಧವಾಗು, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ತನು ನಿರ್ವಾಣ, ಮನ ಸಂಸಾರ. ಮಾತು ಬ್ರಹ್ಮ, ನೀತಿ ಅಧಮ. ಅದೇತರ ಅರಿವು ? ಘಾತಕನ ಕೈಯ ಕತ್ತಿಯಂತೆ, ಇದು ನಿಹಿತವಲ್ಲ, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಇನ್ನಷ್ಟು ... -->