ಅಥವಾ

ಒಟ್ಟು 18 ಕಡೆಗಳಲ್ಲಿ , 3 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ಭವಗೇಡಿ ನಿನ್ನುವನು ತೋರದೆ ಕಾಡಿದೆ ಹಿಂದೆ. ಅಯ್ಯಾ, ತನುಗುಣ ಸಾಹಿತ್ಯ ನೀನೆ. ನೀನೆನ್ನ ಮನದ ಮಹೋತ್ಸವನೆ ಅಯ್ಯಯ್ಯಾ, ಅವ್ವೆಯ ಅಯ್ಯನಾಗಿಯೆಂದಿಪ್ಪೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಆನಂದಸ್ಥಳದಲ್ಲಿ ಊಧ್ರ್ವ ಕಂಜಕನ್ನಿಕೆಗೆ ಇಂದುವಿನ ಕೊಡನ ಹೊತ್ತಾಡುತ್ತೈದಾಳೆ. ಮೂಲಪಟ್ಟಣದಲ್ಲಿ ಮೂವರಿಗೆ ರತಿಯ ಹುಟ್ಟಿಸುತ್ತೈದಾಳೆ. ಅಪರಪಟ್ಟಣದಲ್ಲಿ ಹಲವರಿಗೆ ಆಶ್ರಯವಾಗಿ ಐದಾಳೆ. ಮಧ್ಯಮಪಟ್ಟಣದಲ್ಲಿ ಮಹಾಮಹೀಶ್ವರರಿಗೆ ಮಹಾದಾಶ್ರಯವಾಗಿ ಐದಾಳೆ. ಇಂತು ಪಟ್ಟಣ ಹದಿನೆಂಟಕ್ಕ ಸೀಮೆ ಇಪ್ಪತ್ತೈದು, ಗ್ರಾಮ ಮೂವತ್ತಾರು ಸಂಯೋಗವೆಂಬ ನಗರಿಯಲ್ಲಿ ನಿತ್ಯಸಾನಂದನೆಂಬಾತ ಕುಳ್ಳಿದ್ದು, ಪಟ್ಟಣ ಹನೆಂಟರ ವ್ಯಾಪ್ತಿಯ ತಳವಾರರೆಂಟು ಮಂದಿಯ ಗ್ರಾಮ ಬಂಧನೆಯ ಮಾಡಲೀಯದೆ ಸುಚಿತ್ತದಿಂ ನಡಸುತ್ತೈದಾನೆ. ನೆನೆವ ಮನಸ್ಸಿನಲ್ಲಿ ಅವಿತಥವಿಲ್ಲದೆ ಚಿತ್ತವೃತ್ತಿಯನ್ನರಿತು ಮಹಾಲೋಕದಲಿಪ್ಪ ಮೂನ್ನೂರ ಮೂವತ್ತಮೂರು ಕುಲದುರ್ಗಂಗಳಂ ಪಾಟಿಸಿ ಸುಯಿಧಾನಿಯಾಗಿರುತ್ತೈದಾನೆ. ಅಜಲೋಕದಲ್ಲಿ, ಶುದ್ಧಸಂಯೋಗ ಸಂಗಮನೆಂಬ ಗೃಹದಲ್ಲಿ, ಮೂಲಕ ಮುಕ್ತಕಾ ರುದ್ರಕ ಅನುಮಿಷಕ ಆಂದೋಳಕ ವಿಚಿತ್ರಕ ಸಕಲ ಮುಕ್ತ್ಯಕ್ಕ, ಸಾನಂದ ಸತ್ಯಕ್ಕ ಇಂತಪ್ಪ ಮಹಾಸ್ತ್ರೀಯರ ಚಿತ್ತಕ್ಕೆ ಸಗುಣವಪ್ಪುದನೊಂದನೆ ಕೂಡಿ ಭೋಗಿಸುತ್ತೈದಾನೆ. ಅವರು ಸ್ತ್ರೀಯರು, ತಾ ಪುರುಷನಾಗಿ ಕೂಡುತ್ತೈದಾನೆ, ಅವಿತಥವಿಲ್ಲದೆ ಆ ಕೂಟದ ಸುಖವನು ಶಿಶು ಬಲ್ಲ, ಶಿಶುವಿನ ಜನನವನು ಅವ್ವೆ ಬಲ್ಲಳು. ಅವ್ವೆಯ ಇಚ್ಛಾ ಮಾತ್ರದಲ್ಲಿದ್ದು ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ತೈಲಿಂಗಕ್ಕೆ ಮೂಲವಾದಳವ್ವೆ.
--------------
ಸಿದ್ಧರಾಮೇಶ್ವರ
ಪ್ರಸಾದತತ್ವದ ಪ್ರಾದೇಶಿಕನು ನೀನೆ, ಸಾದಾಖ್ಯತತ್ವಗಳ ಸಮನಿಸದಿಹ ನಾದಬಿಂದುಕಳೆಯ ಆಮಧ್ಯಾವಸಾನ ಮೂದೇವರಿಗೆ ತಾನು ಶಕ್ತವಲ್ಲಾ. ಅವ್ವೆಯ ಕರದಲ್ಲಿ ಅವ್ಯಯ ತಾನಿಪ್ಪ ಒಯ್ಯನೆ ನಡೆಯಯ್ಯ ಮಠದೊಳಯಿಂಕೆ. ಮಠದೊಳಗಣ ಭೇದ ಕುಟಿಲಕ್ಕೆ ಇಂಬಿಲ್ಲ, ಮಠವ ಶುದ್ಧಿಯ ಮಾಡೆಲೆ ಮರುಳು ತಾಯೆ. ಅಡಿಗಡಿಗೆ ಸಂಗಮದ ನುಡಿಯ ನೀನಾಡಿ ಒಡಗೂಡವ್ವಾ ಕಪಿಲಸಿದ್ಧಮಲ್ಲಿಕಾರ್ಜುನನಾ.
--------------
ಸಿದ್ಧರಾಮೇಶ್ವರ
ಹೆಸರಿಡಬಾರದ ಲಿಂಗವ ಕರಸ್ಥಳಕ್ಕೆ ಹೆಸರಿಟ್ಟು ತಂದನೆನ್ನ ಗುರು. ಆ ಹೆಸರಿಟ್ಟ ಲಿಂಗದ ಹೆಸರು ಹೇಳುವೆನು. ಕಂಜಕನ್ನಿಕೆಯ ಹಣೆಯಲ್ಲಿ ವಿದ್ಥಿವಶವೆಂದು ಬರೆದ ಐದಕ್ಷರವೆ ಆತನ ಪರಮನಾಮ. ಅವ್ವೆಯ ಕರಂಗಳೊಪ್ಪಿಪ್ಪ ಅಕ್ಷರಂಗಳಾರೆ ದ್ವಿತೀಯ ನಾಮ. ಅವ್ವೆಯ ಆನಂದ ಮನ್ಮಸ್ತಕದಲ್ಲಿ ಒಪ್ಪಿಪ್ಪ ಅಕ್ಷರದ್ವಯವೆ ಆತನ ಆಚಾರ್ಯನಾಮ. ಇಂತು ನಾಮತ್ರಯಂಗಳನರಿದು ಧ್ಯಾನಾರೂಢನಾಗಿ ಲಿಂಗಾರ್ಚನೆಯ ಮಾಡುವರೆತ್ತಾನೊಬ್ಬರು. ಬಸವಣ್ಣ ಮೊದಲಾದ ಸಕಲ ಪುರಾತರು, ಅವ್ವೆಯ ಅನುಮತದಿಂದ ಶುದ್ಧ ಸಿದ್ಧ ಪ್ರಸಿದ್ಧ ಲಿಂಗಾರ್ಚನೆಯಂ ಮಾಡಿ ನೀನಾದರು. ಎನಗಿನ್ನಾವುದು ಹದನೈ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಉತ್ತರ ದಕ್ಷಿಣ ಪೂರ್ವ ಪಶ್ಚಿಮವೆಂಬ ದಿಕ್ಕಿನ ಹಂಗು ಹರಿದೆ. ನೀನುತ್ತರದಲ್ಲಿ ಓಂಕಾರ ಪ್ರದೀಪನಾಗಿ ಉತ್ತರದ್ವಾರದಲ್ಲಿ ಬಪ್ಪಾಗ ಆನೊಡನೆ ಬಂದೆ. ನೀನು ಅರಿತೂ ಅರಿಯದ ಹಾಂಗೆ ಇದ್ದೆ. ದಕ್ಷಿಣದ್ವಾರದಲ್ಲಿ ಜನಿತ ನಾಶವಾಗಿ ಬಪ್ಪಂದು ಆನೊಡನೆ ಬಂದು ನೀನರಿಯದಂತಿದ್ದೆ. ನೀನು ಪೂರ್ವದ್ವಾರದಲ್ಲಿ ಅಕ್ಷರದ್ವಯದ ವಾಹನವೇರಿಬಪ್ಪ್ಲ ಆನೊಡನೆ ಬಂದೆ. ನೀ ಪಶ್ಚಿಮದ್ವಾರದ್ಲ ಅವ್ವೆಯ ಮನದ ಕೊನೆಯ ಮೇಲೆ ಅವ್ಯಕ್ತಶೂನ್ಯವಾಗಿ ಬಪ್ಪಾಗ ಒಡನೆ ಬಂದೆ ಎಲೆ ಅಯ್ಯಾ. ಎನ್ನನು ಅನ್ಯಕ್ಕೊಪ್ಪಿಸುವ, ಎನ್ನನು ಶುದ್ಧ ನಾನು ನಿನ್ನವನಲ್ಲಾ. ಆನು ಬಂದ ಬರವ, ಇದ್ದ ಇರುವ ಆನರಿಯೆನಲ್ಲದೆ ನೀ ಬಲ್ಲೆ. ಅರಿದು ಕಾಡುವುದುಚಿತವೆ? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಬ್ರಹ್ಮ ಅವ್ವೆಯ ಗಂಡನಾದ. ವಿಷ್ಣು ಅಕ್ಕನ ಗಂಡನಾದ. ರುದ್ರ ಕಿರುತಂಗಿಯ ಗಂಡನಾದ. ಈ ಮೂವರ ಹೋಬಳಿ ಇದೇನು ಚೋದ್ಯ! ಇಂತಿವು ಮಾಯಾಮಲಯೋನಿ ಸಂಬಂಧ. ಏಕಗುಣ ಭಾವ, ತರುಕೊಂಬು ಫಲದಂತೆ. ಸಾಕು ಸಂಸರ್ಗ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಸಂಸಾರವೆಂಬ ಘೋರ ಕಾಂತಾರದೊಳಗೆನ್ನನಾಸುರ ಬಿಡದಿರಾ ಬೊಪ್ಪ. ಎನ್ನ ಬೆಂಬಳಿಯೊಳಿರ್ದು ಸಾಕಾ ಬೊಪ್ಪ. ಎನ್ನ ಹೊರೆಯೊಳಿರ್ದು ಸಾಕಾ ಬೊಪ್ಪ. ಈ ಪ್ರಿಯ ನಾಯಿ ತೋಡಿ ತಿನ್ನುತ್ತಿದೆ, ಕಾಮನೆಂಬ ವೈರಿಗೊಪ್ಪಿಸರೆನ್ನ ಬೊಪ್ಪ. ಅವ್ವೆಯ ಮನೋನಾಥಾ, ನಿರಂಜನ ನಿರ್ಮಾಯ ನಿರವಯ, ನಿಶ್ಶೂನ್ಯ ನಿರಾಲಂಬ ನಿರಾಭಾರಿ ನಿವ್ರ್ಯಸನಿ. ಮುಕ್ತಿಸಾಮ್ರಾಜ್ಯಕ್ಕೊಡೆಯ ನೀನೆಯಯ್ಯಾ. ನಿನ್ನನಗಲದಂತೆ ನಿನ್ನ ಶ್ರೀಪಾದದೊಳಿಂಬಿಡಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಶುದ್ಧ ಸಿದ್ಧ ಪ್ರಸಿದ್ಧ ಪಂಚಮಹಾವಾಕ್ಯಂಗಳನರಿದೆನೆಂಬ ಯೋಗಿ ಕೇಳಾ ನೀನು. ಶುದ್ಧವಾವುದು? ಸಿದ್ಧವಾವುದು? ಪ್ರಸಿದ್ಧವಾವುದು? ಹೇಳಿರೇ ಬಲ್ಲರೆ. ಪ್ರಾಣಾಯಾಮದಲಿ ಪ್ರವೇಶಿಸಬಲ್ಲಡೆ ಅದು ಶುದ್ಧ, ಪ್ರತ್ಯಾಹಾರದಲಿ ಪ್ರಕಟಿಸಬಲ್ಲಡೆ ಸಿದ್ಧ. ಪಂಚಬ್ರಹ್ಮದಲಿ ಪ್ರವೇಶಿಸಬಲ್ಲಡೆ ಪ್ರಸಿದ್ಧ. ಕೋಹಂ ತತ್ವಾರ್ಥವಂ ಮೀರಿದ, ಆಜ್ಞಾಸೀಮೆಯ ಸಮನಿಸಿದ, ಪ್ರಸಿದ್ಧಬ್ರಹ್ಮವನು ಮೀರಿದ, ಅನಾಹತವನಾನಂದವ ಮಾಡಿದ, ಆಶಕ್ತಿಯ ಸಂಯೋಗವಂ ಮಾಡಿದ, ಉರುತರ ಪರಮಸೀಮೆಯಂ ದಾಂಟಿದ. ಮಾತೆಯಿಲ್ಲದ ಜಾತನ, ಗಮನವಿಲ್ಲದ ಗಮ್ಯನ, ಆ ಯಾರೂ ಅರಿಯದ ಅನಾಥನ, ಹಮ್ಮಿನ ಸೊಮ್ಮಳಿದ ನಿತ್ಯನ, ಅನಂತ ಬ್ರಹ್ಮಾಂಡವಳಿವಲ್ಲಿ ಏನೆಂದರಿಯದ ಸತ್ಯನ, ಸಕಳ ನಿಷ್ಕಳಾತ್ಮಕದ ಪೂರ್ಣನಪ್ಪ ಮುಕ್ತನ, ಬ್ರಹ್ಮಯೋಗವನರಿವರನೇಡಿಸುವ ಶಕ್ತನ, ಅವ್ವೆಯ ಮನದ ಕೊನೆಯ ಮೊನೆಯ ಮೇಲೆ ನಿತ್ಯನಾಗಿಪ್ಪ ಒಡೆಯನ, ಪ್ರಾಣಶೂನ್ಯನಪ್ಪ ಭಕ್ತಂಗೆ ಪ್ರಾಣನಾಗಿಪ್ಪ ಲಿಂಗನ, ಷಡ್ವಿಧ ಭಕ್ತಿಯಲ್ಲಿ ಸಂಯೋಗವ ಮಾಡುವ ಶರಣನ, ಇಹಪರ ಏಕವಾಗಿಪ್ಪಾತನ ತೋರಿದನೆನ್ನ ಗುರು ಬಸವಣ್ಣನ ಕಂಡೆನಾತನ ಕೊಂಡೆ, ಆತನ ಪಾದೋದಕ ಪ್ರಸಾದವ ಹಿಂದೆ ಉಂಡ ಹಂಗೆ ಇನ್ನು ಉಂಡೆನಾಯಿತ್ತಾದೊಡೆ, ಹಿಂದೆ ಬಂದ ಹಂಗೆ ಇನ್ನು ಬಂದೆನಾಯಿತ್ತಾದೊಡೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯ ನಿಮ್ಮಾಣೆ.
--------------
ಸಿದ್ಧರಾಮೇಶ್ವರ
ಮಗ ತಂದೆಯ ಕೊಂದು, ತಮ್ಮವ್ವೆಗೆ ಮೊಲೆನೀರ ಮಿಂದ. ತಾಯ ಶಿಶು ತಿಂದು, ಅವ್ವೆಯ ಮೊಲೆಯನರಸಿ ಅಳುತ್ತಿದ್ದಿತ್ತು. ಶಿಶುವಿನ ಹೊಟ್ಟೆಯಲ್ಲಿದ್ದ ಶಿಶು ತಾಯ ಬೆಸೆಯಿತ್ತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವನರಿತಲ್ಲಿ,
--------------
ಸಗರದ ಬೊಮ್ಮಣ್ಣ
ತತ್ವಮಸಿಯೆಂಬ ವೃಕ್ಷದ ಕೆಳಗೆ ದ್ವಯವಿಲ್ಲವೆಂದು ಏಕಏಕವೆಂದು ಆಡುತ್ತೈದಾನೆ. ಅದು ನಿತ್ಯಮುಕ್ತಿ, ಅದೆ ವಿಸ್ತಾರವೆಂದು ಆಡುತ್ತೈದಾನೆ. ಈಡ ದ್ವಾರಕ್ಕೆ ಹೋದಿರಾದಡೆ ನಾಲ್ವರ ಮೂಲ ನಾಶವ ಮಾಡಿ, ಅವ್ವೆಯ ಸರ್ವಾಂಗಮಂ ಸೂರೆಗೊಂಡು ಕಪಿಲಸಿದ್ಧಮಲ್ಲಿಕಾರ್ಜುನಯ್ಯನೊಡಗೂಡಿದರೆ ಗಿರಿಯ ಮೇಲಣ ದುರ್ಗವಂ ಬಲ್ಲೆ.
--------------
ಸಿದ್ಧರಾಮೇಶ್ವರ
ಆರರಲ್ಲಿ ಅನುಮಿಷವು, ಮೂರರಲ್ಲಿ ಮುನಿಮುಕ್ತಿ ತೋರುವ ಪ್ರಾಪಂಚು ಸೀಮೆಯ ಗಾರಪ್ಪ ವರ್ಗವನು ಮೀರಿಪ್ಪ ಸೀಮೆಯ ತೋರಿಪ್ಪ ಅತಿಶಯದ ತತ್ವಂಗಳನು ಸೊಮ್ಮಿನ ಹಮ್ಮಿನ ಕರ್ಮದ ಕ್ರೀಯುವನು ನಿಃಕರ್ಮವೊಳಗಾದ ಸಾದಾಖ್ಯವಾ ಅವ್ವೆಯ ಮನದ ಆನಂದ ಸಾತ್ವಿಸಲು ತಾನೊಂದು ರೂಪಾಗಿ ತೋರ್ಕುರಲು ಅಯ್ಯನಜಲೋಕದಲಿ ಒಯ್ಯನಕ್ಷರದ್ವಯದ ಸ್ವೇಯ ಹೇಯಯೆಂಬ ಬೀಜಂಗಳ ದ ಮರುಗದ ಸಿಂಹಾಸನದೊಳಗಿಪ್ಪ ಕೇಶರದ ಹಲವು ಬಣ್ಣದಲಿಪ್ಪ ಅಣುಮಾತ್ರ ಮಥನದಲ್ಲಿ ಮಥನಿಸುವ ಕಥನದಿಚ್ಛೆಯ ನೋಡ, ಸುಚಿತ್ತಂದರ್ಚಿಸೈ ಕಪಿಲಸಿದ್ಧ ಮಲ್ಲೇಶ್ವರನ.
--------------
ಸಿದ್ಧರಾಮೇಶ್ವರ
ಸ್ಥೂಲ ಸೂಕ್ಷ ್ಮ ಕಾರಣನೆಂದೆಂಬರಲ್ಲಾ ನಿನ್ನನು. ಅದರ ಹಿಂದು ಮುಂದನರಿಯರು:ಬಂದ ಹಾಂಗೆ ನುಡಿವರು. ಸ್ಥೂಲಕ್ಕೆ ನೆಲೆ ಯಾವುದು, ಹೇಳಿಹೆ ಕೇಳಿರಾ ಮನುಜರಿರಾ. ಸ್ಥೂಲವದು ಅನೇಕ ಬ್ರಹ್ಮಾಂಡಗಳ ಮೀರಿಪ್ಪುದು; ಅದು ಸ್ಥೂಲವೆ? ಅಲ್ಲ, ಹಾಂಗಿರಲಿ. ಶ್ರೀ ಗುರುಸ್ವಾಮಿ ವಿಸ್ತಾರ ವಿಸ್ತಾರ ವಿಸ್ತಾರವೆಂದು ಕೊಟ್ಟ ಲಿಂಗವೀಗ ಸ್ಥೂಲ. ಆ ಲಿಂಗವು ಸಕಲ ವ್ಯಾಪ್ತಿಯ ತನ್ನೊಳಗೆ ಇಂಬಿಟ್ಟುಕೊಂಡ ಕಾರಣ ಸೂಕ್ಷ ್ಮವಾದ. ಶಿಷ್ಯಕಾರಣ ಪರಶಿವಮೂರ್ತಿಯಾದ ಕಾರಣ ಕಾರಣವಾದ. ಎಲೆ ಗುರುವೆ, ಲಿಂಗವೆ, ಜಂಗಮವೆ, ನೀವು ಒಂದಾದ ಭೇದವ ಲೋಕದ ಜಡರೆತ್ತ ಬಲ್ಲರು? ಬಸವಣ್ಣ ಬಲ್ಲ. ಆ ಬಸವಣ್ಣ ಅವ್ವೆಯ ಮನೋನಾಥ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಬಸವಣ್ಣನ ಪ್ರಸಾದವ ಕೊಂಡು ಭವಂ ನಾಸ್ತಿಯಾಗಿ ಬದುಕಿದೆನು.
--------------
ಸಿದ್ಧರಾಮೇಶ್ವರ
ಆನಂದಸ್ಥಾನ ಅಪರಸ್ಥಾನ ಮಧ್ಯಮಸ್ಥಾನದ ಭೇದಂಗಳ ಹೇಳುವೆ: ಆನಂದಕ್ಕೆ ಅನೇಕ ಪರಿಯ ಬಣ್ಣ, ಅರುವತ್ತೆಸಳಿನ ಕಮಳ, ಹನಾರಕ್ಷರ ವಿಪರೀತ, ಬಹುಶ್ರುತನೆಂಬಾತನಧಿದೇವತೆ. ಅಪರಸ್ಥಾನದಲ್ಲಿ ಅಕ್ಷರವೆರಡರ ಸಿಂಹಾಸನ, ಆಮಧ್ಯಸ್ಥಾನವಿಲ್ಲದ ಕಮಲವೊಂದು ಎಸಳು ಎರಡು ಅಪರಸ್ಥಾನಕ್ಕೆ ಅಜಲೋಕಪರಿಯಂತ ವೇಧಿಸುತಿಪ್ಪ ಕಮಳ ಶುದ್ಧ ಸ್ಫಟಿಕ ಸಂಕಾಶವರ್ಣ ಅವ್ವೆಯ ಆಂದೋಳದ ಕ್ರಿಯಾಕಾರ ತ್ವಮಸಿಯೆಂಬ ನೀಲಾಸಂಗಮ, ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಅಧಿದೇವತೆ.
--------------
ಸಿದ್ಧರಾಮೇಶ್ವರ
ಗುರುವಿನ ಕೃಪೆಯಿಂದ ಸಾಧಾರಣ ತನುವ ಮರೆದೆ. ಗುರುವಿನ ಕೃಪೆಯಿಂದ ಮಲತ್ರಯದ ಪಂಕವ ತೊಳೆದೆ. ಗುರುವಿನ ಕೃಪೆಯಿಂದ ದೀಕ್ಷಾತ್ರಯಂದನುಭವಿಯಾದೆ. ಗುರುವಿನ ಕೃಪೆಯಿಂದ ಶುದ್ಧಸಿದ್ಧಪ್ರಸಿದ್ಧ ಪ್ರಮಾಣವನರಿದವನಾದೆ. ಎನಗೆ ಅಧಿಕ್ಯವಪ್ಪ ವಸ್ತು ಎನಗೆ ಬೇರೊಂದೂ ಇಲ್ಲ. ಅದೇನು ಕಾರಣ? ಅವನಾದೆನಾಗಿ. ಗುರುವೆ ಎನ್ನ ತನುವಿಗೆ ಲಿಂಗದೀಕ್ಷೆಯ ಮಾಡಿ, ಎನ್ನ ಜ್ಞಾನಕ್ಕೆ ಸ್ವಾನುಭಾವದೀಕ್ಷೆಯ ಮಾಡಿ, ಎನ್ನ ತನುಮನದ್ಲ ವಂಚನೆಯಿಲ್ಲದೆ ಮಾಡಲೆಂದು ಜಂಗಮೀಕ್ಷೆಯ ಮಾಡಿ, ಎನ್ನ ಸರ್ವಾಂಗವೂ ನಿನ್ನ ವಿಶ್ರಾಮಸ್ಥಾನ ಶುದ್ಧಮಂಟಪವಾದ ಕಾರಣದಲ್ಲಿ ಲೋಕವ್ಯಾಪ್ತಿಯನರಿದೆ, ಲೋಕವೆನ್ನೊಳಗಾಯಿತು, ಆ ಲೋಕಕ್ಕೆ ಹೊರಗಾದೆ. ಅದೇನು ಕಾರಣ? ಜನನ ಮರಣ ಪ್ರಳಯಕ್ಕೆ ನಾ ಹೊರಗಾದೆ ನಾ. ನೀ ಸದ್ಗುರುವೆ ಎನ್ನ ಭವದ ಬೇರ ಹರಿದೆ ಗುರುವೆ, ಭವಪಾಶ ವಿಮೋಚನಾ ಅವ್ವೆಯ ಮನದ ಸರ್ವಾಂಗಲೋಲುಪ್ತ ಭುಕ್ತಿ ಮುಕ್ತಿ ಫಲಪ್ರದಾಯಕ ಗುರುವೆ ಬಸವಣ್ಣ, ಕಪಿಲಸಿದ್ಧಮಲ್ಲಿಕಾರ್ಜುನ ನೀನಾಗಿ ಚೆನ್ನಬಸವಣ್ಣನಾಗಿ, ಪ್ರಭು ಮೊದಲಾದ ಅಸಂಖ್ಯಾತರೆಲ್ಲರನೂ ತೋರಿದೆ ಗುರುವೆ ಕಪಿಲಸಿದ್ಧಮಲ್ಲಿಕಾರ್ಜು£
--------------
ಸಿದ್ಧರಾಮೇಶ್ವರ
ತನುಗುಣದ ಪಾತ್ರೆಯಲಿ ತವಕಿಸುವ ಭೇದವನು ಅನುನಯದ ಮಲತ್ರಯದ ದುರ್ವಾಕ್ಯವನು ಘನತರದ ಸುದ್ದಿಯನು ಐದೈದುವೊಂದಾಗಿ ತನುಗುಣವನತಿಗಳೆದು ಪ್ರಾಪಂಚಿಕಾತತ್ವದಿಂದತ್ತತ್ತ ಮತ್ತೆ ತ್ವಮಸಿಯಾಗಿ ಭಕ್ತಿ ಕಾರಣ ಲೋಕರೂಪನಾಗಿ ಏಕೈಕ ಸಂಬಂಧಿ ಆಕಾರ ನಿರ್ವಿಘ್ನ ಆನಂದದವ್ಯಯದ ಅಂತ್ಯದಲ್ಲಿ ಅವ್ವೆಯ ಮುಖಕಮಳ ಐಯನಜಾತಸ್ಯ ಸಂಯೋಗಕದು ಶುದ್ಧ ಮುಗ್ಧನಾಗಿ ಮೂರ ಮತ್ತೊಂದೆಂದು ಒಂದು ಮೂರರ ತೃಪ್ತಿ ಸಂದಳಿದೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->