ಅಥವಾ

ಒಟ್ಟು 8 ಕಡೆಗಳಲ್ಲಿ , 5 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಣ್ಣ ತುಳಿದು ಮಡಿಕೆಯ ಮಾಡಿ ಆವಿಗೆಯನೊಟ್ಟಿ ಸುಡುವಲ್ಲಿ, ಅಗ್ನಿ ಸುಟ್ಟು ಮಡಿಕೆ ಉಳಿಯಿತ್ತು, ಹರವಿಯ ಉಪಚಾರುಳ್ಳವಂಗೆಕೊಟ್ಟು. ಉಪಚಾರಿಲ್ಲದವನ ಕೊಂದು, ಗುಡುಮಿಯ ಉಪಚಾರ ಇಲ್ಲದವಂಗೆ ಕೊಟ್ಟು ಉಪಚಾರುಳ್ಳವನ ಕೊಂದು, ಕಿಡಿಕಿಯ ಕುಲಗೇಡಿಗೆ ಕೊಟ್ಟು, ಭವಗೇಡಿಯ ಕೊಂದು, ಮೂರೆರಡು ಮಡಕಿಯ ಆರೂರವರಿಗೆ ಕೊಟ್ಟು ಈರಾರು ಈರೆಂಟು ಕೊಂದು, ಉಳಿದ ಮಡಕಿಯ ಊರೆಲ್ಲ ಮಾರಲು, ಊರು ಸುಟ್ಟು ಜನರೆಲ್ಲ ಸತ್ತು, ಸತ್ತವರ ಹೊತ್ತು ಸತ್ತು ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕೋಡಗ ಬಲಿದು ಕೋಣನಾಗಿ, ಕೋಣನ ಕೋಡಿನಲ್ಲಿ ಈರಾರು ಸೇನೆ ಸೇನೆಗೊಬ್ಬ ಭಟ, ಭಟಗೆ ಮೂವರು ಸತಿಯರು. ಸತಿಯರ ಕುಚದ ನಡುವೆ ಒಂದು ಕಸ. ಹಾವು ಕಚ್ಚಿ ಭಟರೆಲ್ಲರೂ ಸತ್ತರು. ನಿಬ್ರ್ಥೀತಿವಂತರು ಕೇಳಿ ಬಂಕೇಶ್ವರಲಿಂಗವ.
--------------
ಸುಂಕದ ಬಂಕಣ್ಣ
ಮಂಗಳದ ಸಂಗ ಅಂಗಕ್ಕೆ ಮಚ್ಚಿದುದ ಹಿಂಗಿ ಹೇಳಲ್ಕಿದಕೆ ಜಿಹ್ವೆಯುಂಟೆ? ಈರಾರು ಸುಖಗಳನು ಮೇಲಾದ ಮಧುರವನು ಓರಂತೆ ಉಂಡುದಕೆ ಪ್ರಳಯವುಂಟೆ? ನಿಗಮಂಗಳರಿಯದಿಹ ಅಗಣಿತ ಮೆಟ್ಟದಾ ಶ್ರುತಿಯ ತಪ್ಪಲಲಿರ್ದ ನಿತ್ಯತೃಪ್ತಾ ಮೂರಾರು ಈರಾರು ತೋರಿರ್ಪ ನಿಶ್ಚಯದ ಆರರಿಂದಂ ಮೇಲೆ ಸಂಯೋಗವು ಸ್ವಾನುಭಾವದ ದೀಕ್ಷೆ ತಾನು ತನಗಳವಟ್ಟು ಹೇಳದೆ ಹೋದನಾ ಇರ್ದ ಮನೆಗೆ ಮೂರನು ಮುಟ್ಟದೆ ಆರನು ತಟ್ಟದೆ ಮೀರಿ ಉರವಣಿಸಿದನು ಸಾಯುಜ್ಯದಾ ಫಲಪದವನತಿಗಳೆದು ನಿಗಮಕ್ಕಭೇದ್ಯನ ಕಂಡೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ನೀಲಕಂಧರಗಿರಿಯ ಮೇಪ್ಪ ನೀನಲ್ಲ. ಆಲಸ್ಯವಿಲ್ಲದೆ ಅತಿಶಯದ ಬಾಲ ಕನಸಿನ ಲೀಲೆಯಾಯಿತ್ತು ಭಕ್ತಿಯ ಹೇಳುವಡೆ ಆರಿಗೆಯು ಉಪಮೆಯಿಲ್ಲ. ಭಾಳನಯನದ ಮೇಲೆ ಬಾಲೆಯರ ಸಂಯೋಗ. ಈರಾರು ಬೆಳಕವರ ಇಕ್ಕೆಲದಲ್ಲಿ. ಸ್ಥೂಲ ಸೂಕ್ಷ ್ಮದಲ್ಲಿ ಮೇಪ್ಪ ಘನವದರ ಈರೇಳು ಘಟಿಸುವ ಲೋಕಕ್ಕೆ ದಿಕ್ಕರಿಗಳೆಂಟಾಗಿ ಬೆಟ್ಟವೆಂಟಾಗಿರ್ಪ ಘನತರದ ನಿಜವ ಬಲ್ಲವರಾರು? ಹೊಲಬನರಿವವರಾರು ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ನಿಜಭಕ್ತಿಯ?
--------------
ಸಿದ್ಧರಾಮೇಶ್ವರ
ಭಾವ ತ್ರಿವಿಧ, ನಿರ್ಭಾವ ತ್ರಿವಿಧ ದಂಪತಿ ಸಂಬಂಧವಾಗಿ, ಆರುಸ್ಥಲವಾಯಿತ್ತು. ಭೃತ್ಯಸ್ಥಲ ಮೂರು, ಕರ್ತೃಸ್ಥಲ ಮೂರು, ಈರಾರು ಕೂಡಿ ನಡೆವಲ್ಲಿ ಲಕ್ಷವಾಯಿತ್ತು. ಲಕ್ಷ ಅಲಕ್ಷವನರಿತು, ಹಿಡಿವ ಬಿಡುವ ಭಾವವೊಡಗೂಡಿದಲ್ಲಿ, ಕಡೆ ನಡು ಮೊದಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಾಶಿಗೆ ಹೋಗಬೇಕೆಂಬಣ್ಣಗಳು ತಲೆಕೆಳಗಾಗಿ ಕಾಲುಮೇಲಾಗಿ ನಡೆವರು. ಕೇದಾರಕ್ಕೆ ಹೋಗಬೇಕೆಂಬಣ್ಣಗಳು ಕಣ್ಣು ಹಿಂದಾಗಿ ಕಾಲುಮುಂದಾಗಿ ನಡೆವರು. ಶ್ರೀಶೈಲಕ್ಕೆ ಪೋಗಬೇಕೆಂಬಣ್ಣಗಳು ತಲೆಯಿಲ್ಲದೆ ಕಾವಡಿಯ ಹೊತ್ತು ನಡೆಯುವರು. ಇಂತೀ ತ್ರಿವಿಧ ಪುರುಷರಿಗೆ ತ್ರಿಲಿಂಗದ ದರುಶನವಾಗದು. ಮೂರು ಬಿಟ್ಟು, ಅಷ್ಟ ಕುಟ್ಟಿ, ಮೂರು ಪರ್ವತ ಸುಟ್ಟು, ಈರಾರು ಬಿಟ್ಟು, ಮೂರುಗೂಡಿದ ಬಟ್ಟೆಯ ಪಿಡಿದು ಹೊಗುವಣ್ಣಗಳಿಗೆ ತ್ರಿವಿಧ ಕ್ಷೇತ್ರದಲ್ಲಿರುವ ಲಿಂಗದರುಶನವಾಗುವದು, ಪರಿಣಾಮದೋರುವದು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆರು ಬೀಜವ ಮೀರಿ ತೋರಿತ್ತು ನೋಡಾ ಒಂದು ಬೀಜ, ಆ ಬೀಜ ಸಪ್ತಸಾಗರವ ನುಂಗಿತ್ತು, ಅರವತ್ತಾರುಕೋಟಿ ನದಿಗಳ ನುಂಗಿತ್ತು ನೋಡಾ. ಹದಿನಾಲ್ಕು ಕುದುರೆಯ ನುಂಗಿತ್ತು, ಮೂರು ಕೋಣನ ನುಂಗಿತ್ತು ನೋಡಾ. ಎಂಟಾನೆಯ ನುಂಗಿ, ಆ ಬೀಜ ಆರಾರು ಈರಾರು ಶಾಖೆಗಳಾಗಿ ಅಮೃತಫಲರಸತುಂಬಿ ತೊಟ್ಟಿಟ್ಟುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
-->