ಅಥವಾ

ಒಟ್ಟು 6 ಕಡೆಗಳಲ್ಲಿ , 4 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರತೇರು ಬಿತ್ತಿದ ಗಿಡವಿನ ಹೂವ್ವ ಕೊಯ್ದು ಊರೆಲ್ಲ ಕಟ್ಟಿದ ಕೆರೆ ನೀರ ತಂದು ನಾಡೆಲ್ಲ ನೋಡಿರಿಯೆಂದು ಪೂಜಿಸುವ ಪುಣ್ಯ ನೀರಿಗೊ ಹುವ್ವಿಗೊ ನಾಡೆಲ್ಲಕ್ಕೊ ಪೂಜಿಸಿದಾತಗೊ ಇದ ನಾನರಿಯೆ ನೀ ಹೇಳೆಂದಾತ ನಮ್ಮ ದಿಟ್ಟ ವೀರಾದ್ಥಿವೀರ ನಿಜ ಭಕ್ತ ಅಂಬಿಗರ ಚವುಡಯ್ಯನು
--------------
ಅಂಬಿಗರ ಚೌಡಯ್ಯ
ಮಣ್ಣ ತುಳಿದು ಮಡಿಕೆಯ ಮಾಡಿ ಆವಿಗೆಯನೊಟ್ಟಿ ಸುಡುವಲ್ಲಿ, ಅಗ್ನಿ ಸುಟ್ಟು ಮಡಿಕೆ ಉಳಿಯಿತ್ತು, ಹರವಿಯ ಉಪಚಾರುಳ್ಳವಂಗೆಕೊಟ್ಟು. ಉಪಚಾರಿಲ್ಲದವನ ಕೊಂದು, ಗುಡುಮಿಯ ಉಪಚಾರ ಇಲ್ಲದವಂಗೆ ಕೊಟ್ಟು ಉಪಚಾರುಳ್ಳವನ ಕೊಂದು, ಕಿಡಿಕಿಯ ಕುಲಗೇಡಿಗೆ ಕೊಟ್ಟು, ಭವಗೇಡಿಯ ಕೊಂದು, ಮೂರೆರಡು ಮಡಕಿಯ ಆರೂರವರಿಗೆ ಕೊಟ್ಟು ಈರಾರು ಈರೆಂಟು ಕೊಂದು, ಉಳಿದ ಮಡಕಿಯ ಊರೆಲ್ಲ ಮಾರಲು, ಊರು ಸುಟ್ಟು ಜನರೆಲ್ಲ ಸತ್ತು, ಸತ್ತವರ ಹೊತ್ತು ಸತ್ತು ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
[ನಂಬಿಯಣ್ಣ] ಮಾಡುವ ಭಕ್ತಿ ನಾಡೆಲ್ಲ ಮಾಡಬಹುದಯ್ಯಾ, ಕುಂಬಾರ ಗುಂಡಯ್ಯ ಮಾಡುವ ಭಕ್ತಿ ಊರೆಲ್ಲ ಮಾಡಬಹುದಯ್ಯಾ, ಬಸವಣ್ಣ ಮಾಡುವ ಭಕ್ತಿ ಶಿಶುವೆಲ್ಲ ಮಾಡಬಹುದಯ್ಯಾ, ಇದೇನು ದೊಡ್ಡಿತ್ತೆಂಬರು. ಸರ್ವರಿಗೆ ವಶವಾಗದ ಭಕ್ತಿ ಅವರ ಮನ-ಜ್ಞಾನದಂತೆ ಇರಲಿ ಶರಣಾರ್ಥಿ. ಈ ಸುಧೆಯೊಳಗೆ ಶುದ್ಧಭಕ್ತಿಯನರಿತು ನಡೆದುದು ಬಟ್ಟೆಯಾಗದೆ? ನುಡಿದುದು ಸಿದ್ಧಿಯಾಗದೆ? ದೇಹಕ್ಕೆ ಕಷ್ಟ-ನಷ್ಟ, ರೋಗ-ರುಜೆಗಳು ಬಂದು ಅಟ್ಟಿ ಮುಟ್ಟಿದವಾಗಿ, ದೃಢವಾಗಿದ್ದು ಶರಣನ ಮನವು ನಿಶ್ಚಯಿಸಿ, ದೃಢಶೀಲಂಗಳಂ ಬಿಡದೆ ನಡೆವಾತ ದೊಡ್ಡ ಭಕ್ತನೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅಯ್ಯನರಾಣಿಯೆಂಬುದ ಊರೆಲ್ಲ ಬಲ್ಲುದು, ಕೇರೆಲ್ಲ ಬಲ್ಲುದು, ಜನರೆಲ್ಲ ಬಲ್ಲರು ಇನ್ನಾರಂಜಿಕೆಯೆನಗೆ? ಸಾರಿದಡಹುದು ಸಾರದಿರ್ದಡಹುದು, ಕೊಟ್ಟಡಹುದು ಕೊಡದಿರ್ದಡಹುದು, ಎಂತಿರ್ದಂತೆ ಸಂತ ನೋಡಾ, ಗುರುನಿರಂಜನ ಚನ್ನಬಸವಲಿಂಗ ತನ್ನಂಗವಾದವಳನೇನ ಮಾಡಿದರೇನು?
--------------
ದೇಶಿಕೇಂದ್ರ ಸಂಗನಬಸವಯ್ಯ
ಊರೆಲ್ಲ ಹೇತ ಹೇಲ ಹಂದಿ ತಿಂದು ತನ್ನೊಡಲ ಹೊರೆವುದು. ತಾ ಹೇತ ಹೇಲ ತಾ ಮುಟ್ಟದು. ಮತ್ತೆ ಆ ಭವಿಯ ತಂದೆ-ತಾಯಿ ಬಂಧು-ಬಳಗವೆಂದು ಅವರಲ್ಲಿ ಹೊಕ್ಕು ಹೋಗಿ ಉಂಡವರ ಭಕ್ತಿ ಹಂದಿಗಿಂದ ಕರಕಷ್ಟ. ಅವನ ಭಕ್ತನೆನಲಾಗದು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ನೀರೊಳಗಿನ ಕಿಚ್ಚೆದ್ದು ಊರೆಲ್ಲ ಸುಟ್ಟಿತ್ತು. ಕೇರಿಯೊಳಗಣ ಸೂಳೆಯರು ಗರತಿಯಾದುದನೇನೆಂಬೆನಯ್ಯಾ. ಹಾರುವನ ಕುತ್ತಿಗೆಯ ಕೊಯ್ದು ಮೇಲಣೊರತೆಯ ಉದಕವ ಹೊಯ್ದರೆ ಹಾರುವನ ಕುಲಕೋಟಿ ಸತ್ತು ಕುಣಿಕುಣಿದು ಕೂಡಿದರು ಗುರುನಿರಂಜನ ಚನ್ನಬಸವಲಿಂಗ ಶರಣ ಬೆಂಬಳಿವಿಡಿದು.
--------------
ದೇಶಿಕೇಂದ್ರ ಸಂಗನಬಸವಯ್ಯ
-->