ಅಥವಾ

ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಕಾರ ನಿರಾಕಾರವಿಲ್ಲದಂದಿನ ಋತುವಡಗಿದ ಲಿಂಗವು ನೆನೆದ ಕಾರಣ, ನಿರ್ಮಾಯವೆಂಬ ಸತಿಯಳು ಹುಟ್ಟಿದಳು ನೋಡಾ ! ಆಕೆಯ ಅಂಗದಲ್ಲಿ ಮೂವರು ಹುಟ್ಟಿದರು ನೋಡಾ ! ಆರು ದೇಗುಲವ ಕಟ್ಟಿಸಿ, ನವಗೃಹಗಳ ಮೀರಿ ನಿಂದಿರುವ ಸತಿಯಳ ಕಂಡು ಎನ್ನ ಮನಕ್ಕೆ ನಿಶ್ಚಿಂತವಾಯಿತ್ತು ಕಾಣಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆಕಾರನಿರಾಕಾರವಿಲ್ಲದಂದು, ಋತುವಡಗಿದ ಲಿಂಗವು, ನೆನವಂ ಬೆರೆಸಲು ಝೇಂಕಾರ ಪುಟ್ಟಿತ್ತು. ಆ ನೆನವೆ ಆತ್ಮನಂ ಬೆರೆಸಲು ಆಕಾಶ ಪುಟ್ಟಿತ್ತು. ಆ ನೆನವೆ ಮನವಂ ಬೆರೆಸಲು ವಾಯು ಪುಟ್ಟಿತ್ತು. ಆ ನೆನವೆ ಬುದ್ಭಿಯಂ ಬೆರೆಸಲು ತೇಜ ಪುಟ್ಟಿತ್ತು. ಆ ನೆನವೆ ಚಿತ್ತವಂ ಬೆರೆಸಲು ಅಪ್ಪು ಪುಟ್ಟಿತ್ತು. ಆ ನೆನವೆ ಪೃಥ್ವಿಯಂ ಬೆರೆಸಲು ಅಹಂಕಾರ ಪುಟ್ಟಿತ್ತು. ಆ ಅಹಂಕಾರವೇ ನಿವೃತ್ತಿ ಎನಿಸಿತ್ತು, ಚಿತ್ತವೆ ಪ್ರತಿಷೆ* ಎನಿಸಿತ್ತು, ಬುದ್ಧಿಯೇ ವಿದ್ಯೆಯೆನಿಸಿತ್ತು, ಮನವೇ ಶಾಂತಿಯೆನಿಸಿತ್ತು, ಆತ್ಮವೇ ಶಾಂತ್ಯತೀತವೆನಿಸಿತ್ತು. ಶಬ್ದದಲ್ಲಿ ಶರಣನಾದ, ಸ್ಪರುಶನದಲ್ಲಿ ಪ್ರಾಣಲಿಂಗಿಯಾದ, ರೂಪಿನಲ್ಲಿ ಪ್ರಸಾದಿಯಾದ, ರಸದಲ್ಲಿ ಮಹೇಶ್ವರನಾದ, ಗಂಧದಲ್ಲಿ ಭಕ್ತನಾದ-ಇದು ಅಂಗಸಂಬಂಧ. ಇನ್ನು ಇದಕ್ಕೆ ಲಿಂಗಸಂಬಂಧವು : ಶ್ರೋತ್ರದಲ್ಲಿ ಪ್ರಸಾದಲಿಂಗ, ತ್ವಕ್ಕಿನಲ್ಲಿ ಜಂಗಲಿಂಗ, ನೇತ್ರದಲ್ಲಿ ಶಿವಲಿಂಗ, ಜಿಹ್ವೆಯಲ್ಲಿ ಗುರುಲಿಂಗ, ಘ್ರಾಣದಲ್ಲಿ ಆಚಾರಲಿಂಗ. ಇಂತಪ್ಪ ಶರಣನು ಅಂಗಲಿಂಗಸಂಬಂಧವನೊಳಕೊಂಡು, ಚಿತ್ತ ಆಶ್ರಯದೊಳು ಕೂಡಿ ನಿಃಪ್ರಿಯವೆನಿಸಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
-->