ಅಥವಾ

ಒಟ್ಟು 6 ಕಡೆಗಳಲ್ಲಿ , 3 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೀಪವಖಿಲಲೋಕದಲ್ಲಿ ಏಕವಾಗಿಪ್ಪಳೆ ಏಕಯ್ಯಾ ಮರುಗುತಿಪ್ಪರು? ಅಯ್ಯಾ, ಆಕಾರವನು ನಂಬದೆ ಅಯ್ಯಾ, ನಿಕಾರದೊಳಗೆ ಇಹರು, ಏಕದೇವನೆಂದು ಹೊಗಳುವ ಶ್ರುತಿಯ ಆಯರಿದು ಜಪಿಸಿದೆ ಕಪಿಲಸಿದ್ಧಮಲ್ಲಿನಾಥನಾ ಅವ್ವೆ.
--------------
ಸಿದ್ಧರಾಮೇಶ್ವರ
ಪರಿಭವಕ್ಕೆ ಬಪ್ಪ ಪರಮಾಣು ನೀನಲ್ಲ. ಕುರುಹಿಂಗೆ ಬಂದ ಸೀಮ ನೀನಲ್ಲ. ಏಕಯ್ಯ ನಿನಗೆ ಪ್ರಾಪಂಚಿಕವು? ಆನಂದಮಧ್ಯದ ಅಪರವಾಗಿ, ಅಪರಮಧ್ಯದಲಿ ಪೂರ್ವನಾಗಿ ಆ ಪೂರ್ವಕ್ಕೆ ಒಡೆಯ ನೀನೆಯಾಗಿಪ್ಪೆ. ಆರಯ್ಯಾ ಬಲ್ಲರು ನಿನ್ನ ಪರಿಯ? ಶರಣಸತಿ ಲಿಂಗಪತಿಯಾಗಿದ್ದವರು ಬಲ್ಲರು. ಏಕಂಗನಿಷ್ಠಾಪರರು ಅವರು ಬಲ್ಲರು. ಕಪಿಲಸಿದ್ಧ ಮಲ್ಲಿಕಾರ್ಜುನಯ್ಯಾ ಏಕಯ್ಯಾ, ಓಡಿದೆಯೆಂದು ನಂಬುಗೆಗೊಡುವಂತೆ ಕರಂಗೊಟ್ಟರು.
--------------
ಸಿದ್ಧರಾಮೇಶ್ವರ
ಲೋಕದ ಲೋಕಿಗಳು ಏಕಯ್ಯಾ ನುಡಿವರು ಲೋಕನಾಥನಿಪ್ಪ ಠಾವನರಿಯರು. ಕಲ್ಲೊಳಗೆ ಹೇಮ, ಕಾಷ*ದೊಳಗಗ್ನಿ, ತಿಲದೊಳು ತೈಲ, ಜಲದೊಳು ಮುತ್ತು, ಹಾಲೊಳು ತುಪ್ಪ, ಸ್ಥಲದೊಳಗೆ ರತ್ನವಿಪ್ಪ ಪರಿಯಲ್ಲಿ ನೀವಿಪ್ಪ ಭೇದವ ನರರೆತ್ತ ಬಲ್ಲರೈ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಈ ಕೈಯಲೆ ಸುಖವು, ಈ ಕೈಯಲೆ ದುಃಖವು. ಏಕಯ್ಯಾ, ನೀ ನಮ್ಮ ಬರಿದೆ ಬಳಲಿಸುವೆ ನಾನಾರ ಸೇರುವೆನಯ್ಯಾ ಆರೂ ಇಲ್ಲದ ದೇಸಿಗ ನಾನು, ಕೂಡಲಸಂಗಮದೇವಾ.
--------------
ಬಸವಣ್ಣ
ದುಡ್ಡಿನ ಲಿಂಗವು ಮೋಕ್ಷವ ಕೊಡಬಲ್ಲಡೆ, ಅಡ್ಡ ಬೀಳುವುದೇಕಯ್ಯಾ ಗುರುವಿಗೆ? ಜಡ್ಡಳಿದ ಭಕ್ತಂಗೆ ಭಕ್ತಿಯ ಜಡ್ಡು ಏಕಯ್ಯಾ ಗುರುವೆ, ಮಡ್ಡು ಡಿಂಡಿಮನಾದಪ್ರಿಯ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಪೃಥ್ವಿ ಜಡನೆಂದರಿದವಂಗೆ ಸ್ಥಾವರಾದಿಗಳಲ್ಲಿ ಎರಗಲೇಕಯ್ಯಾ ? ಅಪ್ಪು ಜಡನೆಂದರಿದವಂಗೆ ತೀರ್ಥಸ್ನಾನಂಗಳಲ್ಲಿ ಅತಿಶಯವೇಕಯ್ಯಾ ? ತೇಜ ಜಡನೆಂದರಿದವಂಗೆ ಹೋಮ ಸಮಾಧಿಗಳೇಕಯ್ಯಾ ? ವಾಯು ಜಡನೆಂದರಿದವಂಗೆ ಧ್ಯಾನ ಮೌನಂಗಳ ಹಿಡಿಯಲೇಕಯ್ಯಾ ? ಆಕಾಶ ಜಡನೆಂದರಿದವಂಗೆ ಮಂತ್ರ(ತ್ರಾ ?)ರೂಡಿs ಏಕಯ್ಯಾ ? ಇನಿತೂ ಜಡನೆಂದರಿದವಂಗೆ ವಿಧಿ ಕಿಂಕರತೆ ಇಲ್ಲವಯ್ಯಾ ? ಗುಹೇಶ್ವರನ ನಿಜವು ಇದು ತಾನೆಂದರಿದ ಮಹಾತ್ಮಂಗೆ.
--------------
ಅಲ್ಲಮಪ್ರಭುದೇವರು
-->