ಅಥವಾ

ಒಟ್ಟು 6 ಕಡೆಗಳಲ್ಲಿ , 1 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೃಥ್ವಿ ಆಕಾಶದ ಮೇಲೆ ಏಕಾಂತಲಿಂಗವ ಕಂಡೆನಯ್ಯ. ಆ ಲಿಂಗದಲ್ಲಿ ಏಕೋಮನೋಹರನೆಂಬ ಪೂಜಾರಿಯು ಲಿಂಗಾರ್ಚನೆಯ ಮಾಡಿ ನಿಃಪ್ರಿಯವಾದುದ ಕಂಡೆ ನೋಡಾ ಂ್ಞhiೀಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಪ್ಪತ್ತೈದು ದೇಶದ ಮೇಲೆ ಒಬ್ಬ ಸತಿಯಳು ನಿಂದಿರುವುದ ಕಂಡೆನಯ್ಯ. ಆ ಸತಿಯಳು ಸಾವಿರೆಸಳ ಮಂಟಪವ ಪೊಕ್ಕು ಲಿಂಗಾರ್ಚನೆಯ ಮಾಡುತಿರ್ಪಳು ನೋಡಾ. ಏಕೋಮನೋಹರನೆಂಬ ಪೂಜಾರಿಯು ಆ ಸತಿಯಳ ಕೈವಿಡಿದು ಆ ಲಿಂಗದಲ್ಲಿ ನಿಃಪ್ರಿಯವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಣ್ಣು ಇಲ್ಲದವ ಕಂಡನಯ್ಯ ಒಂದು ಲಿಂಗವ. ಆ ಲಿಂಗಕ್ಕೆ ತಲೆ ಒಂದು, ಮುಖ ಮೂರು, ಆರು ಹಸ್ತ, ಮೂವತ್ತಾರು ಪಾದಂಗಳು. ಐವತ್ತೆರಡು ಎಸಳಿನ ಶಿವಾಲಯದೊಳಗೆ ಪೂಜೆಗೊಂಬ ಲಿಂಗವನು ಏಕೋಮನೋಹರನೆಂಬ ಪೂಜಾರಿಯು ಕಂಡು ನವರತ್ನ ತೊಂಡಲಂಗಳ ಕಟ್ಟಿ ಆ ಲಿಂಗಾರ್ಚನೆಯ ಮಾಡುತಿರ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತಲೆ ಒಂದು, ಮುಖ ಮೂರು, ಹಸ್ತವಾರು, ಮೂವತ್ತಾರು ಪಾದಂಗಳು, ಒಂಬತ್ತು ಬಾಗಿಲ ಶಿವಾಲಯದೊಳಗೆ ಪೂಜೆಗೊಂಬ ಲಿಂಗವನು, ಏಕೋಮನೋಹರನೆಂಬ ಪೂಜಾರಿಯು ನವರತ್ನದ ತೊಂಡಲಂಗಳಂ ಕಟ್ಟಿ ಲಿಂಗಾರ್ಚನೆಯ ಮಾಡುತಿರ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮೂರು ಮಂಟಪದ ಶಿವಾಲಯದ ಶಿಖರದ ಮೇಲೆ ಅಘಟಿತಲಿಂಗವಿರ್ಪುದು ನೋಡಾ. ಆ ಲಿಂಗದ ಹೃದಯಕಮಲದಲ್ಲಿ ಆರು ಮೂರ್ತಿಗಳಿಪ್ಪರು ನೋಡಾ. ಆರು ಮೂರ್ತಿಗಳಲ್ಲಿ ಆರು ಶಕ್ತಿಯರು ಆರಾರು ಲಿಂಗಾರ್ಚನೆಯ ಮಾಡುತಿರ್ಪರು ನೋಡಾ. ಏಕೋಮನೋಹರನೆಂಬ ಪೂಜಾರಿಯು, ನಿಶ್ಚಿಂತ ನಿರಾಕುಳದ ಮೇಲೆ ನಿಂದು ಅಘಟಿತಲಿಂಗಕ್ಕೆ ಮಹಾಜ್ಞಾನವೆಂಬ ಪೂಜೆಯ ಕಟ್ಟಿ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪೃಥ್ವಿ-ಅಪ್ಪು-ತೇಜ-ವಾಯು-ಆಕಾಶವೆಂಬ ಐದಂಗವ ಒಂದು ಹಂಸ ನುಂಗಿ ಸುಳಿದಾಡುತಿಪ್ಪುದು ನೋಡಾ! ಆ ಹಂಸಂಗೆ ಮೂವರು ಮಕ್ಕಳು ಹುಟ್ಟಿ ಆರು ಕೇರಿಗಳಲ್ಲಿಪ್ಪರು ನೋಡಾ. ಆ ಆರು ಕೇರಿಗಳಲ್ಲಿ ಹಾರಿ ಆಡುವ ಹಾರುವಿತಿಯ ಕೊಂದು, ಏಕೋಮನೋಹರನೆಂಬ ಪೂಜಾರಿಯು ನಿಶ್ಚಿಂತ ನಿರಾಕುಳಲಿಂಗದಲ್ಲಿ ನಿಂದು ತಾನು ತಾನಾಗಿ ಪೂಜೆಗೊಂಬ ಪರಿಯೆಂತು ಹೇಳಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
-->