ಅಥವಾ

ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುದ ಘ್ರಾಣ ಚಿತ್ತ ಗಂಧ ಪೃಥ್ವಿ ಬ್ರಹ್ಮ ಆ ಆರು ತತ್ತ್ವಂಗಳು ಆ ಅಖಂಡ ಮಹಾಜ್ಯೋತಿಪ್ರಣವದ ತಾರಕಸ್ವರೂಪವಾಗಿಹ ಮೂರ್ತಿಬ್ರಹ್ಮದಲ್ಲಿ ಅಡಗಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ : ``ಧಾತಾ ಧಾತ್ರೀಚ ಗಂಧಂ ಚ ಚಿತ್ತಂ ಘ್ರಾಣಗುದಸ್ತಥಾ | ಏತೇಷಾಂ ಮಿಶ್ರಿತಂ ಷಟ್ಕಂ ಮೂರ್ತಿಬ್ರಹ್ಮಣಿ ಲೀಯತೇ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಅಖಂಡಮಹಾಜ್ಯೋತಿಪ್ರಣವದ ತಾರಕಸ್ವರೂಪವಾಗಿಹ ಮೂರ್ತಿಬ್ರಹ್ಮದಲ್ಲಿ ಬ್ರಹ್ಮ, ಪೃಥ್ವಿ, ಗಂಧ, ಚಿತ್ತ, ಘ್ರಾಣ, ಗುದವೆಂಬ ಈ ಆರು ತತ್ವಂಗಳು ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ನಿರಂಜನಾತೀತಾಗಮೇ : ``ಧಾತಾ ಧಾತ್ರೀ ಚ ಗಂಧಶ್ಚ ಚಿತ್ತ ಂ ಘ್ರಾಣಗುದಸ್ತಥಾ | ಏತೇಷಾಂ ಮಿಶ್ರಿತಂ ಷಟ್ಕಂ ಮೂರ್ತಿಬ್ರಹ್ಮೇತಿ ಕಥ್ಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
`ತತ್ರಾದೌ ಸಂಪ್ರವಕ್ಷ್ಯಾಮಿ ಶೈವ ಸಾಮಾನ್ಯಲಕ್ಷಣಂ' ಎಂದು ಆ ನಾಲ್ಕು ವಿಧವಾದ ಶೈವಂಗಳೊಳಗೆ ಮೊದಲು ಸಾಮಾನ್ಯಶೈವಲಕ್ಷಣವ ಹೇಳಿಹೆನು:`ಶಿವಲಿಂಗಂ ಯಥಾ ಪಶ್ಯೇತ್ತದಾ ಕುರ್ಯಾತ್ಸಮರ್ಚನಂ | ಪ್ರದಕ್ಷಿಣಾಂ ಮ ಪ್ರಣತಿಂ ದರ್ಶನಂ ವಾSತ್ರ ಕಾರಯೇತ್ || ಭಸ್ಮಧಾರಣಮಾತ್ರೇಣ ಶುದ್ಧೋ ಭವತಿ ಸರ್ವದಾ| ಶಿವಕಿ....ತದಾರೋಪೇ ಪ್ರೀತಿಮಾನ್ ಶಿವಭಕ್ತಕೇ || ಏತೇಷಾಂ ನಿಯತಿರ್ನಾಸ್ತಿ ಯಥಾ ಲಬ್ಧಂ ಸಮಾಚರೇತ್' ಇಂತೆಂದುದಾಗಿ ಅವನಾನೊಬ್ಬ ಸಾಮಾನ್ಯಶೈವನು ವಿಭೂತಿಯಪಟ್ಟ ಮಾತ್ರದಿಂದವೆ ಶುದ್ಧವಾಗುತ್ತಿದ್ದಾತನಾಗಿ ಸ್ವಯಂಭುಲಿಂಗವನಾದರೆಯೂ ದೇವದಾನವಮಾನವಾದಿಗಳಿಂ ಪ್ರತಿಷಿ*ಸ ಲ್ಪಟ್ಟ ಲಿಂಗನಾದರೆಯೂ ಅವ ವೇಳೆಯಲ್ಲಿ ಕಂಡನು, ಆ ವೇಳೆಯಲ್ಲಿ ಅರ್ಚನೆಯನಾದರೂ ಮಾಡೂದು, ಪ್ರದಕ್ಷಿಣ ದರ್ಶನ ನಮಸ್ಕಾರವನಾದಡೆಯೂ ಮಾಡುವುದು, ಶಿವಕೀರ್ತಿ ಶಿವನ ವಚನ ಶಿವಭಕ್ತರಲ್ಲಿ ಪ್ರೀತಿಯುಳ್ಳಾತನಹನು. ಈ ಶಿವಾರ್ಚನಾದಿಗಳಲ್ಲಿ ಸಂಪೂರ್ಣ ನಿಯತಿಯಿಲ್ಲದೆ ಇದರೆ ಯಥಾ ಲಬ್ಧವಾದ ಕ್ರೀಗಳನಾಚರಿಸುವುದು. ಮತ್ತಂ, `ಸಾಮಾನ್ಯಲಕ್ಷಣಂ ಪ್ರೋಕ್ತಂವಕ್ಷೆ ್ಯೀ ಮಿಶ್ರಸ್ಯ ಲಕ್ಷಣಂ'-ಸಾಮಾನ್ಯಶೈವ ಲಕ್ಷಣವು ನಿರೂಪಿಸಲ್ಪಟ್ಟಿತ್ತು. ಮಿಶ್ರಶೈವಲಕ್ಷಣವನು ನಿರೂಪಿಸಿಹೆನು ಕೇಳಿಂದು ಶಿವನು ಷಣ್ಮುಖದೇವರಿಗೆ ಉಪದೇಶಿಸುತ್ತಿ ರ್ದನಯ್ಯ, ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
-->