ಅಥವಾ

ಒಟ್ಟು 5 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜ್ಞಾನದ ಗಮನವ ಸಹಜದ ಉದಯದಲ್ಲಿ ಏನೆಂದರಿಯೆನು. ಲಿಂಗದ ಬೆಳಗು ಒಳಕೊಂಡುದಾಗಿ ಏನೆಂದರಿಯೆನು. ಕೂಡಲಸಂಗಮದೇವನ ಧ್ಯಾನದಿಂದ ಏನೆಂದರಿಯೆನು.
--------------
ಬಸವಣ್ಣ
ನಲ್ಲನ ಕೂಡುವ ಭರದಲ್ಲಿ ಎನ್ನುವನಿದಿರುವನೇನೆಂದರಿಯೆನು. ನಲ್ಲನ ಕೂಡುವಾಗಳೂ ಎನ್ನುವ ನಲ್ಲನನೇನೆಂದರಿಯೆನು. ಉರಿಲಿಂಗದೇವನ ಕೂಡಿದ ಬಳಿಕ ನಾನೊ ತಾನೊ ಏನೆಂದರಿಯೆನು.
--------------
ಉರಿಲಿಂಗದೇವ
ಎಮ್ಮ ನಲ್ಲನ ಕೂಡಿದ ಕೂಟವ ಇದಿರಿಗೆ ಹೇಳಬಾರದವ್ವಾ. ನೀವೆಲ್ಲಾ ನಿಮ್ಮ ನಲ್ಲನ ಕೂಡಿದ ಸುಖವ ಬಲ್ಲಂತೆ ಹೇಳಿ. ಉರಿಲಿಂಗದೇವ ಬಂದು ನಿರಿಯ ಸೆರಗ ಸಡಿಲಿಸಲೊಡನೆ ನಾನೊ ತಾನೊ ಏನೆಂದರಿಯೆನು.
--------------
ಉರಿಲಿಂಗದೇವ
-->