ಪೂರ್ವಜಾತವ ಕಳೆದು ಪುನರ್ಜಾತನಾದ ಬಳಿಕ, ಏನೆಂದೆನಲುಂಟೆ ?
ಭಕ್ತಕಾಯ ಮಮಕಾಯವಾದ ಬಳಿಕ, ಏನೆಂದೆನಲುಂಟೆ ?
ಅದೆಂತೆಂದಡೆ :
ನ ಮುಕ್ತಿಶ್ಚ ನ ಧರ್ಮಶ್ಚ ನ ಪುಣ್ಯಂ ನ ಚ ಪಾಪಕಂ |
ನ ಕರ್ಮಾ ಚ ನ ಜನ್ಮಾ ಚ ಗುರೋರ್ಭಾವನೀರಿಕ್ಷಣಾತ್ ||
ಎಂದುದಾಗಿ,
ಇದು ಕಾರಣ, ಹಮ್ಮು ಬಿಮ್ಮು ಸೊಮ್ಮನಳಿದ,
ಮಹಾಲಿಂಗ ಕಲ್ಲೇಶ್ವರ ತಾನಾದ ಬಳಿಕ, ಏನೆಂದೆನಲುಂಟೆ ?