ಅಥವಾ

ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲರಂತೆ ಮಾಡಿ ಮನನಗುಂದಲಾರೆ. ಅರಿತು ಮರೆಯಲಾರೆ, ಕಂಡು ಕಾಣದಂತಿರಲಾರೆ. ಹೇಳಿದಡೆ ಭಕ್ತರ ತೊಡಕು, ಹೇಳದಿದ್ದಡೆ ನಿನ್ನ ತೊಡಕು. ಇಂತೀ ಎರಡರ ಏರಿನಲ್ಲಿ ಗುರಿಯಾಗಲಾರೆ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಗುರುವಿನ ಉಪಾಧಿಕೆಯ ಶಿಷ್ಯನರಿತಲ್ಲಿ ಆ ಗುರುವಿಂಗೆ ಹೇಳದೆ ಸುಮ್ಮನಿದ್ದಲ್ಲಿ ಗುರುದ್ರೋಹ ತನಗಾಯಿತ್ತು. ಹೇಳಿದ ಮಾತ ಕೇಳಿ ಆ ಸ್ಥಲಕ್ಕೆ ಭಿನ್ನಭಾವಿಯಾಗಲಾಗಿ, ಲಿಂಗಜಂಗಮದ ದ್ರೋಹ ಆ ಗುರುವಿಂಗಾಯಿತ್ತು. ಆ ಭಕ್ತಂಗೆ ಚಿತ್ತ ಮುಟ್ಟಿದಲ್ಲಿ ಗುರುವೆಂದು ಪ್ರಮಾಳಿಸಲಿಲ್ಲ. ಪ್ರಮಾಳಿಸದಿದ್ದಲ್ಲಿ ಆಚರಣೆಯ ತೊಡಕು. ಇಂತೀ ಉಭಯದ ಏರಿನಲ್ಲಿ ನೋವುತ್ತಿದೇನೆರಿ ಭಾವದ ಭ್ರಮೆಯ ಬಿಡಿಸು, ಸದಾಶಿವಮೂರ್ತಿಲಿಂಗವೆ.
--------------
ಅರಿವಿನ ಮಾರಿತಂದೆ
ಮಹಾಧರೆಯಲ್ಲಿ ಮನೆಯ ಕಟ್ಟುವುದಕ್ಕೆ, ಕಾವಿಲ್ಲದ ಕೊಡಲಿಯಲ್ಲಿ, ಹುಟ್ಟದ ಮರನ ತರಿದು, ಎತ್ತಿಲ್ಲ[ದೆ] ಏರಿನಲ್ಲಿ ಹೂಡಿ ತಂದವನಿವನಾರಣ್ಣಾ? ನಾನೆಂಬುದಕ್ಕೆ ಮೊದಲೆ ನಾಮ ನಷ್ಟವಾಯಿತ್ತು. ಸದಾಶಿವಮೂರ್ತಿಲಿಂಗ ಅಲ್ಲಿ ಸತ್ತು ಇಲ್ಲಿ ಹೆಣನಾಯಿತ್ತು.
--------------
ಅರಿವಿನ ಮಾರಿತಂದೆ
-->