ಅಥವಾ

ಒಟ್ಟು 4 ಕಡೆಗಳಲ್ಲಿ , 1 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಂಗಮಪ್ರಸಾದ ಮುಂತಾಗಿಯಲ್ಲದೆ ಒಲ್ಲೆನೆಂಬ ಭಕ್ತನ ಕಟ್ಟಳೆಯ ವಿವರ: ಶಿಶು, ಬಂಧುಗಳು, ಚೇಟಿ, ಬೆವಸಾಯವ ಮಾಡುವವರು ಮುಂತಾದ ಇವರಿಗೆಲ್ಲಕ್ಕೂ ಒಡೆಯರಿಗೆ ಸಲುವುದಕ್ಕೆ ಮುನ್ನವೆ ಸೀತಾಳ ಶಿವದಾನವೆಂದು ಇಕ್ಕಬಹುದೆ? ಒಡೆಯರ ಕಟ್ಟಳೆಯಠಾವಿನಲ್ಲಿ ನಿಮ್ಮ ಕೃತ್ಯಕ್ಕೆ ನಿಮ್ಮ ಮನವೆ ಸಾಕ್ಷಿ. ಇದು ದಂಡವಲ್ಲ, ನೀವು ಕೊಂಡ ಅಂಗದ ನೇಮ. ಇದಕ್ಕೆ ನಿಮ್ಮ ಏಲೇಶ್ವರಲಿಂಗವೆ ಸಾಕ್ಷಿ.
--------------
ಏಲೇಶ್ವರ ಕೇತಯ್ಯ
ಎಂಬತ್ತನಾಲ್ಕುಲಕ್ಷ ವ್ರತಶೀಲ, ಅರವತ್ತನಾಲ್ಕು ನೇಮ, ಅರುವತ್ತಾರು ವ್ರತಂಗಳಲ್ಲಿ ಇವ ಪ್ರಮಾಣಿಸಿ ನಾಮವಿಟ್ಟೆಹೆನೆಂದಡೆ ಎನಗಾಗದು, ಚೆನ್ನಬಸವಣ್ಣಂಗಲ್ಲದೆ. ಆತ ಜ್ಞಾನಸೂತ್ರಧಾರಿ, ನಾನು ಕ್ರಿಯಾವರ್ತಕ. ಮಾಡಿಕೊಂಡ ವ್ರತಕ್ಕೆ ಕೇಡು ಬಂದಿಹಿತೆಂದು, ಬೆನ್ನ ಮತ್ಸದ ಹುಣ್ಣಿನ ಪಶುವಿನಂತೆ ಎಲ್ಲಿಯೂ ನುಸುಳಲಮ್ಮೆನು. ಬ್ಥಿನ್ನಭಾವದ ಕ್ರೀಯಲ್ಲಿ ನೆಮ್ಮಿದೇನೆ, ಎನಗೆ ಅಭಿನ್ನದಠಾವ ಹೇಳಾ, ಚೆನ್ನಬಸವಣ್ಣಪ್ರಿಯ ಏಲೇಶ್ವರಲಿಂಗವೆ.
--------------
ಏಲೇಶ್ವರ ಕೇತಯ್ಯ
ಅಂಧಕ ವ್ರತಿಯಲ್ಲ, ಪಂಗುಳ ಕ್ರೀವಂತನಲ್ಲ, ಕುಟಿಲ ಸದೈವಭಕ್ತನಲ್ಲ. ಇಂತೀ ಗುಣವೆ [ದೃಷ್ಟ], ದೃಷ್ಟದಲ್ಲಿಯೇ ದೃಷ್ಟವ ಕಂಡು, ಅಂಧಕ, ಪಂಗುಳ, ಕುಟಿಲ ಈ ಮೂರಕ್ಕೆ ವ್ರತದಂಗವೊಂದೂ ಇಲ್ಲ, ಇದಕ್ಕೆ ಏಲೇಶ್ವರಲಿಂಗವೆ ಸಾಕ್ಷಿ.
--------------
ಏಲೇಶ್ವರ ಕೇತಯ್ಯ
ತಾ ನೇಮವ ಮಾಡಿಕೊಂಡು ಕೃಷಿ ಬೇಸಾಯವಿಲ್ಲದೆ ಒಡೆಯರ ಕಟ್ಟಳೆ ಇಷ್ಟು ಅವಧಿಗೊಡಲೆಂದು, ಹೀಗಲ್ಲದೆ ಎನ್ನ ಒಡಲ ಹೊರೆಯೆನೆಂದು, ಹೋದ ಹೋದಠಾವಿನಲ್ಲಿ ಓಗರವನಿಕ್ಕಿಸುವ ಲಾಗಿನ ಶೀಲವಂತರ ಮನದ ಭೇದವ ನೀವೇ ಬಲ್ಲಿರಿ ಏಲೇಶ್ವರಲಿಂಗವೆ.
--------------
ಏಲೇಶ್ವರ ಕೇತಯ್ಯ
-->