ಅಥವಾ

ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಥ ಬ್ರಹ್ಮಾಂಡವ ಏಳುಸಾವಿರದ ಅರವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಮೋಚಿಕಾಯೆಂಬ ಭುವನ, ಆ ಭುವನದೊಳು ಮೋಹಸಂಹಾರನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಮೂವತ್ತೈದುಕೋಟಿ ಇಂದ್ರಚಂದ್ರಾದಿತ್ಯರು, ಮೂವತ್ತೈದುಕೋಟಿ ಬ್ರಹ್ಮನಾರಾಯಣ ರುದ್ರರು, ಮೂವತ್ತೈದುಕೋಟಿ ವೇದಪುರುಷರು ಮುನೀಂದ್ರರು, ನಾಲ್ವತ್ತುಕೋಟಿ ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅನಾದಿಬಿಂದುವೆಂಬ ಆಧಾರ ಕುಂಡಲಿಯ ಸ್ಥಾನದಲ್ಲಿ ಅಂಡವೆಂಟು ಉಂಟು. ಆ ಎಂಟಂಡವನು ಎಂಟು ಪದ್ಮ ಹೊತ್ತುಕೊಂಡಿಪ್ಪವು. ಆ ಪದ್ಮದ ಎಸಳು ಏಳುಸಾವಿರದ ಎಪ್ಪತ್ತು ಕೋಟಿಯು. ಏಳುನೂರ ಮೂವತ್ತಾರು ಎಸಳಿನಲ್ಲಿ ಅಖಂಡ ಪೂಜೆಯ ಮಾಡಲರಿಯದೆ ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯ ಬ್ರಹ್ಮರಂಧ್ರ ರೇಚಕ ಪೂರಕ ಕುಂಭಕದಲ್ಲಿ ಚೌಕ ಪದ್ಮಾಸನವ ಮಾಡಿ ಕಂಡೇನೆಂಬ ಯೋಗಿಗಳಿಗೆ ಇದು ಅಪ್ರಮಾಣ, ಅಗೋಚರ. ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲರಾಜೇಶ್ವರಲಿಂಗವು ಇದೆಂದರಿದುದೆ ನಿಜಾನಂದಯೋಗ.
--------------
ಬಾಚಿಕಾಯಕದ ಬಸವಣ್ಣ
ನಾಸಿಕದ ತುದಿಯಲ್ಲಿ ಆಡುವ ಪ್ರಾಣಾವಾಯು ದೇವರೆಂಬರು ; ಅಲ್ಲಲ್ಲ ನೋಡಾ. ಅದೆಂತೆಂದಡೆ : ಆ ಪ್ರಾಣವಾಯು ನಾಸಿಕದಿಂದ ಹನ್ನೆರಡಂಗುಲಪ್ರಮಾಣ, ಹೊರಹೊಂಟು ಎಂಟಂಗುಲ ಪ್ರಮಾಣ, ತಿರುಗಿ ನಾಲ್ಕಂಗುಲ ಪ್ರಮಾಣ ಖಂಡಿಸುವುದು ನೋಡಾ. ಇಂತು ದಿನವೊಂದಕ್ಕೆ ಇಪ್ಪತ್ತೊಂದು ಸಾವಿರದ ಆರುನೂರು ಶ್ವಾಸಂಗಳು ಹೊರಹೊಂಟು, ಹದಿನಾಲ್ಕುಸಾವಿರದ ನಾನೂರು ಶ್ವಾಸಂಗಳು ತಿರುಗಿ, ಏಳುಸಾವಿರದ ಇನ್ನೂರು ಶ್ವಾಸಂಗಳು ಖಂಡಿಸಿ ಮೃತವಾಗಿ ಹೋಹ ಪ್ರಾಣವಾಯುವ ದೇವರೆಂಬ ಶಿವದ್ರೋಹಿಗಳ ಎನಗೊಮ್ಮೆ ತೋರದಿರಯ್ಯಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
-->