ಅಥವಾ

ಒಟ್ಟು 8 ಕಡೆಗಳಲ್ಲಿ , 3 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೂರ್ವದಿಂದ ಉತ್ತರಕ್ಕೆ ಬಂದ ಸೂರ್ಯನು ಅಸ್ತಮಯವಾಯಿತ್ತೆಂದು ಜಾಹ್ಯಗೆ ಒಡಲಾಗಿ, ಮತ್ತಾ ವರುಣಪ್ರದಕ್ಷಿಣದಿಂದ ಬಂದು ಪೂರ್ವದಲ್ಲಿ ಹುಟ್ಟಲಿಕ್ಕೆ ನಿನ್ನಿಂಗೆ ಇಂದಿಂಗೆಯೆಂಬುದು ಒಂದೊ ಎರಡೊ ? ಅಂದಿಗೆ ಜಾÕನ, ಇಂದಿಗೆ ಮರವೆ, ಎಂಬುದು ಒಂದೊ ಎರಡೊ ? ಅದು ಘಟದ ಪ್ರವೇಶದಿಂದ. ಪೂರ್ವ ಉತ್ತರಕ್ಕೆ ಬಂದಾತ್ಮನನರಿದು ಉಭಯವ ತಿಳಿದು ಸಂದು ನಾಶನವಾದಲ್ಲಿ ಸದ್ಯೋಜಾತಲಿಂಗವು ವಿನಾಶವಾದ.
--------------
ಅವಸರದ ರೇಕಣ್ಣ
ಆದಿ ಮಧ್ಯ ಅವಸಾನವರಿಯಬೇಕೆಂಬರು, ಆದಿಯಲ್ಲಿ ನಿಂದು, ಮಧ್ಯದಲ್ಲಿ ಕಂಡು, ಅವಸಾನದಲ್ಲಿ ಅರಿದು ಇರಬೇಕೆಂಬರು. ಅರಿವುದು ಒಂದೊ ಮೂರೊ ಎಂದಲ್ಲಿ ನಿಂದಿತ್ತು. ನಿಂದುದ ಕಳೆದು ಸಂದ ಹರಿ, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಸ್ಪರ್ಶನದಲ್ಲಿ ಇಂಬಿಟ್ಟ ಭೇದವ ಕಂಡು, ಶಬ್ದದಲ್ಲಿ ಸಂಚಾರಲಕ್ಷಣವನರಿತು, ರೂಪಿನಲ್ಲಿ ಚಿತ್ರವಿ ಚಿತ್ರವಪ್ಪ ಲಕ್ಷಣವ ಲಕ್ಷಿಸಿ, ಗಂಧದಲ್ಲಿ ಸುಗುಣ ದುರ್ಗಣವನರಿವುದು ಒಂದೆ ನಾಸಿಕವಪ್ಪುದಾಗಿ ಒಳಗಿರುವ ಸುಗುಣವ ಹೊರಗೆ ನೇತಿಗಳೆವ ದುರ್ಗಣ[ವು] ಮುಟ್ಟುವುದಕ್ಕೆ ಮುನ್ನವೇ ಅರಿಯಬೇಕು. ಅರಿಯದೆ ಸೋಂಕಿದಲ್ಲಿ ಅರ್ಪಿತವಲ್ಲಾ ಎಂದು, ಅರಿದು ಸೋಂಕಿದಲ್ಲಿ ಅರ್ಪಿತವೆಂದು ಕುರುಹಿಟ್ಟುಕೊಂಡು ಇಪ್ಪ ಅರಿವು ಒಂದೊ, ಎರಡೊ ಎಂಬುದನರಿದು ರಸದಲ್ಲಿ ಮಧುರ, ಕಹಿ, ಖಾರ, ಲವಣಾಮ್ರ ಮುಂತಾದವನರಿವ ನಾಲಗೆ ಒಂದೊ? ಐದೊ? ಇಂತೀ ಭೇದವ ಶ್ರುತದಲ್ಲಿ ಕೇಳಿ, ದೃಷ್ಟದಲ್ಲಿ ಕಂಡು, ಅನುಮಾನದಲ್ಲಿ ಅರಿದು ಸದ್ಯೋಜಾತಲಿಂಗದ ಜಿಹ್ವೆಯನರಿತು ಅರ್ಪಿಸಬೇಕು.
--------------
ಅವಸರದ ರೇಕಣ್ಣ
ದರ್ಪಣದ ಒಪ್ಪ ಅತ್ತರೆ ಅತ್ತು, ನಕ್ಕರೆ ನಕ್ಕು ತಾನಾಡಿದಂತೆ ಆಡುವುದು. ಅದು ಒಂದೊ ಎರಡೊ ಎಂಬುದನರಿತಲ್ಲಿ ಸದಾಶಿವಮೂರ್ತಿಲಿಂಗವೊಂದೆ.
--------------
ಅರಿವಿನ ಮಾರಿತಂದೆ
ದೃಷ್ಟ ಚಕ್ಷು ಸ್ವಪ್ನ ಚಕ್ಷು, ಸುಷಪ್ತಿ ಚಕ್ಷು, ತ್ರಿವಿಧ ಭೇದ. ಚಕ್ಷುವಿನಲ್ಲಿ ಕಾಬುದು ಒಂದೊ ಮೂರೊ? ಸಾಕಾರದಲ್ಲಿ ಚರಿಸಿ, ನಿರಾಕಾರದಲ್ಲಿ ವಿಶ್ರಮಿಸಿ ಕಾಣಬಾರದ ಕಡೆ ನಡು ಮೊದಲಿಲ್ಲದಲ್ಲಿ ಅಡಗಿ ಕುರುಹುದೋರದ ಇರವು ಕಾರಣಭೇದ ಇದನರಿವುದಕ್ಕೆ ಕ್ಷೀರ ಸಂಗಪತಿಯೋಗದಿ ಮಥನ ಕಲಂಕಿ ಘೃತಕಡೆಯಂತೆ ಆತ್ಮಭೇದ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಜೀವ ಆತ್ಮನನರಿಯಬೇಕೆಂಬರು, ಆತ್ಮ ಪರಮಾತ್ಮನನರಿಯಬೇಕೆಂಬರು. ಇಂತೀ ಆತ್ಮಭೇದವನರಿವುದಕ್ಕೆ ಪದರದ ಹೊರೆಯೆ? ಅಟ್ಟಣೆಯ ಸಂದೆ ? ಅರಿದಲ್ಲಿ ಪರಮ, ಮರೆದಲ್ಲಿ ಜೀವನೆಂಬುದು. ಆ ಉಭಯವ ಸಂಪಾದಿಸುವುದು ಅರಿವೊ? ಮರವೆಯೊ? ಬಯಲ ಮರೆಮಾಡಿ ತೆರೆಗಟ್ಟಲಿಕ್ಕೆ ಅವರೊಳಗಾದ ದೃಷ್ಟವ ಕಾಬುದು, ತೆರೆಯ ತೆಗೆಯಲಿಕ್ಕೆ ಬಯಲ ಕಾಬುದು. ದೃಕ್ಕಿಂಗೆ ದೃಶ್ಯ ಒಂದೊ ಎರಡೊ ಎಂಬುದ ತಿಳಿದಲ್ಲಿ ಸದ್ಯೋಜಾತಲಿಂಗದ ಕೂಟ.
--------------
ಅವಸರದ ರೇಕಣ್ಣ
ಸ್ಥೂಲದಲ್ಲಿ ಸಿಕ್ಕಿ, ಸೂಕ್ಷ್ಮದಲ್ಲಿ ಕಂಡು, ಕಾರಣದಲ್ಲಿ ಅರಿವುದು ಒಂದೊ ಮೂರೊ ಎಂಬುದನರಿತಲ್ಲಿ ಸದಾಶಿವಮೂರ್ತಿಲಿಂಗಸಂಗವಾದುದು.
--------------
ಅರಿವಿನ ಮಾರಿತಂದೆ
-->