ಅಥವಾ

ಒಟ್ಟು 11 ಕಡೆಗಳಲ್ಲಿ , 1 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಥ ಬ್ರಹ್ಮಾಂಡವ ಲಕ್ಷದ ಮೇಲೆ ಒಂಬೈನೂರಾ ತೊಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ವಿಧುವೇಶ್ವರವೆಂಬ ಭುವನ. ಆ ಭುವನದೊಳು ವಿಶ್ವೇಶ್ವರನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಐನೂರುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು. ಐನೂರುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ತೊಂಬತ್ತಾರುಸಾವಿರದ ಒಂಬೈನೂರಾ ಮೂವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಅವಿಮುಕ್ತವೆಂಬ ಭುವನ. ಆ ಭುವನದೊಳು ಮುಕ್ತಾಂಗನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನಾನೂರೆಪ್ಪತ್ತುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ. ನಾನೂರೆಪ್ಪತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ತೊಂಬತ್ತು ಮೂರುಸಾವಿರದ ಒಂಬೈನೂರಾ ಇಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಮಹಾಲಯವೆಂಬ ಭುವನ. ಆ ಭುವನದೊಳು ಮಹಾಭೈರವನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನಾನೂರರುವತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ. ನಾನೂರರುವತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ. ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ಒಂದುಕೋಟಿಯ ಮೇಲೆ ಸಾವಿರದಾ ಒಂಬೈನೂರಾ ತೊಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ದಹನವೆಂಬ ಭುವನ. ಆ ಭುವನದೊಳು ತ್ರಿಕಾಲಾಗ್ನಿಕಾಲನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಸಾವಿರಕೋಟಿ ರುದ್ರ ಬ್ರಹ್ಮ ನಾರಾಯಣರಿಹರು. ಸಾವಿರಕೋಟಿ ವೇದಪುರುಷರು ಮುನೀಂದ್ರರು ಇಂದ್ರಚಂದ್ರಾದಿತ್ಯ ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ತೊಂಬತ್ತೊಂಬತ್ತು ಲಕ್ಷದ ಮೇಲೆ ಸಾವಿರದಾ ಒಂಬೈನೂರಾ ಎಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಬಬ್ರುವೆಂಬ ಭುವನ. ಆ ಭುವನದೊಳು ಜಗದ್ಗುರುವೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಒಂಬತ್ತುನೂರಾ ತೊಂಬತ್ತುಕೋಟಿ ನಾರಾಯಣ ರುದ್ರ ಬ್ರಹ್ಮರಿಹರು ನೋಡಾ. ಒಂಬತ್ತುನೂರಾ ತೊಂಬತ್ತುಕೋಟಿ ವೇದಪುರುಷರು ಮುನೀಂದ್ರರು ಇಂದ್ರಚಂದ್ರಾದಿತ್ಯರು ವೇದಪುರುಷರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ತೊಂಬತ್ತೆರಡುಸಾವಿರದ ಒಂಬೈನೂರಾ ಹದಿನೆಂಟು ಬ್ರಹ್ಮಾಂಡವನೊಳಕೊಂಡುದೊಂದು ಭದ್ರಕರ್ಣವೆಂಬ ಭುವನ. ಆ ಭುವನದೊಳು ಭದ್ರಕಾಳನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನಾನೂರರುವತ್ತುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು. ನಾನೂರರುವತ್ತುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ. ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ತೊಂಬತ್ತಾರುಸಾವಿರದ ಒಂಬೈನೂರಾ ಐವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ವಸ್ತ್ರಾಪದವೆಂಬ ಭುವನ. ಆ ಭುವನದೊಳು ಮಹಾಕೋದಂಡನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನಾನೂರೆಂಬತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು. ನಾನೂರೆಂಬತ್ತುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ತೊಂಬತ್ತೇಳುಸಾವಿರದ ಒಂಬೈನೂರಾ ಅರವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಭೀಮೇಶ್ವರವೆಂಬ ಭುವನ. ಆ ಭುವನದೊಳು ಭೀಮನಾಥನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನಾನೂರೆಂಬತ್ತೈದುಕೋಟಿ ಬ್ರಹ್ಮ-ನಾರಾಯಣ-ರುದ್ರಾದಿಗಳಿಹರು ನೋಡಾ. ನಾನುರೆಂಬತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ. ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ತೊಂಬತ್ತು ಮೂರು ಲಕ್ಷದ ಮೇಲೆ ಸಾವಿರದ ಒಂಬೈನೂರಾ ಇಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಕರ್ತೃವೆಂಬ ಭುವನ. ಆ ಭುವನದೊಳು ಮಹಾಭೈರವವೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಒಂಬತ್ತುನೂರಾ ಅರುವತ್ತು ಕೋಟಿ ಬ್ರಹ್ಮ ನಾರಾಯಣ ರುದ್ರರಿಹರು. ಒಂಬತ್ತುನೂರಾ ಅರುವತ್ತು ಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ತೊಂಬತ್ತೆಂಟುಸಾವಿರದ ಒಂಬೈನೂರಾ ಎಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಮಹೇಂದ್ರವೆಂಬ ಭುವನ. ಆ ಭುವನದೊಳು ಮಹೇಶ್ವರನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನಾನೂರತೊಂಬತ್ತುಕೋಟಿ ನಾರಾಯಣ-ರುದ್ರ-ಬ್ರಹ್ಮಾದಿಗಳಿಹರು ನೋಡಾ. ನಾನೂರತೊಂಬತ್ತುಕೋಟಿ ದೇವರ್ಕಳು ವೇದಪುರುಷರು ಮುನೀಂದ್ರರು ಇಂದ್ರಚಂದ್ರಾದಿತ್ಯರು ಇಹರು ನೋಡಾ ಅಪ್ಪಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ತೊಂಬತ್ತೇಳು ಲಕ್ಷದ ಮೇಲೆ ಸಾವಿರದ ಒಂಬೈನೂರಾ ಅರುವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಕ್ಷಯಾಂತಕವೆಂಬ ಭುವನ. ಆ ಭುವನದೊಳು ವಿಶ್ವೇಶ್ವರನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಒಂಬತ್ತುನೂರಾ ಎಂಬತ್ತು ಕೋಟಿ ಮುನೀಂದ್ರರು ದೇವರ್ಕಳು ಇಂದ್ರಚಂದ್ರಾದಿತ್ಯರು ವೇದಪುರುಷರು ಇಹರು ನೋಡಾ. ಒಂಬತ್ತುನೂರಾ ಎಂಬತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
-->