ಅಥವಾ

ಒಟ್ಟು 10 ಕಡೆಗಳಲ್ಲಿ , 8 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೊನ್ನು ಮುರಿದಡೆ ಬೆಸಸಬಹುದಲ್ಲದೆ, ಮುತ್ತು ಒಡೆದಡೆ ಬೆಸಸಬಹುದೆ ? ಮನ ಮುರಿದಡೆ ಮನಕೊಬ್ಬರೊಡೆಯರುಂಟೆ ? ಚೆನ್ನಮಲ್ಲಿಕಾರ್ಜುನ ಸಾಕ್ಷಿಯಾಗಿ ಬೇಟವುಳ್ಳಲ್ಲಿ ಬೆರೆಸೆ ಘನ.
--------------
ಅಕ್ಕಮಹಾದೇವಿ
ಲೌಕಿಕಕ್ಕೆ ದರ್ಶನ ಧರ್ಮದ ಆಚರಣೆಯಿಂದ, ಶರೀರದ ಯುಕ್ತಿಧರ್ಮ ಮನ ಅನುವನರಿತಲ್ಲಿ, ರಸಯುಕ್ತಿಕರಂಡದಂತೆ, ಒಡೆದಡೆ ಹಲವಾಗಿ, ಹೂಡಿದಲ್ಲಿ ಒಡೆದಡೆ ಭಿನ್ನವಿಲ್ಲದೆ, ಸಮಯಪದ ಅರಿವಿನ ಗುಣ ವಿವರ ಭೇದ, ಕ್ಷಾರದ್ರವ್ಯದಂತೆ ಇರಬೇಕು. ಬಂಕೇಶ್ವರಲಿಂಗವ ಒಡಗೂಡೂದಕ್ಕೆ ಇರವು.
--------------
ಸುಂಕದ ಬಂಕಣ್ಣ
ತಟಾಕ ಒಡೆದಡೆ ಕಟ್ಟುವಡೆವುದಲ್ಲದೆ. ಅಂಬುಧಿ ತುಂಬಿ ಮೇರೆದಪ್ಪಿದಲ್ಲಿ ಕಟ್ಟಿಂಗೆ ಹಿಂಗಿ ನಿಂದುದುಂಟೆ? ಅರಿಯದವಂಗೆ ಅರಿಕೆಯ ಹೇಳಿದಡೆ ಅರಿವನಲ್ಲದೆ ಅರಿದು ಮರೆದವಂಗೆ ಬೇರೊಂದೆಡೆಯ ಹೇಳಿಹೆನೆಂದಡೆ, ಕಡೆ ನಡು ಮೊದಲಿಲ್ಲಾ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಮಣ್ಣು ಬೆಂದು ಮಡಕೆಯಾಗಿ ಒಡೆದಡೆ, ಮುನ್ನಿನಂತಾದುದಿಲ್ಲ. ಮಿಸುನಿ ವಿಶ್ವದೊಳಗಿದ್ದು, ತನ್ನಯ ರಸಕುಲವ ಬೆರೆಸಿದುದಿಲ್ಲ. ಕ್ಷೀರ ಬಲಿದು ನಿಂದು, ಮುನ್ನಿನ ಪಿಸಿತವ ಸಾರಿದುದಿಲ್ಲ. ಮೂರನರಿದು ಹರಿದು, ಮೂರನೊಡಗೂಡುವ ಡಾಗಿನ ಪಶುಗಳಿಗೇಕೆ ನೆರೆ ನಿರನ ಹೊಲಬು, ಐಘಟದೂರ ರಾಮೇಶ್ವರಲಿಂಗವನರಿಯರಾಗಿ ?
--------------
ಮೆರೆಮಿಂಡಯ್ಯ
ಏರಿಯ ಕಟ್ಟೆ ಒಡೆದಡೆ ಪಾಪವೆಂಬರು. ನೀರಿನ ಸಾರವಿಲ್ಲದ ಮತ್ತೆ ಏರಿಯ ಪಾಪ ಆರಿಗೆಂಬುದನರಿ. ಆಪ್ಯಾಯನವಡಸಿ ಬಂದವರು ತಮ್ಮಯ ಅಘಹರವಾಗಬೇಕೆಂದು ಬಗೆಗೊಳ್ಳುತಿರಲಾಗಿ, ತಮ್ಮಯ ಉದರದ ಬಗೆಯ ಹೇಳುವ ಗುದಿಗಳ್ಳರ ನುಡಿಯೇಕೆ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಮಧ್ಯನದಿಯ ನಾವು ಒಡೆದಡೆ ದುಃಖಂದೇನು? ಜನಕ ಮರಣಹೊಂದಿದಡೆ ಮಾಡಿದ ದುಃಖಂದೇನು? ಧೂಪನಾಗರ ಮುಟ್ಟಿಂದ ಮಾಡಿದ ದುಃಖದಿಂದೇನು? ನಾಗರನಂಗ ಗರುಡನ ಬಾಯಿಗೆ ಬಿದ್ದಂತಾಯಿತ್ತು ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಚಿನ್ನ ಒಡೆದಡೆ ಕರಗಿದಡೆ ರೂಪಪ್ಪುದಲ್ಲದೆ, ಮುತ್ತು ಒಡೆದು ಕರಗಿದಡೆ ರೂಪಪ್ಪುದೆ? ಮತ್ರ್ಯದ ಮನುಜ ತಪ್ಪಿದರೊಪ್ಪಬೇಕಲ್ಲದೆ, ಸದ್ಭಕ್ತ ಸದೈವ ತಪ್ಪಿದಡೆ ಒಪ್ಪಬಹುದೆ? ಆಚಾರಕ್ಕು ಅಪಮಾನಕ್ಕು ಅಂಗವೆ ಕಡೆಯಿಲ್ಲದೆ, ಬೇರೊಂದಂಗವ ಮಾಡಿ ಗುರುಲಿಂಗಜಂಗಮದ ಮುಖದಿಂದ ಶುದ್ಧವೆಂದು ತಂದು ಕೂಡಿಕೊಳಬಹುದೆ? ಲಿಂಗಬಾಹ್ಯನ, ಆಚಾರಭ್ರಷ್ಟನ, ಜಂಗಮವ ಕೊಂದವನ ಇವರುವ ಕಂಡು ನುಡಿದಡೆ ಕುಂಭೀಪಾತಕಕ್ಕೆ ಒಳಗು ಇದಕ್ಕೆ ಸಂದೇಹವಿಲ್ಲ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಆಣತಿ.
--------------
ಅಕ್ಕಮ್ಮ
ಮುತ್ತು ಒಡೆದಡೆ ಬೆಸೆಯಬಹುದೆ ? ಮನ ಮುರಿದಡೆ ಸಂತಕ್ಕೆ ತರಬಹುದೆ ? ಅಪ್ಪುಗೆ ಸಡಲಿದ ಸುಖವ ಮರಳಿ ಅರಸಿದರುಂಟೆ ? ಸಾಧಕನೊಯಿದ ನಿಧಾನದ ಕುಳಿಯಂತೆ ಅಲ್ಲಿ ಏನುಂಟು ? ಮಚ್ಚು ಪಲ್ಲಟವಾಗಿ, ನೋಟದ ಸುಖವ ಹಿಂಗಿದರೊಳವೆ ? ನೋಡದಿರು, ಕಾಡದಿರು, ಮನಬಳಸದಿರು. ಭಾಷೆಗೆ ತಪ್ಪಿದರೆ ಮುಳ್ಳುಮೊನೆಯ ಕಿಚ್ಚಿನಂತೆ. ಲೇಸು ಬೀಸರವೋಗದ ಮುನ್ನ ಚೆನ್ನಮಲ್ಲಿಕಾರ್ಜುನನ ಕೂಡಿ ಧಾತುಗೆಟ್ಟ ಬಳಿಕ ಒಳವೆ ?
--------------
ಅಕ್ಕಮಹಾದೇವಿ
ತಟಾಕ ಒಡೆದಡೆ ಪ್ರತಿಶಬ್ದವಲ್ಲದೆ ಗತಿಭಿನ್ನವುಂಟೆ ? ಅಂಬುಧಿಗೆ ಅದು ತುಂಬಿದ ಸಂಪದ, ಅದರಂಗದ ಇರವು, ಲಿಂಗಾಂಗಿಯ ಭಾವದ ಸಂಗ. ಕಂಡುದ ಕಂಡು ಕಾಳ್ಗೆಡೆವ ಲಿಂಗಿಗಳಿಗುಂಟೆ, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದ ಸಂಗದ ಸುಖವು ?
--------------
ಮನುಮುನಿ ಗುಮ್ಮಟದೇವ
-->