ಅಥವಾ

ಒಟ್ಟು 7 ಕಡೆಗಳಲ್ಲಿ , 5 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಗೋಲು ಹರಿದ ಮತ್ತೆ ಹೊಳೆಯೇನು ಮಾಡುವುದು? ಇರಿದವನಿದ್ದಂತೆ ಕೈದೇನ ಮಾಡುವುದು? ಎಚ್ಚವನಿದ್ದಂತೆ ಅಂಬಿಗೆ ಮುನಿವರೆ? ಎನ್ನ ಚಿತ್ತದಲ್ಲಿ ಕಲೆದೋರಿ, ನೀನಾಡಿಸಿದಂತೆ ಆಡಿದೆ. ನೀ ಕೊಟ್ಟ ಕಾಯಕವ ಹೊತ್ತೆ, ನೀ ಹೇಳಿದ ಬಿಟ್ಟಿಯ ಮಾಡಿದೆ ಕುಳದವನಾದ ಮತ್ತೆ ಮಾನ್ಯರ ಒಲವರ ಎನಗೊಂದುಗುಣವಿಲ್ಲ. ನೀನಾಡಿಸಿದಂತೆ ಆಡಿದೆ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಮಾತೆ ಸೂತಕವಾಗಿ ಸಂದೇಹವ ಮಾಡುವಲ್ಲಿ ಅದೇತರಿಂದ ಒದಗಿದ ಕುರುಹು ? ಶಿಲೆಯ ಪ್ರತಿಷೆ*ಯ ಮಾಡಿ ತನ್ನ ಒಲವರ ವಿಶ್ವಾಸದಿಂದ ಬಲಿಕೆಯನರಿವುದು ಶಿಲೆಯೊರಿ ಮನವೊರಿ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಸರ್ವಜೀವಂಗಳ ಕೊಲುವಲ್ಲಿ, ಜೀವ ಜೀವನ ಕೈಯಲ್ಲಿ ಸಾವಲ್ಲಿ ಆ ಕೊಲೆಗೆ ಒಲವರ ಬೇಡ. ಆ ಕೊಲೆಯ ಕೊಲುವಲ್ಲಿ ಅದು ಹೊಲೆಯೆಂದು ಆ ಜೀವವ ಬಿಡೆಂದು ಒಲವರ ಬೇಡ. ಅದು ಕೊಲುವ ಜೀವದ ನೋವು, ಸಾವ ಜೀವದ ದಯ. ಆ ಉಭಯದ ಹೊಲಬ ತಿಳಿದು ಮನದ ನೀರಿನಲ್ಲಿ ಮಜ್ಜನವ ಮಾಡಿ ಚಿತ್ತದ ಗಿಡುವಿನ ಪುಷ್ಪವ ಹರಿದು ಹೊತ್ತಿಗೊಂದು ಪರಿಯಾದ ಚಂದನದ ಗಂಧವನಿಟ್ಟು ತಥ್ಯಮಿಥ್ಯವಳಿದ ಅಕ್ಷತೆಯ ಲಕ್ಷಿಸಿ, ಸುಗುಣ ದುರ್ಗುಣವೆಂಬ ಉಭಯದ ಹಗಿನವ ತೆಗೆದು, ನಿಜ ಸುಗಂಧದ ಧೂಪವನಿಕ್ಕಿ, ನಿತ್ಯಾನಿತ್ಯವೆಂಬ ನಟ್ಟಾಲಿಯ ದರ್ಪವ ಕಿತ್ತು, ಮತ್ತಮಾ ಕಂಗಳ ತೆಗೆದ ದರ್ಪಣವ ತೋರುತ್ತ, ಪೂರ್ವ ಪಶ್ಚಿಮ ನಷ್ಟವಾದ ಸತ್ತಿಗೆಯ ಹಿಡಿದು ದುರ್ವಾಸನೆಯೆಂಬ ಉಷ್ಣವ ಪರಿಹರಿಸುವುದಕ್ಕೆ ಸುಮತೆಯೆಂಬ ಆಲವಟ್ಟವನೆ ತಿರುಹುತ್ತ, ಉತ್ತರ ಪೂರ್ವಕ್ಕೆ ಉಭಯವಲ್ಲಾಡದ ಚಾಮರವ ಢಾಳಿಸುತ್ತ, ಇಂತೀ ವರ್ತನಂಗಳಲ್ಲಿ ಸತ್ಯಸಾಕ್ಷಿಯಾಗಿ ಭಕ್ತಿ ಜ್ಞಾನ ವೈರಾಗ್ಯವೆಂಬೀ ಇಷ್ಟವ ಮಾಡಿ ನಿಜ ನಿಶ್ಚಯದ ಬೆಳಗಿನ ಆರತಿಯನೆತ್ತಿ ನೋಡುತ್ತಿರಬೇಕು ದಸರೇಶ್ವರಲಿಂಗವ.
--------------
ದಸರಯ್ಯ
ಪೂಜೆ ಪುಣ್ಯದ ಇರವು, ಮಾಟ ಸುಕೃತದ ಬೀಜ, ಸುಕೃತ ಭವದೊಡಲು. ಪೂಜೆಯ ಮೀರಿ ಕಾಬರಿವಿಲ್ಲ, ಮಾಟವ ಮೀರಿ ಮೂರರ ಕೂಟವನರಿವುದಿಲ್ಲ. ಉಭಯದ ಕೋಟಲೆಯ ಬಿಡಿಸು, ಅಲೇಖನಾದ ಶೂನ್ಯ ಕಲ್ಲಿನ ಒಲವರ ಬೇಡ.
--------------
ವಚನಭಂಡಾರಿ ಶಾಂತರಸ
ಬೀಜದ ನೆಲೆಯಲ್ಲಿ ಹಲವು ತೋರುವವೊಲು, ಮೂಡಿ ಮೊಳೆತಲ್ಲಿ ಉಲುಹಿಗೆ ಅಲರಾಯಿತ್ತು. ನಾನೆಂಬಲ್ಲಿ ನೀನಾದೆ, ನೀನಾನೆಂಬಲ್ಲಿ ಉಲುಹಾದೆಯಲ್ಲಾ! ಉಲುಹಿನ ನೆಲೆಯ ಕಡಿದು, ಗಲಭೆಯ ಗ್ರಾಮವ ಬಿಟ್ಟು, ನೆಲೆಯಾಗು ಮನದ ಕೊನೆಯಲ್ಲಿ. ಒಲವರ ಬೇಡ, ಸದಾಶಿವಮೂರ್ತಿಲಿಂಗವೆ.
--------------
ಅರಿವಿನ ಮಾರಿತಂದೆ
ಸಂದೇಹ ಮಾಡುವಲ್ಲಿ ಮಾತೇ ಸೂತಕವಾಗಿ ಅದೇತರಿಂದೊದಗಿದ ಶಿಲೆಯ ಪ್ರತಿಷೆ*ಯ ಮಾಡಿ, ತನ್ನ ಒಲವರ ವಿಶ್ವಾಸದಿಂದ ಕುಱುಹ ಅಱôವುದು ಶಿಲೆಯೊರಿ ಮನವೊರಿ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
-->