ಅಖಂಡಜ್ಯೋತಿರ್ಮಯವಾಗಿ ಪರಮೋಂಕಾರಪ್ರಣವದ
ಜ್ಯೋತಿಸ್ವರೂಪದಲ್ಲಿ ಭಾವಹಸ್ತ ಹುಟ್ಟಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಜ್ಞಾನಹಸ್ತ ಹುಟ್ಟಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಸುಮನಹಸ್ತ ಹುಟ್ಟಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ನಿರಹಂಕಾರಹಸ್ತ ಹುಟ್ಟಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಸುಬುದ್ಧಿಹಸ್ತ ಹುಟ್ಟಿತ್ತು.
ಆ ಪ್ರಣವದ ತಾರಕಸ್ವರೂಪದಲ್ಲಿ ಸುಚಿತ್ತಹಸ್ತ ಹುಟ್ಟಿತ್ತು ನೋಡಾ.
ಇದಕ್ಕೆ ಚಕ್ರಾತೀತಾಗಮೇ :
``ಓಂಕಾರಜ್ಯೋತಿರೂಪೇ ಚ ಭಾವಹಸ್ತಶ್ಚ ಜಾಯತೇ |
ಓಂಕಾರದರ್ಪಣಾಕಾರೇ ಜ್ಞಾನಹಸ್ತಶ್ಚ ಜಾಯತೇ |
ಓಂಕಾರ ಅರ್ಧಚಂದ್ರಂ ಚ ಮನೋಹಸ್ತಶ್ಚ ಜಾಯತೇ |
ಓಂಕಾರ ಕುಂಡಲಾಕಾರೇ ನಿರಹಂಕಾರಶ್ಚ ಜಾಯತೇ ||
ಓಂಕಾರದಂಡರೂಪೋ ಚ ಬುದ್ಧಿಹಸ್ತಶ್ಚ ಜಾಯತೇ |
ಓಂಕಾರ ತಾರಕರೂಪೋ ಚಿತ್ತಹಸ್ತಶ್ಚ ಜಾಯತೇ |
ಇತಿ ಷಷ* ಹಸ್ತ ದೇವಿ ಸ್ಥಾನಸ್ಥಾನೇಷು ಜಾಯತೇ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.