ಅಥವಾ

ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಕಾರದೊಳಗೆ ಓಂಕಾರವ ಕಂಡೆ, ಮಕಾರದೊಳಗೆ ಓಂಕಾರವ ಕಂಡೆ, ಶಿಕಾರದೊಳಗೆ ಓಂಕಾರವ ಕಂಡೆ, ವಕಾರದೊಳಗೆ ಓಂಕಾರವ ಕಂಡೆ, ಯಕಾರದೊಳಗೆ ಓಂಕಾರವ ಕಂಡೆ. ಓಂಕಾರದೊಳಗೆ ಪಂಚಾಕ್ಷರವ ಕಂಡು, ನಮೋ ನಮೋ ಎನುತಿರ್ದೆ ಕಾಣಾ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮೊಳಗೆ ನೀವೆಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಕಾರದೊಳಗೆ ಐವತ್ತೊಂದಕ್ಷರವನರಿಯದೆ ಎಂತು ಆಚಾರಲಿಂಗಸಂಬಂಧಿಯೆಂಬೆ ? ಮಕಾರದೊಳಗೆ ಐವತ್ತೊಂದಕ್ಷರವನರಿಯದೆ ಎಂತು ಗುರುಲಿಂಗಸಂಬಂಧಿಯೆಂಬೆ ? ಶಿಕಾರದೊಳಗೆ ಐವತ್ತೊಂದಕ್ಷರವನರಿಯದೆ ಎಂತು ಶಿವಲಿಂಗಸಂಬಂಧಿಯೆಂಬೆ ? ವಕಾರದೊಳಗೆ ಐವತ್ತೊಂದಕ್ಷರವನರಿಯದೆ ಎಂತು ಜಂಗಮಲಿಂಗಸಂಬಂಧಿಯೆಂಬೆ ? ಯಕಾರದೊಳಗೆ ಐವತ್ತೊಂದಕ್ಷರವನರಿಯದೆ ಎಂತು ಪ್ರಸಾದಲಿಂಗಸಂಬಂಧಿಯೆಂಬೆ ? ಓಂಕಾರದೊಳಗೆ ಐವತ್ತೊಂದಕ್ಷರವನರಿಯದೆ ? ಎಂತು ಮಹಾಲಿಂಗಸಂಬಂಧಿಯೆಂಬೆ ? ಓಂಕಾರದೊಳಗೆ ಸಮಸ್ತ ಭೇದಾದಿಭೇದಂಗಳ ತಿಳಿದು ಮೀರಿ ನಿರ್ವಯಲನರಿಯದೆ, ಎಂತು ನಿರ್ವಯಲಸಂಬಂಧಿಯೆಂಬೆನಯ್ಯಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
-->