ಅಥವಾ

ಒಟ್ಟು 4 ಕಡೆಗಳಲ್ಲಿ , 4 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಟವೃಕ್ಷದ ಘಟದ ಮಧ್ಯದಲ್ಲಿ ಒಂದು ಮಠವಿಪ್ಪುದು. ಆ ಮಠಕ್ಕೆ ಹಿಂದೆಸೆಯಿಂದ ಬಂದು, ಮುಂದಳ ಬಾಗಿಲ ತೆಗೆದು, ವಿಚ್ಛಂದದ ಕೋಣೆಯ ಕಂಡು, ಕಿಡಿ ನಂದದೆ ದೀಪವ ಕೊಂಡು ಹೊಕ್ಕು, ನಿಜದಂಗದ ಓಗರದ ಕುಂಭವ ಕಂಡು, ಬಂಧವಿಲ್ಲದ ಓಗರವನುಂಡು, ಸದಮಲಲಿಂಗವೆ ತಾನಾದ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ.
--------------
ಶಿವಲೆಂಕ ಮಂಚಣ್ಣ
ಇಷ್ಟಲಿಂಗಕ್ಕರ್ಪಿಸಿ, ಮೃಷ್ಟಾನ್ನವನುಂಡು, ಇಷ್ಟಾರ್ಥಸಿದ್ಧಿಯ ಪಡೆದೆಹೆವೆಂಬ ಮರಳುಗಳು ನೀವು ಕೇಳಿರೆ; ಪ್ರಾಣಲಿಂಗಸ್ಥಲ ನಿಮಗೆಲ್ಲಿಯದು ಪ್ರಸಾದಸ್ಥಲ ನಿಮಗೆಲ್ಲಿಯದು ಓಗರವನುಂಡು ಆಗಾದೆವೆಂದಡೆ, ಮೂಗಕೊಯ್ಯದೆ ಮಾಣ್ಬನೆ ನಮ್ಮ ಕೂಡಲಸಂಗಮದೇವನು
--------------
ಬಸವಣ್ಣ
ಬ್ರಹ್ಮನ ಬಾಯ ಓಗರವನುಂಡು, ವಿಷ್ಣುವಿನ ಕೈಯ ಸೀರೆಯ ಹೊದ್ದು, ರುದ್ರನ ಮನೆಯಲ್ಲಿ ತಿರುಗಾಡುತ್ತಿಪ್ಪ ಭದ್ರಾಂಗಿಗಳು ಕೇಳಿರೋ. ಬ್ರಹ್ಮನ ಬಾಯ ಮುಚ್ಚಿ, ವಿಷ್ಣುವಿನ ಕೈಯ ಮುರಿದು, ರುದ್ರನ ಮನೆಯ ಸುಟ್ಟು ಬುದ್ಧಿವಂತರಾಗಿ. ಬುದ್ಧಿವಂತರಾದವರ ಅರಿದವರನರಿ. ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಬಂದ ಲಂದಣಗಿತ್ತಿಯರೆಲ್ಲರೂ ಓಗರವನುಂಡು ಹೋದರಲ್ಲದೆ, ಮದುವಳಿಗನ ಕಂಡು ಹೋದುದಿಲ್ಲ. ನಿಬ್ಬಣ್ಣಕ್ಕೆ ಬಂದವರೆಲ್ಲರೂ ಅದ್ದಿಹೋದರು ಹೊಲೆನೀರ ಮಿಂದು. ಮದುವಣಿಗನ ಮುಂದೆ [ಒಬ್ಬು]ಳಿಕೆ[ಯಿ]ಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->