ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಾಸ್ತ್ರವೆ ಅಡ್ಡಣಿಗೆಯಾಗಿ, ಆಗಮವೆ ಹರಿವಾಣವಾಗಿ, ಪುರಾಣವೆ ಓಗರವಾಗಿ, ಉಂಬಾತ ವೇದವಾಗಿ, ಸಕಲ ರುಚಿಯನರಿದು ಭೋಗಿಸುವ ಪ್ರಣವ ತಾನಾಗಿ, ಅದರ ಭೇದ ಏತರಿಂದ ಅಳಿವು ಉಳಿವು? ನಿನ್ನ ನೀನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಭಕ್ತಿಯೆ ಓಗರವಾಗಿ, ಸತ್ಯವೆ ಮೇಲೋಗರವಾಗಿ ನಿಜತತ್ವವೆ ಸವಿಯಾಗಿ_ ಗುಹೇಶ್ವರಲಿಂಗಕ್ಕೆ ಇಕ್ಕಬಲ್ಲವ ಸಂಗನಬಸವಣ್ಣನಲ್ಲದಿಲ್ಲ.
--------------
ಅಲ್ಲಮಪ್ರಭುದೇವರು
ಸೋಂಕಿನ ಸುಖ ಮೊದಲಾದವನೆಲ್ಲವನು ಚರಂಗಕ್ಕರ್ಪಿಸುವೆ. ಆ ಅರ್ಪಿತಮುಖದಲ್ಲಿ ಇಷ್ಟಲಿಂಗವನರಿಯದೆ ಚರಲಿಂಗಕ್ಕರ್ಪಿಸುವೆ. ಆ ಚರಂಗಕ್ಕರ್ಪಿಸಿ ಮಿಕ್ಕ ಶೇಷವನು ಇಷ್ಟಲಿಂಗಕ್ಕೆ ಓಗರವಾಗಿ ನೀಡಿ, ಪ್ರಸಾದವಾಗಿ ಕೈಕೊಂಬೆ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
-->