ಊರಿನ ಹಾದಿಯಲ್ಲಿ ಹೋಗುತ್ತಿರಲಾಗಿ, ಎಯ್ದಿ ಬಂದಿತ್ತೊಂದು ಹಾವು.
ಆರೂ ಇಲ್ಲದ ಠಾವಿನಲ್ಲಿ ಅದ ಮೀರಿ ಹೋಗಲಂಜಿದೆ.
ಓಡಿದಡಟ್ಟಿತ್ತು ಮೀರಿ ನಿಂದಡೆ ಕಚ್ಚಿತ್ತು.
ಗಾರಾದೆನಯ್ಯಾ ಈ ಹಾವ ಕಂಡು.
ಹೋಗಲಿಲ್ಲ ನಿಲ್ಲಲಿಲ್ಲ, ಇದಕ್ಕಾರದೆ ಮೀರಿ ಹಿಡಿದ ಹಾವು
ನಟ್ಟನಡುವೆ ಹಿಡಿಗೊಳಗಾಗಿ ಕಚ್ಚಿತ್ತು. [ಆ] ಹಾ[ವಿಗೆ] ತಲೆಯಿದ್ದಂತೆ ಬಾಲದಲ್ಲಿ
[ವಿಷ].
ಬಾಲದ ವಿಷ ತಾಗಿ, ಊರೆಲ್ಲರೂ ಸತ್ತರು.
ನಾ ಬದುಕಿದೆ, ನಿಃಕಳಂಕ ಮಲ್ಲಿಕಾರ್ಜುನಾ.