ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಶಿವಶಿವಾ, ಎನ್ನ ಮನವು ನಿಮ್ಮ ನೆನೆಯಲೊಲ್ಲದೆಅನ್ಯಕ್ಕೆ ಹರಿವುತಿರ್ಪುದು ನೋಡಾ.ಗುರು ಚರ ಲಿಂಗದ ಸೇವೆಯೆಂದೊಡೆಹಿಂದುಳಿವುತಿರ್ಪುದು ನೋಡಾ.ಅನ್ಯರ ಒಡವೆಯಾದ ಹೊನ್ನು ಹೆಣ್ಣು ಮಣ್ಣೆಂದೊಡೆಮುಂದುವರಿದು ಓಡುತಿರ್ಪುದು ನೋಡಾ.ಈ ಮನದ ಉಪಟಳವು ಘನವಾಯಿತ್ತು.ಇನ್ನೇನು ಗತಿಯಯ್ಯ ಎನಗೆ ಅಖಂಡೇಶ್ವರಾ.