ಅಥವಾ

ಒಟ್ಟು 24 ಕಡೆಗಳಲ್ಲಿ , 3 ವಚನಕಾರರು , 20 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ಅಕ್ಷರವನು ಆರೈದು ತೋರಿರಿ ಓರಂತೆ ಎನ್ನ ಸದುಹೃದಯನೆನಿಸಿ ನಾದ ಕಳೆಗಳನೆನ್ನ ಆಕರದೊಳಗಿಟ್ಟು ಅಭೇದ್ಯ ಪರಮಾನಂದ ಸತ್ಯರೂಪ ನಿತ್ಯಾನಂದ ಶ್ರೀ ಗುರು ಚೆನ್ನಬಸವಣ್ಣನುನ್ನತವನಾರು ಬಲ್ಲರು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕಾಮವಿಕಾರಕ್ಕೆ ಕಳವಳಿಸಿ ಮನವು ಹೇಮದಿಚ್ಛೆಗೆ ಹೆಚ್ಚಿ ಹೆಚ್ಚಿ ಕಾಮಾರಿ ನಿಮ್ಮುವ ನೆನೆಯದೀಮನವು ಓರಂತೆ ನರಕಕ್ಕಿಳಿದೆನೆಂಬುದು. ಕಾರುಣ್ಯಾಕರ ಎನ್ನುವನಾರೈದು ಓರಂತೆ ಮಾಡು, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕಂಜಕರ್ಣಿಕೆ ನಿನ್ನ ಅಂಜನದ ನೇತ್ರವನು ಕುಂಜರನ ಮಸ್ತಕದ ಸುಧೆಯ ಕೂಪ ಭುಂಜಿಸುವ ಮಧುಕರನ ಕಂಜನಾಳದ ಸುದ್ದಿ ಅಜಲೋಕದಾರೈದ ಸುದ್ದಿಯನು ಓರಂತೆ ಅರಿದಾತ ತಾನು ನೀನಪ್ಪನೈ ಕಪಿಲಸಿದ್ಧಮಲ್ಲಿಕಾರ್ಜುನ
--------------
ಸಿದ್ಧರಾಮೇಶ್ವರ
ಮೇಲುಗೆಟ್ಟಾ ಸೀಮೆ, ತೆರಹುಗೆಟ್ಟಾ ಬ್ರಹ್ಮ ; ಅಯ್ದಾರು ಕಣೆಯದಿಂ ಮೇಲೆ ದುರ್ಗ. ಕಾಲಾಳು ನಾಯಕರು ಮೇಲೆ ರಥ ಪಾಯಕರು ಆರೈದು ಓರಂತೆ ದುರ್ಗದಲ್ಲಿ. ಧಾರುಣಿಯ ಕಳ್ಳರಿಗೆ ನಾನಂಜಿ ದುರ್ಗದೊಳು ಓರಂತೆ ಅಡಗಿರ್ದ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಅಯ್ಯೋ ಮಹಾದೇವ ಸುಮ್ಮನೇಕಿದ್ದಪೆ ಕರುಣಿ ಮುಂಬಾಗಿಲಲು ಬಿದ್ದ ಪಶುವೈ. ಓರಂತೆ ಎನ್ನುವನು ಆರಯ್ಯದಿದ್ದಡೆ ಹಾನಿ ನಿನಗಪ್ಪುದೈ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಓರಂತೆ ಮಾಡಯ್ಯಾ ನಿನ್ನವರೊಳಗೆ ಮನ್ನಣೆಯಿಂದ ಮಚ್ಚಿಸಯ್ಯಾ ನಿನ್ನವರ ಪಾದೋದಕವ ನಚ್ಚಿಸಯ್ಯಾ, ನಿನ್ನವರ ಪ್ರಸಾದವ ನಚ್ಚಿಸಿ ಮಚ್ಚಿಸಿ ಮನಕ್ಕೆ ನೀನೇ ಮಂಗಳವಾಗಿ ಅಚ್ಚಿಗಬಡಿಸದಂತಿರಿಸಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಈರೈದು ಸೀಮೆಯಿಂದಾರಯ್ಯ ಬಂದಾರೆ, ಓರಂತೆ ಅವರುವನು ನೀನೆಂಬೆನು; ಕಾರುಣ್ಯಕರ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಅವರ ದ್ವಾರಕಿಂಕರನಾಗಿಯಾನಿಪ್ಪೆನು.
--------------
ಸಿದ್ಧರಾಮೇಶ್ವರ
ಮಂಗಳದ ಸಂಗ ಅಂಗಕ್ಕೆ ಮಚ್ಚಿದುದ ಹಿಂಗಿ ಹೇಳಲ್ಕಿದಕೆ ಜಿಹ್ವೆಯುಂಟೆ? ಈರಾರು ಸುಖಗಳನು ಮೇಲಾದ ಮಧುರವನು ಓರಂತೆ ಉಂಡುದಕೆ ಪ್ರಳಯವುಂಟೆ? ನಿಗಮಂಗಳರಿಯದಿಹ ಅಗಣಿತ ಮೆಟ್ಟದಾ ಶ್ರುತಿಯ ತಪ್ಪಲಲಿರ್ದ ನಿತ್ಯತೃಪ್ತಾ ಮೂರಾರು ಈರಾರು ತೋರಿರ್ಪ ನಿಶ್ಚಯದ ಆರರಿಂದಂ ಮೇಲೆ ಸಂಯೋಗವು ಸ್ವಾನುಭಾವದ ದೀಕ್ಷೆ ತಾನು ತನಗಳವಟ್ಟು ಹೇಳದೆ ಹೋದನಾ ಇರ್ದ ಮನೆಗೆ ಮೂರನು ಮುಟ್ಟದೆ ಆರನು ತಟ್ಟದೆ ಮೀರಿ ಉರವಣಿಸಿದನು ಸಾಯುಜ್ಯದಾ ಫಲಪದವನತಿಗಳೆದು ನಿಗಮಕ್ಕಭೇದ್ಯನ ಕಂಡೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಮೇರುವಿನ ಮಧ್ಯದ ಓರಂತೆ ಸುಧೆವರಿದು ಆರಾರು ಆರುವರೈ ಅತ್ಯ್ಕಶಿಷ*. ಧಾರುಣಿಗೆವರಿಯದಾ ಮೇಲಪ್ಪ ಪಸರದ ಮೂರು ಮಸ್ತಕದಲ್ಲಿ ಅರತು ಅರತ, ಓರಂತೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಅಹೋರಾತ್ರಿಲಿಯ ಅರಸಿ ಕಂಡೆ ನಾನು.
--------------
ಸಿದ್ಧರಾಮೇಶ್ವರ
ಶ್ರೀಗುರುವೆ ಬಸವಯ್ಯ, ಶ್ರೀಚರವೆ ಬಸವಯ್ಯ. ಶ್ರೀಮಹಾ ಇಷ್ಟಲಿಂಗ ಬಸವಣ್ಣನು. ಆರೈದು ಎನ್ನುವನು ಓರಂತೆ ಸಲಹಿದಾ ಕಾರುಣ್ಯಸುರತರುವೆ ಬಸವಲಿಂಗ ಭಾವಿಸಿ ಎನ್ನುವನು ಅಜಾತನ ಮಾಡಿದಾತ ಬಸವಣ್ಣ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಕರುಣಾಕರನೆ ಎಂದು ಹೊಗಳುತೈದಾವೆ ಶ್ರುತಿಯು; ಐದಡೆ ಹಾನಿ ಬಿರಿದಿಂಗೆ. ಅಯ್ಯಾ, ಅಯ್ಯಾ, ಕರುಣಾಕರ ಕಪಿಲಸಿದ್ಧಮಲ್ಲೇಶ್ವರಾ, ಓರಂತೆ ಮಾಡಿ ಸಲಹಯ್ಯಾ ಎನ್ನನು.
--------------
ಸಿದ್ಧರಾಮೇಶ್ವರ
ಮೇಲುಗೆಟ್ಟ ಸೀಮೆ, ತೆರಹುಗೆಟ್ಟ ಬ್ರಹ್ಮ. ಐದಾರು ಕಣೆಯದಿಂ ಮೇಲೆ ದುರ್ಗ. ಕಾಲಾಳು ನಾಯಕರು, ಮೇಲೆ ರಥಪಾಯಕರು, ಆರೈದು ಓರಂತೆ ದುರ್ಗದಲ್ಲಿ. ಧಾರುಣಿಯ ಕಳ್ಳರಿಗೆ ತಾನಂಜಿ ದುರ್ಗದೊಳು ಓರಂತೆ ಅಡಗಿರ್ದಾತ, ಶ್ರೀಮಲ್ಲಿಕಾರ್ಜುನ.
--------------
ಮಲ್ಲಿಕಾರ್ಜುನ ಪಂಡಿತಾರಾಧ್ಯ
ದೇವ ನಿನ್ನಯ ಪರಿಯನಾರಯ್ಯಲರಿದಯ್ಯ ಆರೈದ ಶರಣರು ನಿನ್ನ ಪದದಲ್ಲಿ ಓರಂತೆ ಆನಂದಸ್ಥಾನದಲಿ ತಾವು ನಿನ್ನಯ ರೂಪ ಭಾವ ತಪ್ಪದೆ ಇಪ್ಪರೈ ಗುರುವೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಭಸಿತವನಿಟ್ಟಿಹೆ, ರುದ್ರಾಕ್ಷಿಯ ಧರಿಸಿಹೆ, ನೀನೊಲ್ಲೆ, ನೀನೊಲಿದೆ. ನಿನ್ನೊಲುಮೆ ಏಕೆ ಎಲೆ ಅಯ್ಯಾ. ನಿನ್ನವರೊಲ್ಲರು! ಆ ಒಲುಮೆ ತಾನೆನಗೇಕೆ? ಹೇಳಾ, ಎಲೆ ಅಯ್ಯಾ. ಪುರುಷರಿಲ್ಲದ ಸ್ತ್ರೀಯರ ಶೃಂಗಾರದಂತೆ ನಿನ್ನೊಲುಮೆ ಏಕೆ? ಹೇಳಾ! ನಿಜಭಕ್ತಿಯಲ್ಲಿರಿಸಿ ಸದ್ಭಕ್ತನೆಂದೆನಿಸಿ ಸದಾಚಾರಿಗಳ ಸಂಗಡ ಎನ್ನ ಹುದುವಿನಲ್ಲಿ ಕುಳ್ಳಿರಿಸಿ ಓರಂತೆ ಮಾಡಾ, ಕಪಿಲಸಿದ್ಧಮಲ್ಲಿಕಾರ್ಜುನ, ನೀನೊದುದಕ್ಕೆ ಇದು ಕುರುಹು. ಅಲ್ಲರ್ದಡೆ ಇದು ವೈಶಿಕ!
--------------
ಸಿದ್ಧರಾಮೇಶ್ವರ
ಈರೇಳು ಭುವನ Zõ್ಞರಾಸಿಲಕ್ಷ ಯೋನಿಮುಖಜೀವರಾಶಿಗಳೊಳಗೆ ಓರಂತೆ ತೊಳಲುತ್ತಿಪ್ಪ ಹಂಸನ ಗತಿಗೆಡಿಸುವ ರಮ ಪಶುಪಾಶಪತಿ ಜ್ಞಾನದ ಪದವನರುಹುವ ಗುರುವಿನ ಮಥನವೆ ಗುರುವಿನ ಶೇಷ. ಹೃತ್ಕುಂಡಲದ್ವಾದಶಾಂತತ್ರಿತತ್ವದ ಮೇಲೆ ತನ್ನ ಜೀವವು ಶಾಂತ್ಯತೀತವಾದ ತಾನೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಗುರುಭಕ್ತಪ್ರಸಾದಿಯ ಹೊಲಬಿನ ಸಂಗದಿಂದ ಲಿಂಗಸುಸಂಗವೇದ್ಯ.
--------------
ಉರಿಲಿಂಗಪೆದ್ದಿ
ಇನ್ನಷ್ಟು ... -->