ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಕಂಗಳ ಕಾಳಗ ನೋಟದ ಮಸಕಮಿಂಚಿನಗೊಂಚಲು ತಾಗಿದಂತಾದುದವ್ವಾ.ತಾರಕಿ ತಾರಕಿ ಸೂಸಿದಂತೆ, ಅರಗಿನ ಬಳ್ಳಿ ಹಬ್ಬಿದಂತವ್ವಾ.ಓರೆಕೋರೆ ಕೆಂಪಾದವವ್ವಾ, ಆಳುಗಳಿನ್ನಾರೋ?ಐದು ರೂಹನೊಂದು ಮಾಡಿ,ಕಾದಿ ಗೆದ್ದು ಸೋತು ಹೊರಹೊಂಟುಹೋದನವ್ವಾ,ಮಹಾಲಿಂಗ ಗಜೇಶ್ವರ ಕಂಗಳ ಕಾಳಗದ ಮಾಸಾಳು.