ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನೇವೆನಿನ್ನೇವೆನೆಲೆ ತಂದೆ ಹೆಣ್ಣು ಬಾಲೆಯ ಮೊರೆಯ ಕೇಳಯ್ಯ. ಮುನ್ನ ಹುಟ್ಟಿದ ಒಂಬತ್ತು ಮಕ್ಕಳ ನಗೆನುಡಿಯ ಕೇಳಲಾರೆ. ಮನೆಯ ಗಂಡನ ಬೆಡಗು ಬಿನ್ನಾಣವ ನೋಡಲಾರೆ. ನನ್ನ ಸಿರಿಯಲ್ಲಿ ನಾನು ಓಲಾಡಲಾರೆ. ಎನಗೊಂದು ಮಗುವ ಕೊಡಯ್ಯ ಗುರುವೆ. ಆ ಮಗುವಿನ ಕೈಯಿಂದ ಗಂಡನ ತಲೆಯೊಡೆಯಿಕ್ಕಿಸು. ಮಕ್ಕಳ ಕೊರಳ ಕೊಯಿಸು. ಎನ್ನ ದಂಡವ ಕೊಳಿಸು. ಪಟ್ಟಣಕ್ಕೆ ಹೋಗುವ ಹಾದಿ ಮೂರುಬಟ್ಟೆ ಕೂಡಿದ ಮಧ್ಯದಲ್ಲಿ, ಮಣಿಹವ ಮಾಡುತ್ತಿಪ್ಪ ಕೈಕಾಲಿಲ್ಲದ ಮೋಟಂಗೆ ಮೆಚ್ಚಿ ಮರುಳಾದ ಪತಿವ್ರತೆಯಯ್ಯ ನಾನು. ಎನ್ನ ಕೊಂಡು ಹೋಗಿ ಅವನಿಗೆ ಮದುವೆಯ ಮಾಡಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
-->