ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಲಿಂಗವನರಿಯದೆ ಏನನರಿದಡೆಯೂ ಫಲವಿಲ್ಲ,ಲಿಂಗವನರಿದ ಬಳಿಕ ಮತ್ತೇನನರಿದಡೆಯೂ ಫಲವಿಲ್ಲ.ಸರ್ವಕಾರಣ ಲಿಂಗವಾಗಿ,ಲಿಂಗವನೆ ಅರಿದರಿದು ಲಿಂಗಸಂಗವನೆ ಮಾಡುವೆ.ಸಂಗಸುಖದೊಳು ಓಲಾಡುವೆ ಗುಹೇಶ್ವರಾ.
ನಿಮ್ಮ ಒಕ್ಕುದ ಕೊಂಡು ಓಲಾಡುವೆ, ಮಿಕ್ಕುದ ಕೊಂಡು ಕುಣಿದಾಡುವೆ. ನಿಮ್ಮ ತೊತ್ತಿನ ತೊತ್ತಿನ ಕರುಣಪ್ರಸಾದವ ಕೊಂಡು ನಿತ್ಯಳಾಗಿ ಬದುಕಿದೆನು ಕಾಣಾ ಚೆನ್ನಮಲ್ಲಿಕಾರ್ಜುನಾ.