ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಸನ ಬಂಧವ ಮಾಡಿ, ನಾಸಿಕಾಗ್ರದಲ್ಲಿ ದೃಷ್ಟಿಯನಿರಿಸಿ ಸೂಸಲೀಯದೆ ಮನವ, ಬೀಸರ ಹೋಗದೆ ಪವನ[ನ] ಓಸರಿಸಲೀಯದೆ ಬಿಂದುವ, ಊಧ್ರ್ವಕ್ಕೆತ್ತಿ ಇಂತೀ ತ್ರಿವಿಧವನೊಂದೇ ಠಾವಿನಲ್ಲಿ ಬಲಿದು ನಿಲಿಸಿ ಸಾಸಿರದಳಕಮಲದ ನಾದಾತ್ಮಲಿಂಗದಲ್ಲಿ ಮನ ಲೀಯವಾದಡೆ ಅದೇ ಪರಮ ರಾಜಯೋಗವಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಜವನೈದುವಡೆ.
--------------
ಸ್ವತಂತ್ರ ಸಿದ್ಧಲಿಂಗ
-->