ಅಥವಾ

ಒಟ್ಟು 12 ಕಡೆಗಳಲ್ಲಿ , 2 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನ್ನ ತಾ ಬೀಳುವರ ಕಂಡು ತಳ್ಳಿ ಹಗೆಯಾಗಲೇಕೆ? ಒಡೆದುದ ಕಂಡು ಒಡಯಿರಿಯಲೇಕೆ? ಇಂತೀ ಬಿಡುಮುಡಿಯನರಿಯದೆ ಒಡೆಯರೆಂದು ಕೊಡುವರ ಕಾಲ ಪಡಿಗಕ್ಕೆ ಇವರು ಹೆಸರೊಡೆಯರಲ್ಲದೆ ಅಸಮಾಕ್ಷರಲ್ಲ. ಇಂತೀ ಗಸಣಿಗಿನ್ನೇವೆ, ಕಣ್ಣಯ್ಯಪ್ರಿಯ ಗೊಹೇಶ್ವರನ ಶರಣ ಅಲ್ಲಮಾ.
--------------
ಗಾಣದ ಕಣ್ಣಪ್ಪ
ನಾ ಬಂದುದಕ್ಕೆ ಮಾಡಿದೆ. ನೀ ಕಳುಹಿದವರ ಕೊಂದೆ. ಬಂದೆ ನೀವಿರಿಸಿದಂತಿದ್ದು ಎನ್ನಗಿನ್ನು ಬಂಧ ಮೋಕ್ಷವೇಕೆ, ಕಣ್ಣಯ್ಯಪ್ರಿಯ ಗೊಹೇಶ್ವರನ ಶರಣ ಅಲ್ಲಮನ ಲೇಪವಾದವಂಗೆ.
--------------
ಗಾಣದ ಕಣ್ಣಪ್ಪ
ನಾ ಹಡೆದೆ ಮೂವರು ಸೂಳೆಯರ. ಒಬ್ಬಳಿಗೋಹೆಯನಿಕ್ಕುವೆ; ಒಬ್ಬಳಿಗೆ ವೇಳೆಗೊತ್ತೆಯ ಕೊಡುವೆ; ಒಬ್ಬಳ ಮನೆಯೊಳಗೆ ಹಾಕಿಕೊಂಡೆ. ಎನ್ನ ವಂಚಿಸಿ ಮೂವರೂ ಓಡಿಹೋದರು; ಲೇಸಾಯಿತ್ತೆಂದೆ, ಗೊಹೇಶ್ವರನ ಶರಣ ಅಲ್ಲಮನ ದೆಸೆಯಿಂದ.
--------------
ಗಾಣದ ಕಣ್ಣಪ್ಪ
ಒಂದೆ ಕೋಲಿನಲ್ಲಿ ಮೂರುಲೋಕ ಮಡಿಯಿತ್ತು. ಬಿಲ್ಲಿನ ಕೊಪ್ಪು ಹಾರಿ ನಾರಿ ಸಿಡಿದು ನಾರಾಯಣನ ತಾಗಿತ್ತು. ನಾರಾಯಣನ ಹಲ್ಲು ಮುರಿದು ಬ್ರಹ್ಮನ ಹಣೆಯೊಡೆಯಿತ್ತು. ಹಣೆ ಮುರಿದು ರುದ್ರನ ಹಣೆಗಿಚ್ಚಿನಲ್ಲಿ ಬಿದ್ದಿತ್ತು, ನಷ್ಟವಾಯಿತ್ತು; ಗೊಹೇಶ್ವರನ ಶರಣ ಅಲ್ಲಮ ಬದುಕು ನಾಮ ನಷ್ಟವಾಯಿತ್ತು.
--------------
ಗಾಣದ ಕಣ್ಣಪ್ಪ
ಶಾಂತಿಯ ಮಾಡಹೋದಡೆ ಬೇತಾಳವಾಯಿತ್ತಯ್ಯಾ. ಸೀತಾಳದಾಪ್ಯಾಯನವಾಯಿತೆಂದಡೆ ಪರಹಿತಾರ್ಥವೆಂದು ತೋರಿದೆನೆನ್ನ ಪ್ರಾಣಲಿಂಗವನು ನೇಮವ ಮಾಡಲೆಂದು ಕೊಟ್ಟಡೆ ಕೊಂಡೋಡಿ ಹೋದನು ಅನಿಮಿಷನು. ಅಭವನ ಮಹಾಮನೆಯ ಹೊಕ್ಕಡೆ ಎನಗೆ ಹೇಯವನೊಡ್ಡಿ ಅರಸೆಂದು ಕಳುಹಿದನು. ಅಳಲಿ ಬಳಲಿ ತೊಳಲಿ ಆಡಿಹಾಡಿ ಹಂಬಲಿಸಿ, ಅನಂತ ಅವಸ್ಥೆಯಿಂದ ಲಕ್ಷದ ಮೇಲೆ ತೊಂಬತ್ತಾರುಸಾವಿರ ವಚನವ ಹಾಡಿ ಆಚಾರ ವಿಚಾರದಿಂದ ವಿಚಿತ್ರನಭೆಯವ ಕೊಟ್ಟು ಕಳುಹಿಸಿದನಯ್ಯಾ. ಗೊಹೇಶ್ವರನ ಶರಣ ತೋರಿದಡರಿದನು ಕೂಡಲಸಂಗಮದೇವರ.
--------------
ಬಸವಣ್ಣ
ಒಂದು ಧನುವಿಂಗೆ ಮೂರಂಬ ಹಿಡಿದೆ. ಒಂದು ಬಾಣದ ಬಿಡಲಾಗಿ ಪದ್ಮೋದ್ಭವನ ಸೃಷ್ಟಿಯ ಕಟ್ಟಿತ್ತು. ಮತ್ತೊಂದು ಬಾಣವ ಬಿಡಲಾಗಿ ಪದ್ಮನಾಭನ ಹೆಡಗಯ್ಯ ಕಟ್ಟಿತ್ತು. ಕಡೆಯ ಬಾಣ ರುದ್ರನ ಹಣೆಯನೊಡೆದು ಅಲಗು ಮುರಿಯಿತ್ತು; ಗರಿ ಜಾರಿತ್ತು; ನಾರಿಯ ಹೂಡುವ ಹಿಳುಕು ಹೋಳಾಯಿತ್ತು; ಗೊಹೇಶ್ವರನ ಶರಣ ಅಲ್ಲಮ ಹಿಡಿದ ಬಿಲ್ಲುಮುರಿಯಿತ್ತು.
--------------
ಗಾಣದ ಕಣ್ಣಪ್ಪ
ನಾ ಬಂದ ಹಾದಿಯಲ್ಲಿ ಎಂಬತ್ತು ನಾಲ್ಕು ಲಕ್ಷ ಕಳ್ಳರು ಕಟ್ಟಲಂಜಿದರು. ಮೂರು ಠಾವಿನ ಅನುವ ಮೀರಿದೆ. ಬಂದು ನಿಂದಿರಲಾಗಿ, ಈ ದೇಶದ ಅಂದವೇನೊ ಎಂದು ಕೇಳಿದ, ಗೊಹೇಶ್ವರನ ಶರಣ ಅಲ್ಲಮನು.
--------------
ಗಾಣದ ಕಣ್ಣಪ್ಪ
ಗಾಣವ ಹಾಕಲಾಗಿ ಆರಾರು ಸಿಕ್ಕಿದರು ಆರೈಕೆಗೊಳ್ಳಯ್ಯ. ಐದಕ್ಕೊಂದು ಹೋಗಿ ನಾಲ್ಕರಲ್ಲಿ ನಾಚಿಕೆಗೆಟ್ಟು ಜಗದಾಶೆಯ ಬಯಕೆಯಿಂದ ದಶಾವತಾರವಾದ. ಇಷ್ಟದ ಇಂದ್ರಿಯಕ್ಕಾಗಿ ಪಾಶವ ಹೊತ್ತ ತಲೆಯಲ್ಲಿ ಇಂತೀ ವೇಷಧಾರಿ ಹಾಕಿದ ಗಾಣದಲ್ಲಿ ಇಷ್ಟಕ್ಕೆ ಸಿಕ್ಕಿ ಘಾಸಿಯಾದರು ಇನ್ನಿಪ್ಪುವರಾರಯ್ಯ ಗೊಹೇಶ್ವರನ ಶರಣ ಅಲ್ಲಮನಲ್ಲದೆ?
--------------
ಗಾಣದ ಕಣ್ಣಪ್ಪ
ಹೋಗುತಿದ್ದ ಎರಳೆಯನೆಚ್ಚಡೆ ಮೂರು ಕಾಲು ಹರಿದು ಒಂದರಲ್ಲಿ ಆಧರಿಸಿ ನಿಂದಿತ್ತು. ನಿಂದ ಹೆಜ್ಜೆಯ ಕೀಳಲಾರದೆ ಅಂಗ ಬಿದ್ದಿತ್ತು; ಎರಳೆ ಅಳಿಯಿತ್ತು. ಗೊಹೇಶ್ವರನ ಶರಣ ಅಲ್ಲಮನಲ್ಲಿ ಬೇಂಟೆಯ ಹಪ್ಪು ಕೆಟ್ಟಿತ್ತು.
--------------
ಗಾಣದ ಕಣ್ಣಪ್ಪ
ಬಂದ ಜೀವವನೆಲ್ಲವ ಕೊಂದೆ. ಅಂದಂದಿಗೆ ಹೆರಹಿಂಗಿದೆ. ಅವರೆಂದಿನ ಅಸುವಿಂಗೊಡೆಯ ಬಂದರೂ ಬಿಡೆನೆಂದೆ ಗೊಹೇಶ್ವರನ ಶರಣ ಅಲ್ಲಮನಲ್ಲಿ.
--------------
ಗಾಣದ ಕಣ್ಣಪ್ಪ
ಮದಕರಿ ಮದವೇರಿ ಬೀದಿಯಲ್ಲಿ ಬರಲಾಗಿ ಎಂಟು ಕೇರಿಯ ಕಂಬ ಮುರಿದು ಒಂಬತ್ತು ಬಾಗಿಲ ಕದವ ಕಿತ್ತು ಮತ್ತೆ ಎನ್ನ ಮೇಲೊತ್ತಿ ಬರಲಾಗಿ ನಿಶ್ಚಯವಾಗಿ ನಿಂದೆ. ಮತ್ತಗಜದ ಸೊಂಡಿಲು ಮುರಿದೊತ್ತಿ ಇಟ್ಟೆ ಆ ಗಜವ ಗೊಹೇಶ್ವರನ ಶರಣ ಅಲ್ಲಮನೊತ್ತಿಗಾಗಿ.
--------------
ಗಾಣದ ಕಣ್ಣಪ್ಪ
ಅಯ್ಯಾ, ನಿಮ್ಮ ಮುಟ್ಟಿದ ಗುಣದಿಂದಲಾನು ಪೂರ್ವಾಚಾರಿಯಾದೆನಯ್ಯಾ. ಅಯ್ಯಾ, ನಿಮ್ಮ ಮುಟ್ಟಿದ ಗುಣದಿಂದಲಾನು ವೃಷಭನಾದೆನಯ್ಯಾ. ಅಯ್ಯಾ, ನಿಮ್ಮ ಮುಟ್ಟಿದ ಗುಣದಿಂದಲಾನು ಸಂಗನಬಸವಣ್ಣನಾಗಿ, ಗೊಹೇಶ್ವರನ ಶರಣನ ಮಹಾಬಸುರೊಳಗೆ ಕಂದನಾಗಿರ್ದೆ ಕಾಣಾ, ಕೂಡಲಸಂಗಮದೇವಾ.
--------------
ಬಸವಣ್ಣ
-->