ಅನುಪಮಲಿಂಗದಲ್ಲಿ ಘನವಿನಯ ಮಂಗಲಮಹೇಶ್ವರನು
ಒಂದನುವಿಡಿದಾಚಾರಸನ್ನಿಹಿತ ತಾನಾಗಿ,
ತನುಮನಭಾವಾತ್ಮ ನಿರ್ಮಲ ಸ್ವಯಂಜ್ಯೋತಿ ನೋಡಾ !
ಒಂದಿಷ್ಟು ಅನುಮಾನ ಟಕ್ಕು ಅನುಸರಣೆಗಳನರಿಯ ನೋಡಾ !
ಎರಡು ಚರಿತೆಯ ಹಿಡಿದು ಕಳೆವರ ಹಳಿದು ತಿಳುಹುವ ನೋಡಾ !
ಬಳಿವಿಡಿದು ಬೆಳೆಯುವರ ತಿಳಿಯಕೂಡಿ ಬೆಳಗುವ ನೋಡಾ !
ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತದಿರುವಿನ ಪರಿ ನೋಡಾ.