ಅಥವಾ

ಒಟ್ಟು 4 ಕಡೆಗಳಲ್ಲಿ , 4 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹುಸಿ ಕಳವು ಡಂಬಕದ ಸುಳುಹನಳಿದುಳಿದ ಜ್ಞಾನಕಲಾತ್ಮನ ಕಂಡ ಚೌಪೀಠವಾಸನು, ತ್ರಿವಿಧಾನುಗ್ರಹವ ಮಾಡಿ ಕಾಯ ಪ್ರಾಣಾತ್ಮ ಸನ್ನಿಹಿತನಾಗಿ ತಾನೆಂಬ ಭಾವ ತಪ್ಪುವಂತೆಮಾಡಿ ಸಲಹಿದನೆನ್ನ ನಿರಂಜನ ಚನ್ನಬಸವಲಿಂಗವೆಂಬ ಗುರುನಾಥಂಗೆ ಶರಣು ಶರಣು ಶರಣೆನುತಿರ್ದೆನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಡಂಬಕದ ಪೂಜೆ ಹೋಹ ಹೊತ್ತಿನ ಕೇಡು. ಆಡಂಬರದ ಪೂಜೆ ತಾಮ್ರದ ಮೇಲಣ ಸುವರ್ಣದ ಛಾಯೆ. ಇಂತೀ ಪೂಜೆಗೆ ಹೂ ಸೊಪ್ಪನಿಕ್ಕಿ ಮನ ಹೂಣದೆ ಮಾಡುವ ಪೂಜೆ ಬೇರು ನನೆಯದೆ ನೀರು, ಆಯವಿಲ್ಲದ ಗಾಯ, ಭಾವವಿಲ್ಲದ ಘಟ ವಾಯವೆಂದ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಸ್ವಾದವಿಲ್ಲದ ಹಣ್ಣು, ಸೌರಭವಿಲ್ಲದ ಕುಸುಮ, ಸಾರವಿಲ್ಲದ ದ್ರವ್ಯ, ಅದಾರಿಗೆ ಯೋಗ್ಯ? ಅರಿವಿಲ್ಲದವನ ಇಷ್ಟದ ಬರಿಯ ಡಂಬಕದ ಪೂಜೆ ಅಡಿಯಿಡಲಿಲ್ಲ, ಏಣಾಂಕಧರ ಸೋಮೇಶ್ವರಲಿಂಗಕ್ಕೆ.
--------------
ಬಿಬ್ಬಿ ಬಾಚಯ್ಯ
ಐಶ್ವರ್ಯವುಳ್ಳವಂಗೆ ನಿಜಭಕ್ತಿಯಿಲ್ಲ. ಡಂಬಕದ ವೇಷಧಾರಿಗೆ ನಿಜತತ್ವದ ಜ್ಞಾನವಿಲ್ಲ. ಕುಟಿಲರ ನೆಮ್ಮಿಗೆ ಘನಲಿಂಗದ ನೆಮ್ಮಿಗೆಯಿಲ್ಲ, ಐಘಟದೂರ ರಾಮೇಶ್ವರಲಿಂಗ.
--------------
ಮೆರೆಮಿಂಡಯ್ಯ
-->