ಅಥವಾ

ಒಟ್ಟು 4 ಕಡೆಗಳಲ್ಲಿ , 3 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬ್ರಹ್ಮನ ಡಾಗು ಬೆನ್ನಮೇಲೆ, ವಿಷ್ಣುವಿನ ಡಾಗು ಕೈಯ ಮೇಲೆ. ರುದ್ರನ ಡಾಗು ತಲೆಯ ಮೇಲೆ. ಇಂತೀ ಡಾಗಿನ ಪಶುಗಳಿಗೇಕೆ ಅನಾಗತನ ಸುದ್ದಿ ? ಇದು ನಿಮಗೆ ಸಾ[ದ್ಥಿ]ಸದೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಲೋಹ ಗುಂಡಾದಲ್ಲಿ ಇರಿಯಬಲ್ಲುದೆರಿ ಮುದ್ರೆಯ ಪಶು ದಿಟ ಪ್ರಾಣಲಿಂಗಿಯಾಗಬಲ್ಲನೆರಿ ಡಾಗಿನ ಪಶುಗಳೆಲ್ಲರೂ ಭೇದವನರಿಯಬಲ್ಲರೆರಿ ಎಂದನಂಬಿಗ Zõ್ಞಡಯ್ಯ.
--------------
ಅಂಬಿಗರ ಚೌಡಯ್ಯ
ಮಣ್ಣು ಬೆಂದು ಮಡಕೆಯಾಗಿ ಒಡೆದಡೆ, ಮುನ್ನಿನಂತಾದುದಿಲ್ಲ. ಮಿಸುನಿ ವಿಶ್ವದೊಳಗಿದ್ದು, ತನ್ನಯ ರಸಕುಲವ ಬೆರೆಸಿದುದಿಲ್ಲ. ಕ್ಷೀರ ಬಲಿದು ನಿಂದು, ಮುನ್ನಿನ ಪಿಸಿತವ ಸಾರಿದುದಿಲ್ಲ. ಮೂರನರಿದು ಹರಿದು, ಮೂರನೊಡಗೂಡುವ ಡಾಗಿನ ಪಶುಗಳಿಗೇಕೆ ನೆರೆ ನಿರನ ಹೊಲಬು, ಐಘಟದೂರ ರಾಮೇಶ್ವರಲಿಂಗವನರಿಯರಾಗಿ ?
--------------
ಮೆರೆಮಿಂಡಯ್ಯ
ಕಾಯ ಹಸಿದು ಓಗರವ ಬೇಡುವಾಗ, ಲಿಂಗಕ್ಕೆ ಅರ್ಪಿತವೆಲ್ಲಿಯಿತ್ತೊ ? ಮನ ತನುವ ಬಿಟ್ಟು ಸರ್ವವಿಕಾರದಲ್ಲಿ ಭ್ರಮಿಸುವಾಗ, ಸಾವಧಾನಿಗಳೆಂತಾದಿರೊ? ಸ್ಥೂಲದಲ್ಲಿ ಹಿಡಿದು, ಸೂಕ್ಷ್ಮದಲ್ಲಿ ಮರೆದು, ಕಾರಣದಲ್ಲಿ ಏನೆಂದರಿಯದೆ, ಜಗದ ಉತ್ಪತ್ಯಕ್ಕೆ ಒಳಗಾಹವರ ಪ್ರಾಣಲಿಂಗಿಗಳೆಂಬೆನೆ? ಎನ್ನೆನು. ಇಂತಿವರೆಲ್ಲರೂ ಡಾಗಿನ ಪಶುಗಳು, ವೇಷಧಾರಿಗಳು, ಶಾಸ್ತ್ರದ ಸಂತೆಯವರು, ಪುರಾಣದ ಪುಂಡರು, ತರ್ಕದ ಮರ್ಕಟರು, ಭವಸಾಗರದ ಬಾಲಕರು. ತತ್ವವನರಿಯದ ಮತ್ತರು. ಇಂತಿವರು ಕೆಟ್ಟ [ಕೇಡ] ನೋಡಿ ಗುರು[ವಿನ] ಕೊರಳ ಕೊಯ್ದು, ಲಿಂಗದ ತಲೆಯೊಡೆಯಲಿಕ್ಕಿ, ಜಂಗಮದ ಸಂದ ಮುರಿದೆ. ದ್ವಂದ್ವವ ಹಿಂಗಿದೆ, ಸಂದನಳಿದೆ, ಸದಮಲಾನಂದ ಹಿಂಗಿದೆ. ಹೊಂದದ ಬಟ್ಟೆಯಲ್ಲಿ ಸಂದೆನಯ್ಯಾ, ಮಹಾದಾನಿ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->