ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಣವದ ಚಿನ್ನಾದವೆ ಅಕಾರ, ಪ್ರಣವದ ಚಿದ್ಬಿಂದುವೆ ಉಕಾರ, ಪ್ರಣವದ ಚಿತ್ಕಲೆಯೆ ಮಕಾರ. ಪ್ರಣವದ ಬಟ್ಟೆಯೆ ಬಕಾರ, ಪ್ರಣವದ ಸೋಪಾನವೆ ಸಕಾರ, ಪ್ರಣವದ ವರ್ತನೆಯೆ ವಕಾರ. ಪ್ರಣವದ ಬಹಳಾಕಾರವೆ ಬಕಾರ ಪ್ರಣವದ ಸಾಹಸವೆ ಸಕಾರ, ಪ್ರಣವದ ವಶವೆ ವಕಾರ. ಪ್ರಣವದ ಬರವೆ ಬಕಾರ, ಪ್ರಣವದ ಸರವೆ ಸಕಾರ, ಪ್ರಣವದ ಇರವೆ ವಕಾರ. ಪ್ರಣವದ ಬಲ್ಮೆಯೆ ಬಕಾರ, ಪ್ರಣವದ ಸಲ್ಮೆಯೆ ಸಕಾರ, ಪ್ರಣವದ ಒಲ್ಮೆಯೆ ವಕಾರ. ಪ್ರಣವದ ಪಶ್ಯಂತಿವಾಕೇ ಬಕಾರ, ಪ್ರಣವದ ಸೂಕ್ಷ ್ಮವಾಕೇ ಸಕಾರ, ಪ್ರಣವದ ವೈಕಲ್ಯವಾಕೇ ವಕಾರ. ಪ್ರಣವದ ಬಹಳ ಜ್ಞಾನವೆ ಬಕಾರ, ಪ್ರಣವದ ಸಹಜ ಜ್ಞಾನವೆ ಸಕಾರ, ಪ್ರಣವದ ಶುದ್ಧ ಜ್ಞಾನದೀಪ್ತಿಯೆ ವಕಾರ. ಪ್ರಣವದ ಮೂಲವೆ ಬಕಾರ, ಪ್ರಣವದ ಶಾಖೆಯೆ ಸಕಾರ, ಪ್ರಣವದ ಫಲವೆ ವಕಾರ. ಪ್ರಣವದ ಬಹಳ ನಾದವೆ ಬಕಾರ, ಪ್ರಣವದ ಸನಾದವೆ ಸಕಾರ, ಪ್ರಣವದ ಸುನಾದವೆ ವಕಾರ. ಪ್ರಣವದ ಭಕ್ತಿಯೆ ಬಕಾರ, ಪ್ರಣವದ ಸುಜ್ಞಾನವೆ ಸಕಾರ, ಪ್ರಣವದ ವೈರಾಗೈವೆ ವಕಾರ. ಪ್ರಣವದ ಶಬ್ದವೆ ಬಕಾರ, ಪ್ರಣವದ ನಿಃಶಬ್ದವೆ ಸಕಾರ, ಪ್ರಣವದ ಶಬ್ದ ನಿಶಬ್ದದ ವಾಕುಗಳೆ ವಕಾರ. ಇಂತಪ್ಪ ಪ್ರಣವ ಮಂತ್ರಂಗಳೇ ಬಸವಾ ಎಂಬ ಪ್ರಣವ ನಾದತ್ರಯಸಂಬಂಧವಾದುದಂ ತ್ರಿಪುರಾಂತಕಲಿಂಗದಲ್ಲಿ ಅರಿದು ಸುಖಿಯಾಗಿ ಆನು ಬಸವಾ, ಬಸವಾ, ಬಸವಾ, ಎಂದು ಜಪಿಸುತ್ತಿದ್ದೆನಯ್ಯಾ.
--------------
ಕಿನ್ನರಿ ಬ್ರಹ್ಮಯ್ಯ
ದಯವೆ ಭಕ್ತಿಗೆ ಬೀಜ, ಭಕ್ತಿಯೆ ಮುಕ್ತಿಗೆ ಬೀಜ. ಮುಕ್ತಿಯೆ ಸತ್ಯಕ್ಕೆ ಬೀಜ, ಸತ್ಯವೆ ಫಲಕ್ಕೆ ಬೀಜ. ಫಲವೆ ಭವಕ್ಕೆ ಬೀಜ. ಇಂತೀ ಭೇದವ ಭೇದಿಸಿ ಶ್ರುತಿಸ್ಮøತಿತತ್ವಂಗಳಿಂದ ಬೇಡಿದವರಿಗೆ ಬಯಕೆಯ ಕೊಟ್ಟು, ಬೇಡದವರಿಗೆ ನಿಜವನಿತ್ತು, ಲೇಸು ಕಷ್ಟವೆಂಬುದ ಸಂಪಾದಿಸದೆ, ಉಭಯದ ತೆರನ ಸಂದನರಿದಿಪ್ಪ ಲಿಂಗಾಂಗಿಗೆ ಆತನಂಗಕ್ಕಿನ್ನಾವುದು ಸರಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಒಡೆದ ಹಂಚು ಮರಳಿ ಮಡಕೆಯಾಗಬಲ್ಲುದೆ ಕೆಟ್ಟ ವ್ರತಗೇಡಿ ಭಕ್ತನಾಗಬಲ್ಲನೆ ಬಾಳೆಗೆ ಫಲವೆ ಕಡೆ, ಚೇಳಿಗೆ ಗರ್ಭವೆ ಕಡೆ. ಕೂಳು ಮಾರೆಡೆಯುಂಟು, ಸೀರೆ ಮಾರೆಡೆಯುಂಟು, ಭಕ್ತಿ ಮಾರೆಡೆಯುಂಟೆ, ಕೂಡಲಸಂಗಮದೇವಾ
--------------
ಬಸವಣ್ಣ
-->