ಅಥವಾ

ಒಟ್ಟು 8 ಕಡೆಗಳಲ್ಲಿ , 3 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಗಳ ಮುಂದಣ ಬಯಲಿನೊಳಗೊಂದು ಪ್ರಕಾಶಾನ್ವಿತವಾದ ಮಹಾಚೋದ್ಯತರವಾದ ಗಗನಕೋಶವುಂಟು. ಅಲ್ಲೊಂದು ದಿವ್ಯತರವಾದ ಕಮಲವುಂಟು. ಆ ಕಮಲದ ಮಧ್ಯದಲ್ಲಿ ಆಣವತ್ರಯಾನ್ವಿತವಾದ ಮಹತ್ಕರ್ಣಿಕೆಯುಂಟು. ಮತ್ತದರಗ್ರದಂತರ್ವರ್ಣತ್ರಯಂಗಳೊಳಗೆ ನೀಲವಿದ್ರುಮರತ್ನ ಚಂದ್ರಪ್ರಕಾಶ ದಿವ್ಯಸಿಂಹಾಸನದ ಮೇಲೆ ಬೆಳಗುತ್ತಿರ್ಪ ಶಿವಲಿಂಗವನನುಸಂಧಾನಿಸಿ ಪೂಜಿಸುವ ಕ್ರಮವೆಂತೆಂದೊಡೆ : ಶ್ರೀಗುರುಕರುಣಕಟಾಕ್ಷವೀಕ್ಷಣಬಲದಿಂದ ಕಲ್ಮಷ ಕಂಟಕಾದಿಗಳಂ ತೊಲಗಿಸಿ, ಶಿವಲೋಕದ ಮಾರ್ಗವಿಡಿದು ಹೋಗಿ, ಆ ಶಿವಲೋಕದ ಸಮೀಪಕ್ಕೆ ಸೇರಿ, ಪರೀಕ್ಷೆಯ ಮಾಡಿ ನೋಡಲು, ಆ ಶಿವಲೋಕದ ಬಹಿರಾವರಣದಲ್ಲಿ ಮೂವತ್ತೆರಡು ಬಹಿರ್ಮುಖರು ಸಂಸ್ಥಿತರಾದ ವಿವರ : ಈಶಾನ್ಯ ಪರ್ಜನ್ಯ ಜಯಂತ ಮಹೇಂದ್ರ ಆದಿತ್ಯ ಸತ್ಯ ಭೃಂಷ ಅಂತರಿಕ್ಷ ಅಗ್ನಿ ವಿಮಾಷ ಥತ ಗ್ರಹಕ್ಷತ ಯಮ ಗಂಧರ್ವ ಭೃಂಗುರಾಜ ಮೃಗ ನಿರುತಿ ದೌವಾರಿಕ ಸುಗ್ರೀವ ಪುಷ್ಪದತ್ತ ವರುಣ ಅಸುರ ಶೇಷ ಋಭು ವಾಯು ನಾಗ ಮುಖ ಪಲಾಟಕ ಸೋಮ ಭೂತ ಅದಿತ ದಿತರೆಂಬುವರೇ ಮೂತ್ತೆರಡು ವಸ್ತುದೇವತೆಯರ ಒಡಂಬಡಿಸಿಕೊಂಡು ಅವರಿಂದೊಳಗಿರ್ಪ ಸೂರ್ಯವೀಥಿಯೆನಿಸುವ ತೃತೀಯವರ್ಣದ ಮೂವತ್ತೆರಡುದಳದಲ್ಲಿ ಎಂಟು ಶೂನ್ಯದಳಗಳನುಳಿದು, ಮಿಕ್ಕ ಇಪ್ಪತ್ತುನಾಲ್ಕುದಳಗಳಲ್ಲಿರುವ ಇಪ್ಪತ್ತುನಾಲ್ಕು ವಿಕಲಾಕ್ಷರಂಗಳೇ ಅಷ್ಟವಿಧೇಶ್ವರರು, ಅಷ್ಟದಿಕ್ಪಾಲಕರು, ಅಷ್ಟವಸುಗಳಾದ ವಿವರ : ಕ ಕಾರವೆ ಅನಂತ, ಖ ಕಾರವೆ ಇಂದ್ರ, ಗಕಾರವೆ ಧರ, ಘಕಾರವೆ ಸೂಕ್ಷ್ಮ , ಓಂಕಾರವೆ ಅಗ್ನಿ, ಚಕಾರವೆ ಧ್ರುವ, ಛಕಾರವೆ ಶಿವೋತ್ತಮ, ಜಕಾರವೆ ಯಮ, ಝಕಾರವೆ ಸೋಮ, ಞಕಾರವೆ ಏಕನೇತ್ರ, ಟಕಾರವೆ ನಿರುತಿ, ಠಕಾರವೆ ಆಪು, ಡಕಾರವೆ ರುದ್ರ, ಢಕಾರವೆ ವರುಣ, ಣಕಾರವೆ ಅನಿಲ, ತಕಾರವೆ ತ್ರಿಮೂರ್ತಿ, ಥಕಾರವೆ ವಾಯು, ದಕಾರವೆ ಅನಲ, ಧಕಾರವೆ ಶ್ರೀಕಂಠ, ನಕಾರವೆ ಕುಬೇರ, ಪಕಾರವೆ ಪ್ರತ್ಯೂಷ, ಫಕಾರವೆ ಶಿಖಂಡಿ, ಬಕಾರವೆ ಈಶಾನ, ಬಕಾರವೆ ಪ್ರಭಾಸ. ಇಂತೀ [ಅಷ್ಟ] ವಿಧೇಶ್ವರಾದಿಗಳಿಗಬ್ಥಿವಂದಿಸಿ, ಅದರಿಂದೊಳಗಿರ್ಪ ಚಂದ್ರವೀಥಿಯೆನಿಪ ದ್ವಿತೀಯಾವರಣದ ಷೋಡಶದಳದಲ್ಲಿರುವ ಷೋಡಶ ಸ್ವರಾಕ್ಷರಂಗಳೆ ಷೋಡಷರುದ್ರರಾದ ವಿವರ : ಅಕಾರವೆ ಉಮೇಶ್ವರ, ಆಕಾರವೆ ಭವ, ಇಕಾರವೆ ಚಂಡೇಶ್ವರ, ಈಕಾರವೆ ಶರ್ವ, ಉಕಾರವೆ ನಂದಿಕೇಶ್ವರ, ಊಕಾರವೆ ರುದ್ರ, ಋಕಾರವೆ ಮಹಾಕಾಳ, Iೂಕಾರವೆ ಉಗ್ರ, ಲೃಕಾರವೆ ಭೃಂಗಿರೀಟಿ, ಲೂೃಕಾರವೆ ಬ್ಥೀಮ, ಏಕಾರವೆ ಗಣೇಶ್ವರ, ಐಕಾರವೆ ಈಶಾನ, ಓಕಾರವೆ ವೃಷಭೇಶ್ವರ, ಔಕಾರವೆ ಪಶುಪತಿ, ಅಂ ಎಂಬುದೆ ಷಣ್ಮುಖಿ, ಅಃ ಎಂಬುದೆ ಮಹಾದೇವನು. ಇಂತಪ್ಪ ಷೋಡಶರುದ್ರರಿಗೆ ಸಾಷ್ಟಾಂಗವೆರಗಿ ಬಿನ್ನವಿಸಿಕೊಂಡು, ಅದರಿಂದೊಳಗಿರ್ಪ ಅಗ್ನಿವೀಥಿಯೆನಿಸುವ ಪ್ರಥಮಾವರಣ ಅಷ್ಟದಳಗಳಲ್ಲಿರ್ಪ ಅಷ್ಟವ್ಯಾಪಕಾಕ್ಷರಂಗಳೆ ಅಷ್ಟಶಕ್ತಿಯರಾದ ವಿವರ : ಸಕಾರವೆ ಉಮೆ, ಷಕಾರವೆ ಜ್ಯೇಷ್ಠೆ, ಶಕಾರವೆ ರೌದ್ರೆ, ವಕಾರವೆ ಕಾಳೆ, ಲಕಾರವೆ ಬಾಲೆ, ರಕಾರವೆ ಬಲಪ್ರಮಥಿನಿ, ಯಕಾರವೆ ಸರ್ವಭೂತದಮನೆ, ಮಕಾರವೆ ಮನೋನ್ಮನಿ. ಇಂತಪ್ಪ ಶಿವಶಕ್ತಿಯರ ಪಾದಪದ್ಮಂಗಳಿಗೆ ಸಾಷ್ಟಾಂಗವೆರಗಿ, ಪೊಡಮಟ್ಟು ಅದರಿಂದೊಳಗಿರ್ಪ ಅತಿರಹಸ್ಯವಾದ ಮೂವತ್ತೆರಡು ಕ್ಲೇಶಂಗಳಿಗಾಶ್ರಯವಾದ ಶಾಂತಿಬಿಂದುಮಯವಾದ ಅಂತರ್ಮಂಡಲದ ಚತುರ್ದಳದಲ್ಲಿರುವ ಚತುರಕ್ಷರಂಗಳೇ ಚತುಃಶಕ್ತಿಯರಾದ ವಿವರ : ಸಂ ಎಂಬುದೆ ಅಂಬಿಕೆ, ಅಂ ಎಂಬುದೆ ಗಣಾನಿ, ಡಿಂ ಎಂಬುದೆ ಈಶ್ವರಿ, ಕ್ಷುಂ ಎಂಬುದೇ ಉಮೆ. ಇಂತಪ್ಪ ಪರಶಕ್ತಿಯರ ಪಾದಾರವಿಂದವನು ಅನೇಕ ಪ್ರಕಾರದಿಂ ಸ್ತುತಿಮಾಡಿ ಬೇಡಿಕೊಂಡು ಅವರಪ್ಪಣೆವಿಡಿದು ಒಳಪೊಕ್ಕು, ಅಲ್ಲಿ ಕದಂಬಗೋಳಕಾಕಾರ ಸ್ಫುರಶಕ್ತಿದೀದ್ಥಿಕಾಯೆಂದುಂಟಾಗಿ ರಹಸ್ಯಕ್ಕೆ ರಹಸ್ಯವಾದ ಷಡಧ್ವಜನ್ಮಭೂಮಿಯಾದ ಶಕ್ತಿಶಿರೋಗ್ರದಲ್ಲಿ ಪಂಚಾಕಾಶ ಷಟ್ತಾರಕ ತ್ರಿವಿಧಲಿಂಗಾಂಗಗಳೆ ಕಕಾರವಾದ ಪರಬ್ರಹ್ಮದ ನೆಲೆಯನರಿಯುವುದೇ ಮುದ್ವೀರಪ್ರಿಯ ಸಂಗಮೇಶ್ವರನಲ್ಲಿ ಬೆರೆವಂಥ ನಿಜಯೋಗ ಕಾಣಿರೊ.
--------------
ಮುದ್ವೀರ ಸ್ವಾಮಿ
ಇನ್ನುಂ, ಸೋವರಿಜಮಾದಾಗಸದ ಮಂಡಲತ್ರಯದ, ತದ್ಗಗನ ಧೂಮವರ್ಣದ ಷೋಡಶ ಸ್ವರಾನ್ವಿತದ, ಪದಿನಾರೆಸಳ ನಿ[ೀ]ರಲ ಕರ್ಣಿಕೆಯ, ಸೂಕ್ಷ ್ಮರಂಧ್ರಗತ ಪ್ರಣವದ ದರ್ಪಣಾಕೃತಿಯಾದ, ಯಕಾರವೆ ನಿನ್ನೀಶಾನ ಸ್ವರೂಪಮಾದುದಯ್ಯಾ, ಪರಮ ಶಿವಲಿಂಗ ಪ್ರಮಥಗಣಾಂತರಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಂ, ಸಕೇಸರ ಕರ್ಣಿಕಾಕ್ಷರ ನಿರೂಪಣಾನಂತರದಲ್ಲಿ- ಯಗ್ನಿಮಂಡಲದ ಪೂರ್ವಾದೀಶಾನಾಂತವಾಗಿ ನ್ಯಸ್ತವಾದ ಸಕಾರಾದಿ ಮಕಾರಾಂತವಾದಷ್ಟದಳಾಕ್ಷರಂಗಳೊಳಗೆ ಮೊದಲ ಸಕಾರವೇ ಶಿವಮಂತ್ರೋದ್ಧರಣಕ್ಕೆ ಕಾರಣವಾದ ಶುಕ್ಲಧಾತುವೆಂದು ಪೆಸರುನುಳ್ಳದು. ಮತ್ತಂ ಸ್ಥಿತಿಮಾರ್ಗದಿಂ ಶಿವಮಂತ್ರೋದ್ಧಾರಣಕ್ಕೆರಡನೆಯದಾದ ಷಕಾರವೆ ಸೂರ್ಯಪರ್ಯಾಯನಾಮದಿಂ ಮಜ್ಜಾಧಾತುವೆಸರನುಳ್ಳದು. ಮತ್ತಂ, ಮೂರನೆಯ ಯಥಾಕ್ರಮದ ಶಕಾರವೆ ಶ್ರೀಪರ್ಯಾಯ ನಾಮದಿಂದಸ್ಥಿ ಧಾತುವೆಸರನುಳ್ಳುದು. ಬಳಿಕ್ಕಂ, ನಾಲ್ಕನೆಯ ಕ್ರಮದ ವಕಾರವೆ ಸವರುಣಜಲ ಪರ್ಯಾಯನಾಮದಿಂದೆ, ಮೇಧೋಧಾತುವೆಸರನುಳ್ಳುದು. ಬಳಿಕ್ಕಂ, ಮೊದಲಂತೈದನೆಯದಾದ ಲಕಾರವೆ ಇಂದ್ರಿಯಬೀಜವಾಗಿ ಪೃಥ್ವಿಪರ್ಯಾಯನಾಮದಿಂ ಮಾಂಸಧಾತುವೆಸರನುಳ್ಳುದು. ಮರಲ್ದುಂ, ಪೂರ್ವದಂತಾರನೆಯ ಕ್ರೋಧಾಭಿಧರಕಾರವೆ- ಯಗ್ನಿ ಪರ್ಯಾಯನಾಮದಿಂ ರಕ್ತ ಧಾತುವೆಸರನುಳ್ಳುದು. ಮತ್ತೆಯುಂ, ಮುನ್ನಿನಂತೇಳನೆಯ ಯಕಾರವೆ ವಾಯುಬೀಜವೆನಿಸಿ ವಾಯುಪರ್ಯಾಯನಾಮದಿಂ ಸ್ನಾಯುಧಾತುವೆಸರನುಳ್ಳುದು. ಮೇಣಾದಿಯಂತೆಂಟನೆಯ ಮಕಾರವೆ ಕಾಲಮೃತ್ಯುವೆನಿಸಿ ಮೃತ್ಯುಕಾರಕವೆಂಬ ನಾಮವನುಳ್ಳುದಿಂತು ಸ್ಥಿತಿವರ್ಗದ ತ್ರಿಭೇದವನುಳ್ಳಗ್ನಿಮಂಡಲದ ನಿಲುಕಡೆಯಂ ನಿರೂಪಿಸಿದೆಯಯ್ಯಾ, ಪರಮ ಶಿವಲಿಂಗ ಸುರಗಂಗೋತ್ತಮಾಂಗ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಶರಣಸ್ಥಲ ನೋಡುವಡೆ ಬಹು ಸುಲಭ ನೋಡಯ್ಯಾ. ಶರಣನು ್ಕಳಿದು ್ಕಳಿದು ಆಚರಿಪನು, ಮರೆದು ಮರೆದು ಆಚರಿಸನು. ಜ್ಞಾನಂದ ಭೇದವಲ್ಲದೆ, ದೇಹಂದ ಭೇದವಿಲ್ಲ ನೋಡಯ್ಯಾ. ಶರಣ ತನ್ನ ದೇಹವನೆ ಹಕಾರ ಪ್ರಣವ ಮಾಡಿಟ್ಟ ; ನರನು ತನ್ನ ದೇಹವನೆ ದೇಹವೆಂದು ಜಡವೆಂದು ಪ್ರಳಯಕ್ಕೊಳಗು ಮಾಡಿಟ್ಟ. ಶರಣನ ದೇಹವೆಲ್ಲ ಪಂಚಾಕ್ಷರಮಯ ನೋಡಾ: ನಕಾರವೆ ಅಸ್ಥಿ, ಮಕಾರವೆ ಮಾಂಸ, ಶಿಕಾರವೆ ತ್ವಕ್ಕು ವಕಾರವೆ ನಾಡಿ, ಯಕಾರವೆ ರೋಮ. ನಕಾರವೆ ರಸ, ಮಕಾರವೆ ರುಧಿರ, ಶಿಕಾರವೆ ಶುಕ್ಲ, ವಕಾರವೆ ಪಿತ್ತ, ಯಕಾರವೆ ಶ್ಲೇಷ್ಮ. ನಕಾರವೆ ಕ್ಷುಧೆ, ಮಕಾರವೆ ತೃಷ್ಣೆ, ಶಿಕಾರವೆ ನಿದ್ರೆ, ವಕಾರವೆ ಆಲಸ್ಯ, ಯಕಾರವೆ ಸಂಗ. ನಕಾರವೆ ಪರಿವ, ಮಕಾರವೆ ಪಾರುವ, ಶಿಕಾರವೆ ಸುಳಿವ, ವಕಾರವೆ ಹಬ್ಬುವ, ಯಕಾರವೆ ಅಗಲುವ ್ಲಗುಣಂಗಳ್ವು. ನಕಾರವೆ ರಾಗ, ಮಕಾರವೆ ದ್ವೇಷ, ಶಿಕಾರವೆ ಭಯ, ವಕಾರವ ಲಜ್ಜೆ, ಯಕಾರವೆ ಮೋಹ. ಕ್ಲಂ ಕ್ಲೀಂ ಎಂಬುದ ಎಚ್ಚು, ಕಠಿಣ ಮೃದುವಿಗೆ ಇಟ್ಟ ನೋಡಾ. ಕ್ಲಂ ಕ್ಲೀಂ ಎಂಬುದ ಉಷ್ಣಚಲನೆಗೆ ಸೇರಿಸಿದ ನೋಡಾ. ನಮಃ ಶಿವಾಯ ಎಂಬುದ ಗಂಧ ರಸ ರೂಪು ಸ್ಪರ್ಶ ಶಬ್ದಕ್ಕೆ ಸಂಬಂಧಿಸಿದ ನೋಡಾ. ನಮಃ ಶಿವಾಯ ಎಂಬುದ ಪಾಯು ಗುಹ್ಯ ಪಾದ ಪಾಣಿ ವಾಕ್ಕಿಗೆ ಸಂಬಂಧಿಸಿದ ನೋಡಾ. ನಮಃ ಶಿವಾಯ ಎಂಬುದ ನಾಸಿಕ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರಕ್ಕೆ ಸಂಬಂಧಿಸಿದ ನೋಡಾ. ನಮಃ ಶಿವಾಯ ಎಂಬುದ ಪ್ರಾಣ ಅಪಾನ ವ್ಯಾನ ಉದಾನ ಸಮಾನಕ್ಕೆ ಸಂಬಂಧಿಸಿದ ನೋಡಾ. ನಮಃ ಶಿವಾಯ ಎಂಬುದ ಚಿತ್ತ ಬ್ಧು ಅಹಂಕಾರ ಮನ ಜ್ಞಾನಕ್ಕೆ ಸಂಬಂಧಿಸಿದ ನೋಡಾ. ಈ ರ್ಕೀಯಿಂದರಿದ ಶಿವತತ್ತ್ವ ತಾನಾಗಿ ನಿಂದ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
-->