ಅಥವಾ

ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಶವನಲ್ಲದೆ ಅತಃಪರದೈವವಿಲ್ಲೆಂದು ವೇದವ್ಯಾಸಮುನಿ ಭಂಗಬಟ್ಟುದನರಿಯಿರೆ ! `ಅಹಂ ಸರ್ವಜಗತ್‍ಕರ್ತಾ ಮಮ ಕರ್ತಾ ಮಹೇಶ್ವರಃ ಎಂದು ವಿಷ್ಣು ಹೇಳಿದ ವಚನವ ಮರೆದಿರಲ್ಲಾ ! ಕೂಡಲಸಂಗಮದೇವನು ದಕ್ಷನ ಯಜ್ಞವ ಕೆಡಿಸಿದುದ ಮರೆದಿರಲ್ಲಾ !
--------------
ಬಸವಣ್ಣ
ಕಾಮದಹನವ ಮಾಡಿದನು, ದಕ್ಷನ ಯಜ್ಞವ ಕೆಡಿಸಿದನು, ಒಳ್ಳೆಯ ತ್ರಿಪುರವನುರುಹಿದನು, ಹಾಳಾಹಳವನೊಮ್ಮೆ ಧರಿಸಿದನು, ನಮ್ಮ ಕೂಡಲಸಂಗಮದೇವನು.
--------------
ಬಸವಣ್ಣ
ಪಂಚಾಕ್ಷರಮಂತ್ರದಿಂದ ಅಜಗಣ್ಣ ತಂದೆಗಳಿಗೆ ಆರೂಢಪದವಾಯಿತು. ಪಂಚಾಕ್ಷರಮಂತ್ರದಿಂದ ಶಿವಜಾತಯ್ಯನ ಶಿಷ್ಯ ಮಂತ್ರಜಾತಯ್ಯ ಮಂತ್ರದಲ್ಲಿ ಬಯಲಾದನು. ಪಂಚಾಕ್ಷರಮಂತ್ರದಿಂದ ಸಾನಂದಮುನಿಗಣೇಶ್ವರನು ಯಮಪುರವ ಹಾಳುಮಾಡಿದ. ಪಂಚಾಕ್ಷರಮಂತ್ರದಿಂದ ವೀರಭದ್ರನು ದಕ್ಷಬ್ರಹ್ಮನ ತಲೆಹೊಡೆದು ಯಜ್ಞವ ಕೆಡಿಸಿದ. ಇಂತಪ್ಪ ಶ್ರುತಿಪ್ರಮಾಣ ವಾಕ್ಯಗಳಿಂದ ಪಂಚಾಕ್ಷರ ಮಹತ್ವವ ಕೇಳಿ ಜೀವಾತ್ಮರು ನೆನೆನೆನೆದು ಭವಕ್ಕೆ ಹೇಳಿದರು. ನಾನು ಪಂಚಾಕ್ಷರವ ನೆನೆನೆದು ಭವಮಾಲೆಯ ಹರಿದು ಮಂತ್ರದಲ್ಲಿ ಲಯವಾದೆನಯ್ಯಾ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->