ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತಂಗೆ ಹೆಣ್ಣುಬೇಡ, ಹೊನ್ನುಬೇಡ, ಮಣ್ಣುಬೇಡವೆಂದು ಹೇಳಿ, ತಾ ಮುಟ್ಟುವನ್ನಬರ ಆ ಬೋಧೆಯ ಹುಸಿಯೆಂದ. ತಾ ಮುಟ್ಟದೆ ತನ್ನ ಮುಟ್ಟಿಪ್ಪ ಭಕ್ತನ ತಟ್ಟದೆ, ಕರ್ಮಕ್ಕೆ ಕರ್ಮವನಿತ್ತು ತಾ ವರ್ಮಿಗನಾಗಬಲ್ಲಡೆ, ಹೊಳೆಯಲ್ಲಿ ಹಾಕಿದ ಸೋರೆಯಂತೆ, ಅನಿಲ ಕೊಂಡೊಯ್ದ ಎಲೆಯಂತೆ, ಯಾತಕ್ಕೂ ಹೊರಗಾಗಿ ಜಗದಾಸೆಯಿಲ್ಲದಿಪ್ಪ ವೇಷಕ್ಕೆ ಒಳಗಲ್ಲ. ಆತ ಜಗದೀಶನೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಯ್ಯಾ, ನಿನ್ನನು ಕಾಯವಿಡಿದು ಕಂಡು ಕೂಡೇನೆಂದರೆ ಕ್ರಿಯಾಗಮ್ಯ ಕಾಣಾ. ಅಯ್ಯಾ, ನಿನ್ನನು ಮನವಿಡಿದು ಕಂಡು ಕೂಡೇನೆಂದರೆ ಜ್ಞಾನಗಮ್ಯ ಕಾಣಾ. ಅಯ್ಯಾ, ನಿನ್ನನು ಭಾವವಿಡಿದು ಕಂಡು ಕೂಡೇನೆಂದರೆ ಭಾವಗಮ್ಯ ಕಾಣಾ. ಇವು ಯಾತಕ್ಕೂ ಸಿಕ್ಕಬಾರದಿರುವ ಶ್ರುತಿಗುರುಸ್ವಾನುಭಾವದಿಂದರಿದು ಕಾಯ ಮನ ಭಾವವನರಿಯದೆ ಕಂಡು ಕೂಡಿ ಅಗಲಿಕೆಯನರಿಯದೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ಪರಮಸುಖಿಯಾಗಿರ್ದೆನು.
--------------
ದೇಶಿಕೇಂದ್ರ ಸಂಗನಬಸವಯ್ಯ
-->