ಅಥವಾ

ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತತ್ವಭಕ್ತಿ, ತತ್ವಮುಕ್ತಿ, ತತ್ವ ಉತ್ಪತ್ಯದ ತನು ಸಾರಾಯ ತತ್ವವೃಕ್ಷದಿಂದ ಪುಟ್ಟಿದವು. ಎಂಬತ್ತು ನಾಲ್ಕು ಲಕ್ಷ ಸಂಕಲ್ಪವೆಲ್ಲ ತತ್ವಾದಿಗಳು. ಯಾತಕ್ಕೆ ಭೇದವ ಮಾಳ್ಪಿರಯ್ಯಾ ? ಪೃಥ್ವಿ ಪೃಥ್ವಿಯ ಕೂಡಿತು ಅಪ್ಪು ಅಪ್ಪುವ ಕೂಡಿತು ವಾಯು ವಾಯುವ ಕೂಡಿತು ಆಕಾಶ ಆಕಾಶದೊಳು ಸಹಕಾರ್ಯವಾಯಿತು. ಆ ಭಕ್ತನ ವಿಭೇದವಿಲ್ಲದ ಕಾರಣದಿಂದ ಶರೀರ ಭಿನ್ನವಾಗದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಕ್ರಿಯಾಘನಗುರುವಿನಿಂದೊಗೆದು ಪಂಚಾಚಾರಸ್ವರೂಪವನು ಕರ ಮನ ಭಾವದಲ್ಲಿ ಧರಿಸಿ, ಕ್ರಿಯಾಚಾರ, ಜ್ಞಾನಾಚಾರ, ಭಾವಾಚಾರಮಾರ್ಗವಿಡಿಯದುಳಿದು ಸ್ಥೂಲತನುವಿನಲ್ಲಿ ಅಣವಮಲಸಂಗ ಹಿಂಗದೆ, ನಾನು ಶುದ್ಧಪ್ರಸಾದಿಯೆಂದು ಸೂಕ್ಷ್ಮ ತನುವಿನಲ್ಲಿ ಮಾಯಾಮಲಯೋಗ ಹಿಂಗದೆ, ನಾನು ಸಿದ್ಧಪ್ರಸಾದಿಯೆಂದು, ಕಾರಣ ತನುವಿನಲ್ಲಿ ಕಾರ್ಮಿಕಮಲಸಂಬಂಧ ಹಿಂಗದೆ, ನಾನು ಪ್ರಸಿದ್ಧಪ್ರಸಾದಿಯೆಂದು ನುಡಿಯುತಿಪ್ಪರಲ್ಲ! ನುಡಿವ ನಾಲಿಗೆ, ನುಡಿಸುವ ಮನ, ಎಚ್ಚರಿಸುವ ಅರಿವು, ಇವು ಯಾತಕ್ಕೆ ಬಾತೆಯಯ್ಯಾ? ಇವು ಹಿಡಿದು ನಡೆವ ಜೀವನಿಗೆ ನಿರಿಯಾಮಾರ್ಗ ತಪ್ಪುವ ಬಗೆಯೆಂತು? ನಿರಂತರದುಃಖಿಗಳು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಖಂಡ ಜ್ಞಾನದೊಳಡಗಿರ್ದ ಸರ್ವಶೂನ್ಯಂಗೆ ಭೇದವಮಾಡಿ ನುಡಿವ ಮಾಯೆಯೊಳಗಿಪ್ಪ ಮನುಜರ ವಾಕ್ಪಟುತ್ವವಂತಿರಲಿ, ಪ್ರಯೋಜನವಿಲ್ಲದ ಪ್ರಯೋಜನ ಯಾತಕ್ಕೆ ಪ್ರಯೋಜನ ? ಶೋಭನಮುಂದೆ ಬೊಗಳುವ ಶುನಕನ ಶಬ್ದವನರಿವರಾರು ? ಆ ಶರಣನೆಂದಿರ್ದಡು ಅಂತಿಲ್ಲ, ರಸವಿಲ್ಲದ ನಾಲಿಗೆಯಂತೆ ರೂಪಿಲ್ಲದ ನೇತ್ರದಂತೆ ಗಂಧವಿಲ್ಲದ ಘ್ರಾಣದಂತೆ ಇರ್ದ ಕಾಣಾ ಸಕಲರಲ್ಲಿಯೂ ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
-->